ಗುಬ್ಬಿ | ಜೆಜೆಎಂ ಕಾಮಗಾರಿ ಟ್ರಂಚ್ ಗೆ ಉರುಳಿ ಬಿದ್ದ ಟ್ರ್ಯಾಕ್ಟರ್ : ಚಾಲಕನ ಕೈ ಮುರಿತಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Date:

ಗುಬ್ಬಿ ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ಹೆಬ್ಬೂರು ಸಂಪರ್ಕ ರಸ್ತೆ ಬದಿ ಜೆಜೆಎಂ ಕಾಮಗಾರಿಗೆ ತೆಗೆದ 600 ಮೀಟರ್ ಟ್ರಂಚ್ ಪೈಪ್ ಲೈನ್ ಅಳವಡಿಸದೇ ರಸ್ತೆ ಬದಿ ಹಾಗೆಯೇ ಬಿಟ್ಟ ಕಾರಣ ಟ್ರ್ಯಾಕ್ಟರ್ ಉರುಳಿ ಚಾಲಕನ ಕೈ ಮೂಳೆ ಮುರಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿದೆ.

- Advertisement -

ಕಳೆದ ಆರು ತಿಂಗಳ ಹಿಂದೆ 60 ಲಕ್ಷ ರೂಗಳ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಆರಂಭಿಸಿ ರಸ್ತೆ ಬದಿ ಒಂದು ಮೀಟರ್ ಆಳ ತೋಡಿ ಹಾಗೆಯೇ ಬಿಟ್ಟು ಹೋಗಿರುವ ಕಾರಣ ನಾಲ್ಕೈದು ಅಪಘಾತಕ್ಕೆ ಮೂಲವಾಗಿದೆ. ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆಕ್ರೋಶ ಕಟ್ಟೆ ಇಂದು ನಡೆದ ಅಪಘಾತದಿಂದ ಒಡೆದು ಹೊರಬಂದಿದೆ. ಪ್ರಭಾವಿ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರನಿಗೆ ಹೇಳಲಾಗದ ಅಧಿಕಾರಿಗಳ ಬಗ್ಗೆ ಜನರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ...

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ. ಬ್ರಿಟಿಷ್...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...
1000761253

ಮನೆ ಮನೆಗೆ ನಳ ಸಂಪರ್ಕ ಕಾಮಗಾರಿ ಓವರ್ ಹೆಡ್ ಟ್ಯಾಂಕ್ ಮಾಡದೆ ಪೈಪ್ ಲೈನ್ ಕೆಲಸ ಗ್ರಾಮದ ಹೊರ ಭಾಗದಲ್ಲಿ ನಡೆದಿಲ್ಲ. ತೋಟದಮನೆ ಇರುವಲ್ಲಿ ಮಾತ್ರ ಒಂದೆರೆಡು ಪೈಪ್ ಹಾಕಲಾಗಿದೆ. ಉಳಿದಂತೆ ಎಲ್ಲಾ ಹಲವು ಖಾಲಿ ಹಳ್ಳ ಹಾಗೆಯೇ ಬಿಡಲಾಗಿದೆ. ಈಗಾಗಲೇ ಇಲ್ಲಿ ನಡೆದಿರುವ ಅಪಘಾತಗಳು ಆತಂಕ ತಂದಿದೆ. ಈ ಹಳ್ಳದಿಂದ ಜೀವ ಹಾನಿಯಾದಲ್ಲಿ ಗುತ್ತಿಗೆದಾರ ಸತೀಶ್ ನೇರ ಹೊಣೆ ಹೊರಬೇಕು ಎಂದು ಸ್ಥಳೀಯ ಶ್ರೀನಿವಾಸ್ ಗೌಡ ಎಚ್ಚರಿಕೆ ನೀಡಿದರು.

