ಸಾಲಬಾಧೆ ತಾಳಲಾರದೆ ಕಾರಂಜಾ ಕಾಲುವೆಗೆ ಬಿದ್ದು ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣಜಿ-ಬ್ಯಾಲಹಳ್ಳಿ(ಕೆ) ಗ್ರಾಮದ ಸಮೀಪ ನಡೆದಿದೆ.
ಖಟಕ ಚಿಂಚೋಳಿ ನಿವಾಸಿ ಹಣಮಂತ (32) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ಹಣಮಂತ ಕೃಷಿ ಚಟುವಟಿಕೆಗಾಗಿ ಕೆನರಾ ಬ್ಯಾಂಕ್‌ನಲ್ಲಿ 2 ಲಕ್ಷ ಹಾಗೂ ಕೈಗಡವಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅನಾವೃಷ್ಟಿಯಿಂದ ಮೂರ್ನಾಲ್ಕು ವರ್ಷದಿಂದ ಹೊಲದಲ್ಲಿ ಬೆಳೆ ಬೆಳೆಯಲಾಗಲಿಲ್ಲ. ಇದರಿಂದ ನೊಂದ ರೈತ ಸಾಲ ತೀರಿಸುವುದು ಹೇಗೆ ಎಂದು ಚಿಂತೆಗೀಡಾಗಿದ್ದರು.
ಡಿ.6ರಂದು ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಡಿ.8ರಂದು ಕಣಜಿ ಗ್ರಾಮದ ಸಿವಾರದ ಬಳಿಯ ಕಾರಂಜಾ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೆಳಗಾವಿ ಸುವರ್ಣ ಸೌಧದಲ್ಲಿ ʼಅನುಭವ ಮಂಟಪʼ ಚಿತ್ರ ಅನಾವರಣ : ಪಟ್ಟದ್ದೇವರು ಹರ್ಷ
ಈ ಕುರಿತು ಮೃತ ರೈತನ ಪತ್ನಿ ನೀಡಿದ ದೂರಿನ ಮೇರೆಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.