ಯುನೈಟೆಡ್ ಕಿಂಗ್ ಡಮ್, ಸ್ಕಾಟ್‌ಲೆಂಡ್‌ನ ಹೆರಿಯಟ್ ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯು ಪಿ ಸಹದೇವ್ ಪಟೇಲ್ ಎಂಬುವವರು ಇಂಟರ್ ನ್ಯಾಷನಲ್ ಮಾರ್ಕೆಟಿಂಗ್‌ನಲ್ಲಿ ಎಂಎಸ್ಸಿ ಪದವಿ ಪೂರೈಸಿ ಗರಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಯು ಇ ಪ್ರಭಾಕರ್ ಹಾಗೂ ಬಿ ಜಿ ಪೂರ್ಣ ದಂಪತಿಯ ದ್ವಿತೀಯ ಪುತ್ರ ಯು ಪಿ ಸಹದೇವ್ ಪಟೇಲ್ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗ್ರಾಮೀಣ ಕೃಷಿ ಕುಟುಂಬದ ಈ ವಿದ್ಯಾರ್ಥಿ ತೋರಿರುವ ಸಾಧನೆಗೆ ಪೋಷಕರು, ಕುಟುಂಬಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಂತೋಷ ವ್ಯಕ್ತಪಡಿಸಿವೆ. ದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅಲ್ಲೂರು ಘಟನೆಯಲ್ಲಿ ಪಿಎಸ್‌ಐ ಸಮರ್ಪಕ ಕಾರ್ಯ ನಿರ್ವಹಿಸಿದ್ದಾರೆ: ಎಚ್ ಎಚ್ ದೇವರಾಜ್