ದೇವಸ್ಥಾನದಲ್ಲಿ ಯುವತಿಯ ಮೇಲೆ ಕಾಮುಕರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಕಾಮುಕರು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಗುವಾಹಟಿಯಲ್ಲಿ ನಡೆದ ರಾಸ್ ಮಹೋತ್ಸವದ ಸಂದರ್ಭದಲ್ಲಿ ದುರ್ಗಾ ದೇವಸ್ಥಾನಕ್ಕೆ ತೆರಳಿದ್ದ ಯುವತಿಯ ಮೇಲೆ ಕಾಮುಕರು ಸಾಮಾಜಿಕ ಅತ್ಯಾಚಾರ ಎಸಗಿದ್ದರು. ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೆಲ ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಯುತ್ತಿದೆ. ಬಂಧಿತ ಆರೋಪಿಗಳು 18-23 ವರ್ಷದವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ರಾಬಿನ್ ದಾಸ್, ಕುಲದೀಪ್ ನಾಥ್, ಬಿಜೋಯ್ ರಾಭಾ, ಪಿಂಕು ದಾಸ್, ಗಗನ್ ದಾಸ್, ಸೌರವ್ ಬೋರೋ, ಮೃಣಾಲ್ ರಭಾ ಹಾಗೂ ದೀಪಂಕರ್ ಮುಖಿಯಾ ಎಂದು ಹೆಸರಿಸಲಾಗಿದೆ.
ಶುಕ್ರವಾರ (ಡಿ.13) ಮುಂಜಾನೆ ಗುವಾಹಟಿಯ ಗೋರ್ಚುಕ್ ಪೊಲೀಸ್ ಠಾಣೆಯ ಅಧಿಕಾರಿ ಧರ್ಮೇಂದ್ರ ಕಲಿತಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅತ್ಯಾಚಾರದ ವಿಡಿಯೋ ಬಂದಿತ್ತು. ಆ ವಿಡಿಯೋ ಆಧರಿಸಿ, ಪ್ರಕರಣ ದಾಖಲಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.