ಚಿಕ್ಕ ಚೆಂಗಾವಿ ಹಾಗೂ ಬುಕ್ಕ ಸಾಗರ ಎರಡೂ ಗ್ರಾಮದಲ್ಲಿ ಮನೆ ಮನೆಗೆ ನೀರು ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿದೆ. ಪೈಪ್ ಲೈನ್ ಕೆಲಸ ಗುಣಮಟ್ಟದಲ್ಲಿಲ್ಲ. ಊರಿನ ಸಿಸಿ ರಸ್ತೆ ಹಗೆದು ಹಾಳು ಮಾಡಿ ಅಲ್ಲಿನ ಹಳ್ಳ ಮುಚ್ಚದೆ ರಸ್ತೆಯನ್ನು ಸಂಪೂರ್ಣ ಹದಗೆಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರ ಸತೀಶ್ ಕೆಲಸಕ್ಕೆ ಅಧಿಕಾರಿಗಳ ಸಾಥ್ ನೀಡಿದ್ದಾರೆ. ರಸ್ತೆಯ ಬದಿ ತೆಗೆದ ಹಳ್ಳ ಮಾರಕವಾಗಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕು ಎಂದು ಮಾಜಿ ಗ್ರಾಪಂ ಸದಸ್ಯ ಸಿ.ಡಿ.ರಾಘವೇಂದ್ರ ಆಗ್ರಹಿಸಿದ್ದಾರೆ.

1000761252

ಜಲ ಜೀವನ್ ಮಿಷನ್ ಯೋಜನೆ ಆರಂಭದಲ್ಲಿ ಬುಕ್ಕಸಾಗರ ಗ್ರಾಮದಲ್ಲಿ ನಡೆದ ಕಳಪೆ ಕಾಮಗಾರಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಸಂಚಾರವೇ ಮಾರಕ ಎನ್ನುವಂತೆ ಪೈಪ್ ಲೈನ್ ಹಳ್ಳ ಜವರಾಯನ ರೂಪ ಪಡೆದುಕೊಂಡಿದೆ. ಆರೇಳು ಅಪಘಾತ ಈಗಾಗಲೇ ಕೈಕಾಲು ಮುರಿದಿವೆ. ಕೆಲಸ ಮಾಡದೆ ಕಂಟ್ರಾಕ್ಟರ್ ಅಧಿಕಾರಿಗಳಿಗೆ ತೋರಿಕೆಗೆ ಹಳ್ಳ ತೆಗೆದು ಅಲ್ಲಲ್ಲೇ ಪೈಪ್ ಅದ್ದಿ ಈಗ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಸಹ ಈ ಬಗ್ಗೆ ನಿಗಾವಹಿಸದೆ ಸ್ಥಳಕ್ಕೆ ಬಾರದೆ ಕಚೇರಿಯಲ್ಲೇ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಮುಖಂಡ ಬುಕ್ಕಸಾಗರ ಮಹದೇವ್ ಆರೋಪಿಸಿದರು.

ಘಟನೆ ತಿಳಿದ ಬಳಿಕ ಜೆಜೆಎಂ ಎಇಇ ನಟರಾಜ್ ಕೂಡಲೇ ಹಳ್ಳ ಮುಚ್ಚಿಸಿ ಬಾಕಿ ಇರುವ ಓವರ್ ಹೆಡ್ ಟ್ಯಾಂಕ್ ಹಾಗೂ ಪೈಪ್ ಲೈನ್ ಕೆಲಸವನ್ನು ಮೂರು ತಿಂಗಳಲ್ಲಿ ಪೂರ್ಣ ಗೊಳಿಸುವ ಹೇಳಿಕೆಯನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮಟ್ಟಿ– ಕುಷ್ಟಗಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ರೈಲ್ವೇ ಹೋರಾಟ ಸಮಿತಿಯ ಮನವಿ

ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಾಗೂ ಅನುದಾನ...

ತುರುವೇಕೆರೆಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಸುಗಮ ಸಂಚಾರಕ್ಕೆ ಅನುವು

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಟ್ಟಣ...

ತುಮಕೂರು | ಮಾದಕ ವ್ಯಸನದಿಂದ ದೂರವಿದ್ದು ಉತ್ತಮ ನಾಗರಿಕರಾಗಿ: ಪಿಎಸ್‌ಐ ತಾರ ಕೆ.ಸಿ.

ಯುವಜನರು ಜಾಗೃತರಾಗಿರಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಸಮಾಜದ ಆಸ್ತಿಯಾಗಬೇಕು....

ತುಮಕೂರು | ಸುಫಿಯಾ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

ತುಮಕೂರು ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ...