ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಯಂಕಪ್ಪ ಇವರು ತಮ್ಮ ಮೂಲಹುದ್ದೆ ಬಿಟ್ಟು ಬೇರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದು ದಸಂಸ ಮುಖಂಡ ಸಿದ್ದು ಕೆರೂರು ತಿಳಿಸಿದರು.
ಸರಕಾರದ ಆದೇಶದ ಪ್ರಕಾರ ಅವರನ್ನು ಮೂಲ ಹುದ್ದೆಗೆ ಕಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ತಾಲೂಕ ಸಮಿತಿ ಜೇವರ್ಗಿ ವತಿಯಿಂದ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ದಸಂಸ ತಾಲೂಕು ಸಮಿತಿಯ ಸಂಚಾಲಕ ಸಿದ್ದು ಕೆರೂರವರು ಮಾತನಾಡಿ, “ಪುರಸಭೆ ಮುಖ್ಯ ಅಧಿಕಾರಿಗಳಾದ ಶಂಭುಲಿಂಗ ದೇಸಾಯಿ ರವರು. ಸರಕಾರದ ಆದೇಶವನ್ನು ಪಾಲಿಸಲು ವಿಫಲರಾಗಿದ್ದಾರೆ” ಎಂದು ದೂರಿದರು.
“ಪುರಸಭೆಯಲ್ಲಿ ಲೋಡರ್ ಆಗಿ ಸರಕಾರದ ನಿಯಮನುಸಾರ ಸೇವೆ ಸಲ್ಲಿಸಬೇಕು ಆದರೆ ಸದರಿ ರವರು ತಮ್ಮ ಮೂಲಹುದ್ದೆ ಬಿಟ್ಟು ಬೇರೆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರನು ಮೂಲ ಹುದ್ದೆಗೆ ಕಳಿಸಿಕೊಡಬೇಕು. ಅದರಲ್ಲಿ ಕೆಲವರನ್ನು ಅವರ ಮೂಲ ಹುದ್ದೆಗೆ ಕಳಿಸಿದ್ದೀರಿ. ಆದರೆ ಯಂಕಪ್ಪ (ಲೋಡರ್) ಇವರನ್ನು ಇನ್ನೂ ಅವರ ಮೂಲ ಹುದ್ದೆಗೆ ಕಳಿಸಿರುವುದಿಲ್ಲ. ಆದಕಾರಣ ಅವರನ್ನು ಮೂಲ ಹುದ್ದೆಗೆ ಕಳಿಸಬೇಕೆಂದು ಮತ್ತೊಮ್ಮೆ ತಮ್ಮ ಗಮನಕ್ಕೆ ಸಮಿತಿಯು ತರಬಯಸುತ್ತದೆ. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಬೆಳಗಾವಿ ಅಧಿವೇಶನ | ನೇಕಾರ ಮಾಲೀಕರಷ್ಟೆ ಅಲ್ಲ, ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಹ ಚರ್ಚೆಗೆ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾ ಸಂ.ಸಂಚಾಲಕ ಶ್ರೀಹರಿ ಕರಕಿಹಳ್ಳಿ, ಶರಣಬಸಪ್ಪ ಲಖಣಾಪೂರ, ಜೈಭೀಮ ನರಿಬೋಳ, ರೇವಣ ಸಿದ್ದಪ್ಪ ಬಿರಾಳ, ಯಶವಂತ ಬಡಿಗೇರ, ಲಕ್ಷ್ಮಣ ಡೊಳ್ಳೆ, ಬಸವರಾಜ ವರ್ಚನಳ್ಳಿ, ಭೀರಲಿಂಗ ಕೆಲ್ಲೂರ, ಶ್ರೀಮಂತ ಕಿಲೆದಾರ, ಸಭಾಷ ಭಂಡಾರಿ ಇತರರು ಉಪಸ್ಥಿತರಿದ್ದರು.