ಪಾಕ್ ಇನ್ನುಳಿದ ಬಾಕಿಯಿರುವ 4 ಪಂದ್ಯಗಳಲ್ಲೂ ಜಯಗಳಿಸಿದರೆ 52.38 ಅಂಕಗಳೊಂದಿಗೆ ಅಂತಿಮಗೊಳ್ಳುತ್ತದೆ. ದಕ್ಷಿಣ ಆಫ್ರಿಕಾವು ಒಂದು ಪಂದ್ಯ ಸೋತರೆ ಅದರ ರನ್‌ರೇಟ್ ಶೇ. 52.08ಕ್ಕೆ ದಾಖಲಾಗುತ್ತದೆ. ಅಲ್ಲದೆ ಉಳಿದ ತಂಡಗಳ ಫಲಿತಾಂಶವು ಕೂಡ ಪಾಕ್ ಪರವಾಗಿರಬೇಕು. ಆಗ ಪಾಕಿಸ್ತಾನವು ಶೇಕಡಾವಾರು ಅಂಕ ಗಳಿಕೆಯಲ್ಲಿ 2ನೇ ಸ್ಥಾನಗಳಿಸಿ ಭಾರತ ಅಥವಾ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿರುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಶುರುವಾಗಲು ಕೇವಲ 10 ಪಂದ್ಯಗಳು ಮಾತ್ರ ಬಾಕಿಯಿದ್ದು, ಅಂತಿಮ ಘಟ್ಟ ಪ್ರವೇಶಿಸುವ ಎರಡು ತಂಡಗಳಿಗೆ ಈಗಾಗಲೇ ಪೈಪೋಟಿ ಶುರುವಾಗಲಿದೆ. ಆದರೆ ಯಾವ ತಂಡಕ್ಕೂ ಇಲ್ಲಿಯವರೆಗೂ ಫೈನಲ್ ಪ್ರವೇಶಿಸುವ ಖಾತರಿ ಲಭ್ಯವಾಗಿಲ್ಲ. ಸದ್ಯದ ಪಟ್ಟಿಯ ಪ್ರಕಾರ ದಕ್ಷಿಣ ಆಫ್ರಿಕಾ ಶೇ. 63.33 ಅಂಕದೊಂದಿದೆ ಮೊದಲ ಸ್ಥಾನದಲ್ಲಿದ್ದು, ತವರಿನಲ್ಲಿ ಪಾಕ್ ವಿರುದ್ಧ ಇನ್ನೂ ಎರಡು ಪಂದ್ಯಗಳು ಬಾಕಿಯಿದೆ. ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ನಂತರ ದಕ್ಷಿಣ ಆಫ್ರಿಕಾ ಉತ್ತಮ ಸ್ಥಾನದಲ್ಲಿದೆ. ಫೈನಲ್ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದರೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದರೆ ಸಾಕು. ಒಂದು ವೇಳೆ ಸರಣಿಯು 1-1 ಸಮಬಲವಾದರೆ ಶೇಕಡ 61.11 ಅಂಕ ಪಡೆದು ಮೊದಲಿನಂತೆಯೇ ಭಾರತ ಹಾಗೂ ಆಸ್ಟ್ರೇಲಿಯಾಗಿಂತ ಮೇಲಿನ ಸ್ಥಾನ ಪಡೆಯುತ್ತದೆ.
ಹಾಗೆಯೇ ಎರಡೂ ಟೆಸ್ಟ್‌ಗಳು ಡ್ರಾನಲ್ಲಿ ಅಂತ್ಯಗೊಂಡರೆ ದಕ್ಷಿಣ ಆಫ್ರಿಕಾ ಶೇ.58.33 ಅಂಕ ದಾಖಲಿಸುತ್ತದೆ. ಇದೇ ಸಂದರ್ಭದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 3-2ರ ಅಂತರದಲ್ಲಿ ಗೆಲುವು ಪಡೆಯಬೇಕು. ದಕ್ಷಿಣ ಆಫ್ರಿಕಾವನ್ನು ಆಸ್ಟ್ರೇಲಿಯಾ ಹಿಂದಿಕ್ಕಬೇಕಾದರೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾ 1-0 ಅಂತರದಲ್ಲಿ ಸರಣಿ ಸೋತರೆ, ಹರಿಣಗಳ ತಂಡ ತನ್ನ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆಸ್ಟ್ರೇಲಿಯಾದ ಉಳಿದ ಐದು ಟೆಸ್ಟ್‌ಗಳಲ್ಲಿ 2 ಟೆಸ್ಟ್‌ಗಳ ಗೆಲುವನ್ನು ಅವಲಂಬಿಸಬೇಕು ಅಥವಾ ಭಾರತವು ಆಸೀಸ್ ವಿರುದ್ಧದ ಇನ್ನುಳಿದ ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಡ್ರಾ ಪಡೆಯಬೇಕು.
ಶೇ. 45.45 ಅಂಕವನ್ನು ಹೊಂದಿರುವ ಶ್ರೀಲಂಕಾಗೆ ಆಸ್ಟ್ರೇಲಿಯಾ ವಿರುದ್ಧ ಇನ್ನೆರಡು ಪಂದ್ಯಗಳಿವೆ. ಎರಡೂ ಟೆಸ್ಟ್‌ಗಳನ್ನು ಗೆದ್ದರೆ ಶೇ.53.85 ಅಂಕ ದಾಖಲಿಸುತ್ತದೆ. ಹಾಗೆಯೇ ಉಳಿದ ಫಲಿತಾಂಶಗಳ ಮೇಲೆ ಅವಲಂಬಿತವಾಗುತ್ತದೆ. ಈ ರೀತಿ ಫಲಿತಾಂಶ ಉಂಟಾದರೆ ದಕ್ಷಿಣ ಆಫ್ರಿಕಾ, ಭಾರತ ಅಥವಾ ಆಸ್ಟ್ರೇಲಿಯಾ ತಾವಿರುವ ಅಂಕದೊಂದಿಗೆ ಮೇಲೆಯೇ ಇರುತ್ತದೆ. ಈ ಮೂರು ತಂಡಗಳು ಶೇಕಡಾವಾರು 53.85 ಕ್ಕಿಂತ ಕಡಿಮೆ ಬರಬೇಕೆಂದರೆ, ಆಸ್ಟ್ರೇಲಿಯಾ ಭಾರತದ ವಿರುದ್ಧ ಎರಡು ಡ್ರಾನೊಂದಿಗೆ 2-1 ಜಯ ದಾಖಲಿಸಬೇಕು. ದಕ್ಷಿಣ ಆಫ್ರಿಕಾವು ಪಾಕಿಸ್ತಾನ ವಿರುದ್ಧ ಇನ್ನೆರಡು ಟೆಸ್ಟ್‌ಗಳನ್ನೂ ಸೋಲಬೇಕು.

ಭಾರತದ ಫೈನಲ್ ತಲುಪುವ ಲೆಕ್ಕಾಚಾರ ಹೇಳುವುದಾದರೆ, ಸದ್ಯ ಟೀಂ ಇಂಡಿಯಾ ಶೇ. 57.29 ಅಂಕ ಹೊಂದಿದ್ದು ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್‌ಗಳು ಬಾಕಿಯಿವೆ. ಅಂತಿಮಘಟ್ಟದ ಸ್ಥಾನ ಖಚಿತಪಡಿಸಿಕೊಳ್ಳಬೇಕಾದರೆ ಎರಡು ಗೆಲುವು ಹಾಗೂ ಒಂದು ‘ಡ್ರಾ’ದ ಅಗತ್ಯವಿದೆ. ಆಗ ತಂಡದ ಶೇಕಡಾವಾರು ಅಂಕ 60.53 ರಷ್ಟಾಗಿ ದಕ್ಷಿಣ ಆಫ್ರಿಕಾಗಿಂತ ಕೆಳಗೆ ಎರಡನೇ ಸ್ಥಾನ ತಲುಪುತ್ತದೆ. ಒಂದು ವೇಳೆ ಭಾರತವು ಸರಣಿಯಲ್ಲಿ 3-2 ಗೆಲುವು ಸಾಧಿಸಿದರೆ ಶೇ.58.77 ಅಂಕ ಪಡೆದು, ಆಸೀಸ್ ಮುಂಬರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 1-0 ರಲ್ಲಿ ಜಯ ಪಡೆಯಬೇಕು. ಆದಾಗ್ಯೂ ಟೀಂ ಇಂಡಿಯಾ ಸರಣಿಯಲ್ಲಿ 2-3 ಸೋತರೆ, ಶೇ.53.51 ಅಂಕ ಪಡೆಯುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ನಂತರದ ಸ್ಥಾನಕ್ಕೆ ತೃಪ್ತಿಪಡುತ್ತದೆ. ಹೀಗಾದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕ್ ವಿರುದ್ಧ ತನ್ನ ಎರಡೂ ಟೆಸ್ಟ್‌ಗಳನ್ನು ಸೋಲಬೇಕು ಹಾಗೂ ಆಸ್ಟ್ರೇಲಿಯಾ – ಶ್ರೀಲಂಕಾ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಳ್ಳಬೇಕು.
ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?
ಆಸ್ಟ್ರೇಲಿಯಾ ವಿಷಯದಲ್ಲೂ ಒಂದಿಷ್ಟು ಗಣಿತವಿದೆ. ಆಸೀಸ್ ಶೇ.60.71 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತದ ವಿರುದ್ಧ ಮೂರು ಹಾಗೂ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಬಾಕಿಯಿದೆ. ಭಾರತದ ವಿರುದ್ಧ ಮುಂಬರುವ ಎರಡು ಟೆಸ್ಟ್‌ಗಳನ್ನು ಗೆದ್ದರೆ ಫೈನಲ್ ಹಾದಿ ಸುಗಮಗೊಳ್ಳುತ್ತದೆ. ಶ್ರೀಲಂಕಾ ವಿರುದ್ಧ ಬಾಕಿಯಿರುವ 2 ಟೆಸ್ಟ್‌ಗಳನ್ನು ಸೋತರೂ ಟಿಂ ಇಂಡಿಯಾ ವಿರುದ್ಧ 3-2 ಸರಣಿಯಿಂದ ಗೆದ್ದು, ಭಾರತದ ಅಂಕವನ್ನು ಶೇ. 55.26 ಇರುವಂತೆ ನೋಡಿಕೊಳ್ಳಬೇಕು. ಶ್ರೀಲಂಕಾದ ಅಂಕವು ಶೇ.53.85 ಇರಬೇಕು. ಅನಿರೀಕ್ಷಿತವಾಗಿ ಆಸೀಸ್ ತಂಡ ಭಾರತದ ವಿರುದ್ಧ 2-3 ಸರಣಿ ಸೋತರೆ ಟೀಂ ಇಂಡಿಯಾ ಅಂಕವು ಶೇ. 58.77ಕ್ಕೆ ಜಿಗಿಯುತ್ತದೆ. ಹೀಗಾದಲ್ಲಿ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್‌ಗಳನ್ನು ಗೆಲ್ಲಬೇಕು. ಈ ರೀತಿ ಆದರೆ ಭಾರತಕ್ಕಿಂತ ಹೆಚ್ಚಿನ ಶೇಕಡಾವಾರು ಅಂಕ ಪಡೆಯುತ್ತದೆ. ಪರ್ಯಾಯವಾಗಿ ಆಸೀಸ್‌ಗೆ ಅನುಕೂಲವಾಗಬೇಕಾದರೆ ದಕ್ಷಿಣ ಆಫ್ರಿಕಾ ಪಾಕ್ ವಿರುದ್ಧ ಒಂದಕ್ಕಿಂತ ಹೆಚ್ಚು ಡ್ರಾ ಮಾಡಿಕೊಳ್ಳಬಾರದು. ದಕ್ಷಿಣ ಆಫ್ರಿಕಾದ ಫಲಿತಾಂಶವು ಕೂಡ ಶೇ.55.56 ಇರಬಾರದು. ಆಸೀಸ್ ಮುಂದಿನ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಒಂದು ಡ್ರಾ ಪಡೆಯಬೇಕು.
