ಈ ದಿನ ಸಂಪಾದಕೀಯ | ಯುಪಿಎಸ್‌ಸಿ ಪರೀಕ್ಷೆ; ಹೆಣ್ಣುಮಕ್ಕಳೇ ಟಾಪರ್ಸ್‌, ಮಹತ್ವದ ಹುದ್ದೆಗಳು ಮಾತ್ರ ಪುರುಷರಿಗೇ ಮೀಸಲು!

Date:

Advertisements
ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ ನೀತಿ ನಿರೂಪಣೆಯ ಮಹತ್ವದ ಜವಾಬ್ದಾರಿ ಇರುವ ಹುದ್ದೆಗಳಿಂದ ಮಹಿಳೆಯರನ್ನು ದೂರವೇ ಇಡಲಾಗುತ್ತಿದೆ

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಮೊದಲ ನಾಲ್ಕು ರ‍್ಯಾಂಕ್‌ಗಳು ಹೆಣ್ಣುಮಕ್ಕಳ ಪಾಲಾಗಿವೆ. ಇಷಿತಾ ಕಿಶೋರ್‌, ಗರಿಮಾ ಲೋಹಿಯಾ, ಉಮಾ ಹರತಿ, ಸ್ಮೃತಿ ಮಿಶ್ರಾ ಆ ನಾಲ್ವರು ಸಾಧಕಿಯರು. 2018ರಲ್ಲಿ ಐಎಎಸ್‌/ ಐಪಿಎಸ್‌ ನಂತಹ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಹೆಣ್ಣುಮಕ್ಕಳ ಪ್ರಮಾಣ 24% ಇತ್ತು. ಈಗ ಅದು 34% ಕ್ಕೆ ಏರಿಕೆಯಾಗಿದೆ. ಲಿಂಗ ಸಮಾನತೆಯ ದೃಷ್ಟಿಯಿಂದ ಇದು ಆಶಾದಾಯಕ ಬೆಳವಣಿಗೆ.

ನಾಗರಿಕ ಸೇವಾ ವಲಯದಲ್ಲಿ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಅಧಿಕಾರಿಗಳಾಗಿ ಕೆಲಸ ಮಾಡುವುದು ಸ್ವಸ್ಥ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದೇ. ಹೆಣ್ಣುಮಕ್ಕಳು ಅಧಿಕಾರಿಗಳಾಗಿರುವ ಕಚೇರಿಗಳಲ್ಲಿ ಶಿಸ್ತು, ಸಮಯ ಪಾಲನೆಗೆ ಆದ್ಯತೆ ಇರುತ್ತದೆ. ಜನರ ಕಷ್ಟಗಳನ್ನು ಆಲಿಸುವ ಮಾತೃಹೃದಯದ ಜೊತೆಗೆ ಭ್ರಷ್ಟಾಚಾರರಹಿತ ಆಡಳಿತ ನೀಡುವ ದೃಷ್ಟಿಯಿಂದ ಮಹಿಳೆಯರ ಸಂಖ್ಯೆ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಬೇಕು. ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ಉದಾಹರಣೆಗಳು ಇಲ್ಲವೇ ಇಲ್ಲ ಎಂದೇನಲ್ಲ. ಆದರೆ ಆ ಪ್ರಮಾಣ ಕಡಿಮೆ ಇದೆ ಎಂಬುದಂತು ನಿಜ.

ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ ನೀತಿ ನಿರೂಪಣೆಯ ಮಹತ್ವದ ಜವಾಬ್ದಾರಿ ಇರುವ ಹುದ್ದೆಗಳಿಂದ ಮಹಿಳೆಯರನ್ನು ದೂರವೇ ಇಡಲಾಗುತ್ತಿದೆ. ಕೆಲವೊಮ್ಮೆ ಅರ್ಹತೆ, ಹಿರಿತನ ಇದ್ದರೂ ಅಂತಹ ಹುದ್ದೆಗಳನ್ನು ನೀಡಲಾಗುತ್ತಿಲ್ಲ ಎಂಬ ದೂರುಗಳಿವೆ. ಅದಕ್ಕಾಗಿ ಕೋರ್ಟ್‌ ಮೆಟ್ಟಿಲೇರಿ ದಕ್ಕಿಸಿಕೊಳ್ಳಬೇಕಾದ ಹೀನಾಯ ಪರಿಸ್ಥಿತಿ ಮಹಿಳಾ ಅಧಿಕಾರಿಗಳದ್ದು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಲಿಂಗ ತಾರತಮ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಢಾಳಾಗಿ ಕಾಣಿಸುತ್ತದೆ.

Advertisements

70 ವರ್ಷಗಳ ಇತಿಹಾಸದಲ್ಲಿ ಭಾರತ ಒಬ್ಬರೇ ಒಬ್ಬರು ಮಹಿಳಾ ಸಂಸದೀಯ ಕಾರ್ಯದರ್ಶಿಯನ್ನು ಹೊಂದಿರಲಿಲ್ಲ. ಮಹಿಳೆಯೊಬ್ಬರು ಸುದೀರ್ಘ ಕಾಲ ಪ್ರಧಾನಿಯಾಗಿದ್ದರೂ ಮಹಿಳಾ ಅಧಿಕಾರಿಗಳು ನಿರ್ಣಾಯಕ ಸ್ಥಾನಕ್ಕೇರಲು 21ನೇ ಶತಮಾನಕ್ಕೆ ಕಾಯಬೇಕಾಯಿತು. 2001ರಲ್ಲಿ ಚೋಕಿಲಾ ಅಯ್ಯರ್ ಎಂಬ ಮಹಿಳಾ ಅಧಿಕಾರಿ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕವಾಗುವ ಮೂಲಕ. ನಂತರ 2011ರಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಸುಷ್ಮಾ ನಾಥ್‌ ನೇಮಕವಾಗಿದ್ದರು.

