ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಕಲಿಕೆ ಸಮರ್ಪಕವಾಗಲು ಸಾಧ್ಯ ಎಂದು ಅಧ್ಯಾಪಕ ಡಿ.ಎಸ್. ವಗ್ಗರ ಹೇಳಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಎಸ್.ವಿ ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ನಡೆದ ಕಾಲೇಜು ರಂಗ ತರಬೇತಿ ಶಿಬಿರದಲ್ಲಿ ಸಿದ್ದಗೊಂಡ ಡಾ.ಚಂದ್ರಶೇಖರ ಕಂಬಾರರ ʼಶಿವರಾತ್ರಿʼ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼರಂಗಭೂಮಿ ಮನುಷ್ಯನಿಗೆ ಅರಿವು ನೀಡುವ ಕಾರ್ಯ ಮಾಡುತ್ತದೆ. ನಾಟಕದಲ್ಲಿ ಬರುವ ಪಾತ್ರಗಳು ನಮ್ಮ ನಡೆ-ನುಡಿಯನ್ನು ಹೋಲುವಂತಹದ್ದಾಗಿರುತ್ತದೆʼ ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಝಾಕೀರ ನದಾಫ್, ಹಿರಿಯ ಕಲಾವಿದ ಕಾಶಪ್ಪ ಜಂಬೂದ್ವೀಪ, ಶಿವಾನಂದ ತಾರಿಹಾಳ ಶಶಿಧರ ಹಾಳಕೇರಿ, ನಿರ್ದೇಶಕ ಕಲ್ಲಪ್ಪ ಪೂಜೇರು ಹಾಗೂ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವರದಿ ಓದಿದ್ದೀರಾ? ಹಾವೇರಿ | ಸಾಲಭಾದೆ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎನ್. ಆರ್.ಸವತಿಕರ ವಹಿಸಿದ್ದರು. ಯಲ್ಲವ್ವ ಪಟ್ಟದಕಲ್ಲು ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಕೆ.ರಾಮರೆಡ್ಡಿ ಸ್ವಾಗತಿಸಿದರು. ಮೋಹನ್ ಬೆಣಚಮರ್ಡಿ ನಿರೂಪಿಸಿದರು. ಡಾ. ಅರುಂಧತಿ ಬದಾಮಿ ವಂದಿಸಿದರು.