ಸಿರಿಯಾ ಬಂಡುಕೋರರು ಸರ್ಕಾರ ಪತನಗೊಂಡಿದೆ ಎಂದು ಘೋಷಿಸಿದ್ದಾರೆ. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕುಟುಂಬ ಸಮೇತ ದೇಶ ತೊರೆದಿದ್ದು ಈ ಮೂಲಕ ಸಿರಿಯಾದಲ್ಲಿ ಅಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯವಾಗಿದೆ.
ಡಮಾಸ್ಕಸ್ ದಿಗ್ವಿಜಯ ಎಂಬ ಹೆಸರಿನಲ್ಲಿ ಸಿರಿಯಾ ಸರ್ಕಾರ ವಿರುದ್ಧ ಬಂಡಾಯ ಎದ್ದಿರುವ ಗುಂಪು “ಈಗ ದೇಶ ಸ್ವತಂತ್ರವಾಗಿದೆ. ಎಲ್ಲ ನಾಗರಿಕರು, ಬಂಡಾಯ ಹೋರಾಟಗಾರರು ಸ್ವತಂತ್ರ ಸಿರಿಯಾವನ್ನು ರಕ್ಷಿಸಿಕೊಳ್ಳೋಣ” ಎಂದು ಕರೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಸಿರಿಯಾ ಅಧ್ಯಕ್ಷ ಪ್ರಯಾಣಿಸುತ್ತಿದ್ದ ವಿಮಾನ ಪತನ ಶಂಕೆ; ಮೃತಪಟ್ಟಿರುವ ಸಾಧ್ಯತೆ?
ಪದಚ್ಯುತ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಕುಟುಂಬವು ಮಾಸ್ಕೋಗೆ ಪಲಾಯನಗೊಂಡಿದೆ. ಅವರಿಗೆ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ ಬಂಡುಕೋರರು ಸರ್ಕಾರ ಪತನವನ್ನು ಘೋಷಿಸಿದ್ದಾರೆ.
ಇನ್ನು ಅಸ್ಸಾದ್ ಮಾಸ್ಕಸ್‌ನಿಂದ ಪಲಾಯನ ಮಾಡಲು ಯತ್ನಿಸುವಾಗ ವಿಮಾನ ಪತನವಾಗಿದ್ದು ಅಸ್ಸಾದ್ ಅವರು ಬದುಕಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂಬ ವರದಿಯಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅಸ್ಸಾದ್ ಕುಟುಂಬ ಮಾಸ್ಕೋ ತಲುಪಿರುವುದಾಗಿ ರಷ್ಯಾ ಮಾಧ್ಯಮಗಳು ವರದಿ ಮಾಡಿದೆ.
WATCH⚡️
— Open Source Intel (@Osint613) December 8, 2024
Syrians entering and looting Assad’s palace.
Via @inside_IL_intel pic.twitter.com/7mLhGapmBY
“ಬಾತ್ ಆಳ್ವಿಕೆಯಡಿಯಲ್ಲಿ 50 ವರ್ಷಗಳ ದಬ್ಬಾಳಿಕೆ, 13 ವರ್ಷಗಳ ಅಪರಾಧಗಳು, ನಿರಂಕುಶ ಪ್ರಭುತ್ವದ ಬಳಿಕ ನಾವು ಇಂದು ಈ ಕರಾಳ ಅವಧಿಯ ಅಂತ್ಯ ಮತ್ತು ಸಿರಿಯಾದ ಹೊಸ ಯುಗದ ಆರಂಭವನ್ನು ಘೋಷಿಸುತ್ತೇವೆ” ಎಂದು ಬಂಡಾಯ ಬಣಗಳು ಟೆಲಿಗ್ರಾಮ್‌ನಲ್ಲಿ ಹೇಳಿವೆ.