ಅಂತಿಮವಾಗಿ ಪಾಕಿಸ್ತಾನದ ವಿಚಾರಕ್ಕೆ ಬರುವುದಾದರೆ, ನೆರೆಯ ರಾಷ್ಟ್ರ ಶೇ. 33.33 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಗಣಿತದ ಲೆಕ್ಕಾಚಾರದೊಂದಿಗೆ ಒಂದಿಷ್ಟು ಅನಿರೀಕ್ಷಿತ ಫಲಿತಾಂಶಗಳು ನಡೆಯಬೇಕು. ದಕ್ಷಿಣ ಆಫ್ರಿಕಾದ ರನ್‌ರೇಟ್ ಬಹುತೇಕ ಕಡಿಮೆಯಾಗಬೇಕು. ಪಾಕ್ ಇನ್ನುಳಿದ ಬಾಕಿಯಿರುವ 4 ಪಂದ್ಯಗಳಲ್ಲೂ ಜಯಗಳಿಸಿದರೆ 52.38 ಅಂಕಗಳೊಂದಿಗೆ ಅಂತಿಮಗೊಳ್ಳುತ್ತದೆ. ದಕ್ಷಿಣ ಆಫ್ರಿಕಾವು ಒಂದು ಪಂದ್ಯ ಸೋತರೆ ಅದರ ರನ್‌ರೇಟ್ ಶೇ. 52.08ಕ್ಕೆ ದಾಖಲಾಗುತ್ತದೆ. ಅಲ್ಲದೆ ಉಳಿದ ತಂಡಗಳ ಫಲಿತಾಂಶವು ಕೂಡ ಪಾಕ್ ಪರವಾಗಿರಬೇಕು. ಆಗ ಪಾಕಿಸ್ತಾನವು ಶೇಕಡಾವಾರು ಅಂಕ ಗಳಿಕೆಯಲ್ಲಿ 2ನೇ ಸ್ಥಾನಗಳಿಸಿ ಭಾರತ ಅಥವಾ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿರುತ್ತದೆ. ಈ ರೀತಿಯ ಪವಾಡಗಳು ನಡೆದರೂ ಫೈನಲ್ ತಲುಪುವ ಸಾಧ್ಯತೆ ಬಹು ದೂರದಲ್ಲಿದೆ.

ಮೇಲಿನ ತಂಡಗಳನ್ನು ಹೊರತುಪಡಿಸಿ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಫೈನಲ್ ಪ್ರವೇಶಿಸುವ ಸುತ್ತಿನಿಂದ ಹೊರಬಂದಿವೆ. ಈ ತಂಡಗಳು ಈಗಾಗಲೇ ಅಂಕಗಳು ಕಡಿಮೆಯಿದ್ದು, ಹಲವು ಪಂದ್ಯಗಳನ್ನು ಆಡಿವೆ.
ಕೆಲವು ದಿನಗಳ ಹಿಂದೆ ಸುಸ್ಥಿತಿಯಲ್ಲಿದ್ದ ಭಾರತ
ಕೇವಲ 2 ತಿಂಗಳ ಹಿಂದೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ ಎಂದು ಬಹುತೇಕ ಕ್ರಿಕೆಟ್ ತಜ್ಞರ ಅನಿಸಿಕೆಯಾಗಿತ್ತು. 75ಕ್ಕೂ ಅಧಿಕ ಸರಾಸರಿ ಅಂಕ ಕಲೆ ಹಾಕಿದ್ದ ಭಾರತದ ತಂಡದ ಹತ್ತಿರಕ್ಕೂ ಯಾರೂ ಸುಳಿಯುವ ಸಾಧ್ಯತೆ ಇರಲಿಲ್ಲ. ಒಂದು ವೇಳೆ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾಕ್ಕೆ ತೊಂದರೆ ಬರಬಹುದೇ ಹೊರತು ಭಾರತಕ್ಕೆ ಯಾವ ಅಪಾಯಗಳಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನ್ಯೂಜಿಲೆಂಡ್ ಸರಣಿ ಹಾಗೂ ಆಸೀಸ್ ವಿರುದ್ಧದ ಒಂದು ಪಂದ್ಯ ಇವೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.
ನ್ಯೂಜಿಲೆಂಡ್ ತಂಡ ಯಾರೂ ಊಹಿಸದ ರೀತಿಯಲ್ಲಿ ಸರಣಿಯನ್ನು 3-0 ಅಂತರದಿಂದ ಕ್ವೀನ್ ಸ್ವೀಪ್ ಮಾಡಿ ಭಾರತದ ಅಂಕಗಳನ್ನು ಕಸಿದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿದೆ. ಪರ್ತ್‌ನಲ್ಲಿ ಗೆದ್ದರೂ ಅಡಿಲೇಡ್ ನಲ್ಲಿ ಸೋತಿರುವುದು ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮುಂಚಿತವಾಗಿ ಭಾರತಕ್ಕೆ ಕೇವಲ 3 ಪಂದ್ಯಗಳಷ್ಟೇ ಬಾಕಿಯುಳಿದಿದೆ. ಆಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಭಾರತವು 10 ವಿಕೆಟ್‌ಗಳ ಸೋಲು ಅನುಭವಿಸಿತು. ಡಿ.14ರಿಂದ ಬ್ರಿಸ್ಬ್‌ನ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವಾಡಲಿದೆ.