ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಡಿಲೇಡ್ ಡೇ ನೈಟ್ 2ನೇ ಟೆಸ್ಟ್‌ನ ಎರಡನೇ ದಿನದ ಪಂದ್ಯವು ಅಂತ್ಯವಾಗಿದೆ. ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ತತ್ತರಿಸಿದ ಭಾರತವು 29 ರನ್‌ಗಳ ಹಿನ್ನಡೆಯನ್ನು ಕಂಡಿದೆ.
ಎರಡನೇ ದಿನವೂ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ. ಮೊದಲ ದಿನದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತವು ಆಸ್ಟ್ರೇಲಿಯಾವನ್ನು 337 ರನ್‌ಗಳಿಗೆ ಆಲೌಟ್ ಮಾಡಿತ್ತು.
ಇದನ್ನು ಓದಿದ್ದೀರಾ? ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ರಾಹುಲ್ ಆಟಕ್ಕೆ ಹತ್ತು ವರ್ಷ ಮತ್ತು ಪಿಂಕ್ ಬಾಲ್ ಟೆಸ್ಟ್
ಭಾರತ ತಂಡ ಉತ್ತಮ ಬೌಲಿಂಗ್ ಮಾಡಿದರೂ ಕೂಡಾ ಆಸ್ಟ್ರೇಲಿಯಾ 157 ರನ್‌ಗಳ ಮುನ್ನಡೆಯನ್ನು ಸಾಧಿಸಿದರು. ಅದಾದ ಬಳಿಕ ಭಾರತದ ದಾಂಡಿಗರು ತತ್ತರಿಸುವಂತೆ ಆಸ್ಟ್ರೇಲಿಯಾದ ವೇಗಿಗಳು ಬೌಲಿಂಗ್ ಮಾಡಿದರು.
ಶನಿವಾರದ ಅಂತ್ಯದ ವೇಳೆಗೆ ಭಾರತಕ್ಕೆ 5 ವಿಕೆಟ್‌ಗೆ 128 ಅಷ್ಟೇ ಪಡೆಯಲು ಸಾಧ್ಯವಾಯಿತು. ಪಂದ್ಯದ ಮುಕ್ತಾಯದ ವೇಳೆಗೆ, ಭಾರತವು ಆಸ್ಟ್ರೇಲಿಯಾಕ್ಕಿಂತ 29 ರನ್‌ಗಳ ಹಿನ್ನಡೆ ಕಂಡಿದೆ. ರಿಷಬ್ ಪಂತ್ ಮತ್ತು ನಿತೀಶ್ ರೆಡ್ಡಿ ಕ್ರೀಸ್‌ನಲ್ಲಿ ಉಳಿದಿದ್ದರು.
