ಹೆರಿಗೆಯಾದ 24 ಗಂಟೆಗಳ ಬಳಿಕ ಬಾಣಂತಿ ಹಾಗೂ ಅವರ ಅತ್ತೆ ಜನಿಸಿದ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಬೀಬಿಜಾನ್ ಸದ್ದಾಂ ಸಯ್ಯದ್ (28) ಎಂದು ಹೆಸರು ಬರೆಯಿಸಿದ್ದ ಮಹಿಳೆ ಪರಾರಿಯಾದ ಬಾಣಂತಿ ಎನ್ನಲಾಗಿದೆ. ಹೆಸರಿನ ಜೊತೆಗೆ ಊರು ಮತ್ತು ವಿಳಾಸ ತಪ್ಪಾಗಿ ನೀಡಿದ್ದು, ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ.
ಆರೂವರೆ ತಿಂಗಳ ಗರ್ಭಿಣಿಯಾಗಿದ್ದ ಬೀಬಿಜಾನ್ ಎಂಬ ಸುಳ್ಳು ಹೆಸರಿನ ಮಹಿಳೆ ಡಿ. 8ರಂದು ಕಾಲುಜಾರಿ ಬಿದ್ದಿದ್ದರು. ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಅದೇ ದಿನ ರಾತ್ರಿ 9ಕ್ಕೆ ಹೆರಿಗೆಯಾಯಿದ್ದು, ಶಿಶು ಕೇವಲ 735 ಗ್ರಾಂ ತೂಕವಿದ್ದ ಕಾರಣ ಎನ್‌ಐಸಿಯು ಘಟಕದಲ್ಲಿ ದಾಖಲಿಸಿದ್ದರು. ಮಾರನೇ (ಡಿ.10) ದಿನ ಬಾಣಂತಿ ಹಾಗೂ ಅವರ ಅತ್ತೆ ಆಸ್ಪತ್ರೆಯಿಂದ ಪರಾರಿ ಆಗುತ್ತಾರೆ.
ಈ ವರದಿ ಓದಿದ್ದೀರಾ? ಧಾರವಾಡ | ನಾವೆಲ್ಲ ಒಂದೇ ಅನ್ನುವ ಭಾವದಿಂದ ದೇಶದ ಪ್ರಗತಿ ಸಾಧ್ಯ: ಈಶಪ್ಪ ಭೂತೆ
ನಂತರ ಚಿಕಿತ್ಸೆಗೆ ಸ್ಪಂದಿಸದ ಶಿಶು ಡಿ.10ರಂದು ಮೃತಪಟ್ಟಿತು ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.