ಗುಬ್ಬಿ | ಜೆಜೆಎಂ ಕಾಮಗಾರಿ ಟ್ರಂಚ್ ಗೆ ಉರುಳಿ ಬಿದ್ದ ಟ್ರ್ಯಾಕ್ಟರ್ : ಚಾಲಕನ ಕೈ ಮುರಿತಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Date:

Advertisements

ಗುಬ್ಬಿ ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ಹೆಬ್ಬೂರು ಸಂಪರ್ಕ ರಸ್ತೆ ಬದಿ ಜೆಜೆಎಂ ಕಾಮಗಾರಿಗೆ ತೆಗೆದ 600 ಮೀಟರ್ ಟ್ರಂಚ್ ಪೈಪ್ ಲೈನ್ ಅಳವಡಿಸದೇ ರಸ್ತೆ ಬದಿ ಹಾಗೆಯೇ ಬಿಟ್ಟ ಕಾರಣ ಟ್ರ್ಯಾಕ್ಟರ್ ಉರುಳಿ ಚಾಲಕನ ಕೈ ಮೂಳೆ ಮುರಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ.

ಕಳೆದ ಆರು ತಿಂಗಳ ಹಿಂದೆ 60 ಲಕ್ಷ ರೂಗಳ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭಿಸಿ ರಸ್ತೆ ಬದಿ ಒಂದು ಮೀಟರ್ ಆಳ ತೋಡಿ ಹಾಗೆಯೇ ಬಿಟ್ಟು ಹೋಗಿರುವ ಕಾರಣ ನಾಲ್ಕೈದು ಅಪಘಾತಕ್ಕೆ ಮೂಲವಾಗಿದೆ. ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆಕ್ರೋಶ ಕಟ್ಟೆ ಇಂದು ನಡೆದ ಅಪಘಾತದಿಂದ ಒಡೆದು ಹೊರಬಂದಿದೆ. ಪ್ರಭಾವಿ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನಿಗೆ ಹೇಳಲಾಗದ ಅಧಿಕಾರಿಗಳ ಬಗ್ಗೆ ಜನರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

1000761253

ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ ಓವರ್ ಹೆಡ್ ಟ್ಯಾಂಕ್ ಮಾಡದೆ ಪೈಪ್ ಲೈನ್ ಕೆಲಸ ಗ್ರಾಮದ ಹೊರ ಭಾಗದಲ್ಲಿ ನಡೆದಿಲ್ಲ. ತೋಟದಮನೆ ಇರುವಲ್ಲಿ ಮಾತ್ರ ಒಂದೆರೆಡು ಪೈಪ್ ಹಾಕಲಾಗಿದೆ. ಉಳಿದಂತೆ ಎಲ್ಲಾ ಹಲವು ಖಾಲಿ ಹಳ್ಳ ಹಾಗೆಯೇ ಬಿಡಲಾಗಿದೆ. ಈಗಾಗಲೇ ಇಲ್ಲಿ ನಡೆದಿರುವ ಅಪಘಾತಗಳು ಆತಂಕ ತಂದಿದೆ. ಈ ಹಳ್ಳದಿಂದ ಜೀವ ಹಾನಿಯಾದಲ್ಲಿ ಗುತ್ತಿಗೆದಾರ ಸತೀಶ್ ನೇರ ಹೊಣೆ ಹೊರಬೇಕು ಎಂದು ಸ್ಥಳೀಯ ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದರು.

Advertisements

ಚಿಕ್ಕ ಚೆಂಗಾವಿ ಹಾಗೂ ಬುಕ್ಕ ಸಾಗರ ಎರಡೂ ಗ್ರಾಮದಲ್ಲಿ ಮನೆ ಮನೆಗೆ ನೀರು ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿದೆ. ಪೈಪ್ ಲೈನ್ ಕೆಲಸ ಗುಣಮಟ್ಟದಲ್ಲಿಲ್ಲ. ಊರಿನ ಸಿಸಿ ರಸ್ತೆ ಹಗೆದು ಹಾಳು ಮಾಡಿ ಅಲ್ಲಿನ ಹಳ್ಳ ಮುಚ್ಚದೆ ರಸ್ತೆಯನ್ನು ಸಂಪೂರ್ಣ ಹದಗೆಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರ ಸತೀಶ್ ಕೆಲಸಕ್ಕೆ ಅಧಿಕಾರಿಗಳ ಸಾಥ್ ನೀಡಿದ್ದಾರೆ. ರಸ್ತೆಯ ಬದಿ ತೆಗೆದ ಹಳ್ಳ ಮಾರಕವಾಗಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಮಾಜಿ ಗ್ರಾಪಂ ಸದಸ್ಯ ಸಿ.ಡಿ.ರಾಘವೇಂದ್ರ ಆಗ್ರಹಿಸಿದ್ದಾರೆ.

1000761252

ಜಲ ಜೀವನ್ ಮಿಷನ್ ಯೋಜನೆ ಆರಂಭದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ನಡೆದ ಕಳಪೆ ಕಾಮಗಾರಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಸಂಚಾರವೇ ಮಾರಕ ಎನ್ನುವಂತೆ ಪೈಪ್ ಲೈನ್ ಹಳ್ಳ ಜವರಾಯನ ರೂಪ ಪಡೆದುಕೊಂಡಿದೆ. ಆರೇಳು ಅಪಘಾತ ಈಗಾಗಲೇ ಕೈಕಾಲು ಮುರಿದಿವೆ. ಕೆಲಸ ಮಾಡದೆ ಕಂಟ್ರಾಕ್ಟರ್ ಅಧಿಕಾರಿಗಳಿಗೆ ತೋರಿಕೆಗೆ ಹಳ್ಳ ತೆಗೆದು ಅಲ್ಲಲ್ಲೇ ಪೈಪ್ ಅದ್ದಿ ಈಗ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಸಹ ಈ ಬಗ್ಗೆ ನಿಗಾವಹಿಸದೆ ಸ್ಥಳಕ್ಕೆ ಬಾರದೆ ಕಚೇರಿಯಲ್ಲೇ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಮುಖಂಡ ಬುಕ್ಕಸಾಗರ ಮಹದೇವ್ ಆರೋಪಿಸಿದರು.

ಘಟನೆ ತಿಳಿದ ಬಳಿಕ ಜೆಜೆಎಂ ಎಇಇ ನಟರಾಜ್ ಕೂಡಲೇ ಹಳ್ಳ ಮುಚ್ಚಿಸಿ ಬಾಕಿ ಇರುವ ಓವರ್ ಹೆಡ್ ಟ್ಯಾಂಕ್ ಹಾಗೂ ಪೈಪ್ ಲೈನ್ ಕೆಲಸವನ್ನು ಮೂರು ತಿಂಗಳಲ್ಲಿ ಪೂರ್ಣ ಗೊಳಿಸುವ ಹೇಳಿಕೆಯನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X