ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86 ವರ್ಷಗಳಿಂದ ಅಘೋಷಿತವಾಗಿ ಮಾಂಸಾಹಾರ ನಿಷೇಧದ ವಿರುದ್ಧ ಮಂಡ್ಯದ ಜನತೆ ‘ಆಹಾರ ಕ್ರಾಂತಿಗೆ ಆಹ್ವಾನ’ ನೀಡಿದ್ದಾರೆ. ಅಂದು ವಿಚಾರ ಕ್ರಾಂತಿ ಇಂದು ಆಹಾರ ಕ್ರಾಂತಿ ಎಂಬ ಸ್ಲೋಗನ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ
ನಾಡಿನ ಪ್ರಜ್ಞಾವಂತರು, ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಿದ್ದು, ಸಸ್ಯಾಹಾರದ ಜತೆಗೆ ಮಾಂಸಾಹಾರವೂ ಇರಬೇಕೆಂದು ಸಿಎಂ ಸಿದ್ಧರಾಮಯ್ಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರನ್ನು ಒತ್ತಾಯಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಪ್ಯಾಕೇಜ್ ಟೆಂಡರ್’ಅನ್ನು ರದ್ದು ಪಡಿಸುವಂತೆ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಒತ್ತಾಯ
ಸಮ್ಮೇಳನ ಹತ್ತಿರವಾಗುತ್ತಿದ್ದಂತೆ ಮಾಂಸಾಹಾರ ನಿಷೇಧದ ವಿಚಾರ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಸ್ಯಾಹಾರಿಗಳಿಗಷ್ಟೇ ಸಾಹಿತ್ಯ ಸಮ್ಮೇಳನ ನಡೆಸುವುದು ಎಷ್ಟು ಸರಿ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.