ಅಂಬೇಡ್ಕರ್ ಅವರು ತಮ್ಮ ಪರಿಶ್ರಮ ಮತ್ತು ಪಾಂಡಿತ್ಯದಿಂದ ಕೇವಲ ದಲಿತರಿಗಲ್ಲದೆ ಸಮ ಸಮಾಜದ ನಿರ್ಮಾಣಕ್ಕಾಗಿ ಎಲ್ಲರಿಗೂ ಒಳಿತಾಗುವಂತಹ ಸಂವಿಧಾನ ರಚಿಸಿದ್ದಾರೆ. ಆದರೆ ಇಂದು ರಾಜಕೀಯ ಲಾಭಕ್ಕಾಗಿ ಅದರ ಮೌಲ್ಯಗಳು ಮರೆಯಾಗುವ ಆತಂಕವಿದೆ ಎಂದು ಪ್ರೊ ಮೇಟಿ ಮಲ್ಲಿಕಾರ್ಜುನ ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗದ ಮಿಲಿಂದ ಸಂಸ್ಥೆ ಮತ್ತು ಎಸ್‌ಟಿ/ಎಸ್‌ಟಿ ನೌಕರರ ಸಂಘದ ಆಶ್ರಯದಲ್ಲಿ ಡಿಸೆಂಬರ್ 6ರಂದು ನಡೆದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮತ್ತೋರ್ವ ಅತಿಥಿ ನಿವೃತ್ತ ಅಬಕಾರಿ ಜಿಲ್ಲಾಧಿಕಾರಿ ಬಿ ಡಿ ಸಾವಕ್ಕನವರ ಮಾತನಾಡಿ, “ತಳಸಮುದಾಯಗಳಲ್ಲಿ ಐಕ್ಯತೆ ಮತ್ತು ಒಗ್ಗಟ್ಟು ಮುಖ್ಯವಾಗಿದೆ. ಹಾಗಾಗಿ ಎಲ್ಲರೂ ಒಂದಾಗಬೇಕು, ಬಹುಜನರಾಗಿ ಅಂಬೇಡ್ಕರರ ಆಶಯಗಳತ್ತ ಸಾಗುವುದನ್ನು ಒಗ್ಗಾಟ್ಟಾಗಿ ಕಂಡುಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕರ್ತವ್ಯ ಲೋಪ : ಇಡಪನೂರು ಪಿಎಸ್‌ಐ ಅಮಾನತು
ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಅಣ್ಣಪ್ಪ ಆಯನೂರು ಕೋಟೆ ಅಧ್ಯಕ್ಷತೆ ವಹಿಸಿದ್ದರು, ಸಮಾರಂಭದಲ್ಲಿ ಟೆಲೆಕ್ಸ್ ರವಿಕುಮಾರ್, ನಿವೃತ್ತ ಪ್ರಿನ್ಸಿಪಾಲ ಪ್ರೊ ರಾಚಪ್ಪ, ಯುವವಕೀಲರಾದ ಮಂಜುನಾಥ್ ಮತ್ತು ನಿರಂಜನ್, ನಿವೃತ್ತ ಬ್ಯಾಂಕ್ ಅಧಿಕಾರಿ ಕುಂದೂರಪ್ಪನವರ, ಆದಿ ಜಾಂಬವ ಸಂಘದ ಶಿವಲಿಂಗಪ್ಪ ಮತ್ತು ಕೆಂಪರಾಮು, ಸಮಗಾರ ಸಮಾಜದ ಕೆ ಎನ್ ಅಶೋಕ್ ಕುಮಾರ್, ಚನ್ನವೀರಪ್ಪ ಗಾಮನಗಟ್ಟಿ, ಗೋವಿಂದ್ ನಾಯ್ಕ್, ಗಣೇಶ್, ರುದ್ರಪ್ಪ, ಶ್ರೀಕಲಾ ಸಂಸ್ಥೆಯ ಶ್ರೀ ನಟರಾಜ್, ಶಿಕ್ಷಕರು, ಈ ದಿನ.ಕಾಮ್ ರಾಘವೇಂದ್ರ, ಸೂರ್ಯ ಪ್ರಕಾಶ್, ಹಾಗೂ ಇತರ ಗಣ್ಯರು ಇದ್ದರು.