ಕೆಲಸದಿಂದ ವಜಾ ಮಾಡಿದರೆಂದು ಮನನೊಂದು ಕಾರ್ಮಿಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಗೋಕುಲ ಗ್ರಾಮದಲ್ಲಿ ಶನಿವಾರ ನಡೆದಿದೆ.
56 ವರ್ಷದ ನಿಂಗನಗೌಡ ಗೌಡರ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಅವರು ಗೋಕುಲ ರಸ್ತೆಯ ಬಿಡಿಕೆ ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತಿದ್ದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಯತ್ನಾಳ್ ಪ್ರತಿಕೃತಿ ದಹಿಸಿ ಬಸವಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ನಿಂಗನಗೌಡ ಗೌಡರ ಸೇರಿದಂತೆ ಕೆಲವು ಕಾರ್ಮಿಕರನ್ನು ಗುಜರಾತ್‌ಗೆ ವರ್ಗಾವಣೆ ಮಾಡುವ ಸೂಚನೆ ತಿಳಿದ ಮೇಲೆ ವರ್ಗಾವಣೆ ವಿರೋಧಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಅದಕ್ಕೆ ಕಂಪನಿಯು ಕ್ಯಾರೇ ಎನ್ನದೆ ನಿಂಗನಗೌಡರಿಗೆ ವಜಾಪತ್ರವನ್ನು ನೀಡಿದ್ದಾರೆ. ಕೆಲಸ ಕಳೆದುಕೊಂಡು ಮನನೊಂದ ನಿಂಗನಗೌಡ ಗೋಕುಲದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೃತ ನಿಂಗಪ್ಪಗೌಡ ಮನೆಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.