2011ರ ಯುಎನ್‌ಡಿಪಿ (United Nations Development Programme) ಜಾಗತಿಕ ವರದಿಯ ಪ್ರಕಾರ ಭಾರತದ ಸಾರ್ವಜನಿಕ ಆಡಳಿತದಲ್ಲಿ ಮಹಿಳೆಯರ ಅಧಿಕಾರ ಹಂಚಿಕೆಯ ಪ್ರಮಾಣ ಕೇವಲ 12% ಇದೆ. ಸಿಂಗಾಪುರದಂತಹ ಪುಟ್ಟ ದೇಶದಲ್ಲಿ ಈ ಪ್ರಮಾಣ 29% ಇದೆ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದರೂ ಸರ್ಕಾರದ ವಿವಿಧ ಇಲಾಖೆಗಳ ನಿರ್ಣಾಯಕ ಸ್ಥಾನಗಳಿಗೆ ಹೋಗುವುದಕ್ಕೆ ಈ ರ‍್ಯಾಂಕ್‌ಗಳು ಉಪಯೋಗಕ್ಕೆ ಬರುವುದಿಲ್ಲ. ಅಲ್ಲಿ ಪುರುಷಾಧಿಪತ್ಯವೇ ಮೇಲುಗೈ ಸಾಧಿಸುತ್ತದೆ. ಕೆಲವರಿಗೆ ಜಾತಿ ಬಲ, ರಾಜಕೀಯ ಕುಟುಂಬದ ಬೆಂಬಲ ಮುಂತಾದ ಕೆಲವು ʼವಿಶೇಷ ಅರ್ಹತೆʼಗಳು ಅನುಕೂಲ ಮಾಡಬಹುದು. ಆದರೆ ಅರ್ಹತೆ ಅಥವಾ ಸಾಮರ್ಥ್ಯವನ್ನು ಪರಿಗಣಿಸಿ ಉನ್ನತ ಜವಾಬ್ದಾರಿ ನೀಡುವ ಮನಸ್ಥಿತಿ ಪುರುಷಪ್ರಧಾನ ವ್ಯವಸ್ಥೆಯೊಳಗೆ ಇನ್ನು ಚಿಗುರಿಲ್ಲ ಎಂಬುದು ವಿಷಾದದ ಸಂಗತಿ.

ಉನ್ನತ ಹುದ್ದೆಗಳ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಉತ್ತಮ ರ‍್ಯಾಂಕ್‌ನೊಂದಿಗೆ ಪಾಸಾಗುತ್ತಿದ್ದಾರೆ. ಐಎಎಸ್‌/ ಐಪಿಎಸ್‌ ಅಧಿಕಾರಿಗಳಾಗಿ ನೇಮಕವಾಗುತ್ತಿದ್ದಾರೆ. ಆದರೆ, ಈಗಲೂ ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವ ಕೆಲವು ಇಲಾಖೆಗಳ ಹುದ್ದೆಗಳು ಮಹಿಳೆಯರಿಗೆ ಮೀಸಲು ಎಂಬಂತಾಗಿದೆ. ಬೇಕಾಬಿಟ್ಟಿ ಹಣ ಲೂಟಿ ಹೊಡೆಯುವ ಭ್ರಷ್ಟ ರಾಜಕಾರಣಿಗಳಿಗೆ ಅಂತಹ ಆಯಕಟ್ಟಿನ ಜಾಗಗಳಲ್ಲಿ ಭ್ರಷ್ಟ ಪುರುಷ ಅಧಿಕಾರಿಗಳೇ ಬೇಕು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಮಹಿಳಾ ಅಧಿಕಾರಿಗಳ ಧ್ವನಿಯನ್ನು ಪ್ರಭುತ್ವ ಬಹಳ ನಿರ್ದಾಕ್ಷಿಣ್ಯವಾಗಿ ಅಡಗಿಸಿಬಿಡುತ್ತದೆ.

ರಾಜಕಾರಣದಲ್ಲಿ ಮಹಿಳಾ ಪಾತಿನಿಧ್ಯ ಹೆಚ್ಚಬೇಕು. ಮಹಿಳೆಯರೇ ನಿರ್ಣಾಯಕರಾಗಬೇಕು. ಅದು ಕೇವಲ ಮತದಾನದ ವಿಷಯದಲ್ಲಿ ಮಾತ್ರವಲ್ಲ. ಅಧಿಕಾರ ಹಿಡಿಯುವ ವಿಚಾರದಲ್ಲಿಯೂ ಆಗಬೇಕು. ಎಲ್ಲಿಯವರೆಗೆ ರಾಜಕೀಯ ಅಧಿಕಾರ, ಪ್ರಭುತ್ವ ಪುರುಷರ ಕೈಯಲ್ಲಿ ಭದ್ರವಾಗಿರುತ್ತದೆಯೋ ಅಲ್ಲಿಯವರೆಗೆ ಈ ತಾರತಮ್ಯ ಇದ್ದೇ ಇರುತ್ತದೆ. ಹೊಸದಾಗಿ ನೇಮಕವಾಗುವ ಐಎಎಸ್‌, ಐಪಿಎಸ್‌ ಅಧಿಕಾರಿಗಳು ವ್ಯವಸ್ಥೆಯ ಈ ತಾರತಮ್ಯದ ಬಗ್ಗೆ ಧ್ವನಿ ಎತ್ತುವಂತಾಗಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X