ದುಬೈ | ಬ್ಯಾರೀಸ್ ಚೇಂಬರ್ ಯುಎಇ ವತಿಯಿಂದ ಫೆಬ್ರವರಿ 9ರಂದು ಅದ್ದೂರಿಯ ಬ್ಯಾರಿ ಮೇಳ

Date:

Advertisements

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಸ್ ಯುಎಇ ನೇತೃತ್ವದಲ್ಲಿ ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ 2025ರ ಫೆಬ್ರವರಿ 9ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಅದ್ದೂರಿಯ ಬ್ಯಾರಿ ಮೇಳ ನಡೆಯಲಿದೆ.

ಇದರ ಅಂಗವಾಗಿ 8 ಡಿಸೆಂಬರ್ ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.

1002645127

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ ನೀಡಿದರು.

Advertisements

ಇದನ್ನು ಓದಿದ್ದೀರಾ? ದುಬೈನಲ್ಲಿದ್ದ ಭಟ್ಕಳದ ಹಿರಿಯ ಮುಸ್ಲಿಂ ನೇತಾರ ಡಾ.ಸಯ್ಯದ್ ಖಲೀಲ್‌ ನಿಧನ

ಬ್ಯಾರೀಸ್ ಚೇಂಬರ್ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡೂರ್ ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರದ ಇತಿಹಾಸದ ಬಗ್ಗೆ, ಬ್ಯಾರೀಸ್ ಚೇಂಬರ್‌ನ ಗುರಿ ಹಾಗೂ ಬ್ಯಾರಿ ಮೇಳದ ಉದ್ದೇಶದ ಬಗ್ಗೆ ಮಾತನಾಡಿದರು.

ದುಬೈ1

ಬ್ಯಾರಿ ಮೇಳದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ, ಭಾಗವಹಿಸಿಸುವ ಅತಿಥಿಗಳ ಬಗ್ಗೆ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಹಂಝ ಅಬ್ದುಲ್ ಖಾದರ್, ಮಹಮ್ಮದ್ ಅಲಿ ಉಚ್ಚಿಲ್, ಇಮ್ರಾನ್ ಎರ್ಮಾಳ್ ವಿವರಿಸಿದರು. ಉದ್ಯೋಗ ಮೇಳ, ದೊರಕಲಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮಹಮ್ಮದ್ ಮುಸ್ತಾಕ್ ಮಾಹಿತಿ ನೀಡಿದರು.

ಬ್ಯಾರಿ ಮೇಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿ ಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು, ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 60ಕ್ಕೂ ಹೆಚ್ಚಿನ ಮಳಿಗೆಗಳು ಇರಲಿವೆ.

ದುಬೈ2 1

ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಯುಎಇಯ ಪ್ರಮುಖ ಬ್ಯಾರಿ ಸಂಘಟನೆಗಳಾದ ಬಿ.ಸಿ.ಎಫ್, ಬಿ.ಡಬ್ಲ್ಯೂ.ಎಫ್, ಕೆ.ಸಿ.ಎಫ್, ಕೆ.ಐ.ಸಿ, ದಾರುಲ್ ಇರ್ಷಾದ್, ಡಿ.ಕೆ.ಎಸ್.ಸಿ, ಕೆ.ಎಂ.ಎ.ಎಸ್, ಹಿದಾಯ ಫೌಂಡೇಶನ್, ಕೆ.ಡಿ.ಸಿ, ಅಲ್ ಖಮರ್, ಎಸ್.ಯು.ಎ.ಸಿ, ಪ್ರವಾಸಿ ಕೂಟ ವಿಟ್ಲ, ಟಿ.ಓ.ಡಿ, ಕೆ.ಎ.ಎಫ್, ಕೆ.ಎಂ.ಎ.ಜೆ, ಎಂ.ಎಫ್.ಡಿ, ಎಸ್.ಕೆ.ಎಸ್.ಎಸ್.ಎಫ್ ಯುಎಇ, ದಾರುನ್ನೂರು, ದಾರುಸ್ಸಲಾಂ, ಶಂಶುಲ್ ಉಲಾಮ ಸೆಂಟರ್, ದಾರುಲ್ ಹಸನಿಯ್ಯ ಎಜುಕೇಷನ್ ಸೆಂಟರ್, ಅಲ್ ಇಸ್ಲಾಮೀಯ ವೆಲ್ಫೇರ್, ಮೂಳೂರು ವೆಲ್ಫೇರ್, ಅಲ್ ಹುದಾ, ಅಲ್ ಇಬಾದ್ ಇಂಡಿಯನ್ ಸ್ಕೂಲ್, ನೂರ್ ಫ್ರೆಂಡ್ಸ್, ಸಾದಿಯ ಬೆಂಗಳೂರು, ಕೊಡಗು ವೆಲ್ಫೇರ್, ಮಸ್ದರ್ ಕೊಪ್ಪಳ, ಅಲ್ ಮದೀನಾ ಮಂಜನಾಡಿ, ಮುಹಿನ್ನುಸುನ್ನ ದಾವಣಗೆರೆ, ಮರ್ಕಝ್ ಉಲ್ ಹುದಾ ಕುಂಬ್ರ, ದಾರುಲ್ ಹಿದಾ ಬೆಳ್ಳಾರೆ ಹಾಗೂ ಹಲವು ಮುಖಂಡರು, ಉದ್ಯಮಿಗಳು ಭಾಗವಹಿಸಿದರು.

ದುಬೈ3

ಬ್ಯಾರಿ ಮೇಳ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಂತೂರ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬ್ಯಾರೀಸ್ ಚೇಂಬರ್ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.

ದುಬೈ5
ದುಬೈ4
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಗಾಝಾದಲ್ಲಿ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ಹಮಾಸ್: ವರದಿ

ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ...

Download Eedina App Android / iOS

X