ಗ್ರಾಮೀಣ ಭಾಗದ ಬಡವರು ಮತ್ತು ಮಹಿಳೆಯರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಧಾರವಾಡ ಜಿಲ್ಲಾದಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರು ವಿವಿಧ ಬೇಡಿಕೆಗಳನ್ನು ಹೇಳುತ್ತ ಗಂಡನ ಬಿಟ್ಟಿರುವ (ಅಧಿಕೃತ ವಿಚ್ಛೇಧನ ಸಿಗದಿರುವ), ಗಂಡ ಸತ್ತಿರುವ ಹಾಗೂ ಮದುವೆ ಆಗದೆ ಪ್ರತ್ಯೇಕವಾಗಿ ಒಂಟಿ ಜೀವನ ನಡೆಸುತ್ತಿರುವ ಒಂಟಿ ಮಹಿಳೆಯರಿಗೆ ವಿಶೇಷವಾಗಿ ಪ್ರತ್ಯೇಕ ರೇಷನ ಕಾರ್ಡ್ ನೀಡಬೇಕು ಎಂದರು.
ಅಪೌಷ್ಟಿಕತೆಯ ಪರಿಣಾಮ ದೇಶದಲ್ಲಿ ಮಕ್ಕಳು ಹಾಗೂ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಅತೀ ಅಗತ್ಯ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅದನ್ನು ಕೊಂಡಕೊಳ್ಳಲು ಆಗುತ್ತಿಲ್ಲ ಮತ್ತು ಸರಿಯಾಗಿ ಜೀವನ ನಡೆಸಲೂ ಕಷ್ಟವಾಗಿದೆ. ಆದ್ದರಿಂದ ಸರಕಾರ ರಾಗಿ, ಜೋಳ, ತೊಗರಿಬೆಳೆ ಹಾಗೂ ಅಡುಗೆ ಎಣ್ಣೆಯನ್ನು ನ್ಯಾಯಬೆಲೆ ಅಂಗಡಿಯ ಮೂಲಕ ವಿತರಿಸಬೇಕು. ಹಾಗೂ ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ರೇಷನ ಕಾರ್ಡ್ ದೊರೆಯುತ್ತಿಲ್ಲ. ನೈಜ ಬಡವರು ಈ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ತಕ್ಷಣ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಪಡಿತರ ಚೀಟಿ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಯತ್ನಾಳ್ ಅವರನ್ನು ಲಿಂಗಾಯತ ಧರ್ಮದ ಶಾಸಕ ಎಂದು ಕರೆಯಬಾರದು: ಸತ್ಯಕ್ಕ ಮಾತಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪರ ನಿಲುವು ಹೊಂದಿರುವದರಿಂದ ಈ ಎಲ್ಲ ಜ್ವಲಮತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ರಮಕೈಗೊಳ್ಳುತ್ತಾರೆ ಎಂದು ನಂಬಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
Name :suganda patil suganda patil aada nanu vasisali Mane illa mattu akki salta illa aada karana tavu namaga sahaya madabekendu kelikollutiddene. Place:sangameshwar. Taluk:kalaghatgi. District:Dharwad