ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ಘಟಕದ ವತಿಯಿಂದ ಲಕ್ಷ್ಮೇಶ್ವರ ಘಟಕದ ಸಹಯೋಗದಲ್ಲಿ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಅನ್ನ ಸಂತರ್ಪಣೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಕಾರ್ಯಕ್ರಮವನ್ನ ಆಯೋಜಿಸಿದ್ದರು.
ದಲಿತ ಸಂಘರ್ಷ ಸಮಿತಿ ತಾಲೂಕ ಘಟಕದ ಅಧ್ಯಕ್ಷ ಸುರೇಶ ನಂದೆಣ್ಣವರ ಜ್ಯೋತಿ ಬೆಳಗಿಸುವುದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಭಾರತ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾ ಮಾನವತಾವಾದಿ ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಧಾರವಾಡ | ಅಂಬೇಡ್ಕರ್ ಎಲ್ಲರ ಏಳಿಗೆಗಾಗಿ ದುಡಿದ ಮಹಾ ಮಾನವತಾವಾದಿ: ನ್ಯಾ.ನಾಗರಾಜ್ ಕನಕಣಿ
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕ ಸವಿತಾ ಆದಿ, ಸಿಬ್ಬಂದಿಗಳಾದ ಅಂಬರೀಷ್ ಗುಡಗುಂಟಿ, ಲಕ್ಷ್ಮಣ ನರ್ತೀ, ಬಸವರಾಜ ಕರಬಸಪ್ಪನವರ, ಶ್ರೀಕಾಂತ ಹಳ್ಳಿಕೇರಿ, ರಾಜು ಕೆಂಗರ, ಚಂದ್ರು ಹೊಸಮನಿ, ಮುತ್ತಣ್ಣ ನಡವಿನಕೇರಿ, ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಹನಮಂತ ಮ್ಯಾಟಣ್ಣವರವರ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ: ಮಲ್ಲೇಶ ಮಣ್ಣಮ್ಮನವರ