ಸಂಸತ್‌ನಲ್ಲಿ ಮಹಿಳಾ ಮಾರ್ದನಿ: ಬೆದರಿಸುವುದು, ಕಡೆಗಣಿಸುವುದು ಇನ್ನು ಸಾಧ್ಯವಿಲ್ಲ!

Date:

Advertisements

ಭಾಷಣ 1- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ: “ಪ್ರಕರಣಗಳ ವಿಚಾರಣೆ, ಜಾಮೀನು ನೀಡುವ ವಿಷಯದಲ್ಲಿ ನ್ಯಾಯಾಂಗ ಪತ್ರಕರ್ತರಾದ ಅರ್ನಾಬ್‌ ಗೋಸ್ವಾಮಿಗೆ ಹಾಗೂ ಮೊಹಮ್ಮದ್‌ ಜುಬೈರ್‌ ಸೇರಿದಂತೆ ಮುಂತಾದವರಿಗೆ ತಾರತಮ್ಯವೆಸಗಿರುವುದನ್ನು ಎಲ್ಲರೂ ನೋಡಿದ್ದಾರೆ. ದುರದೃಷ್ಟವಶಾತ್‌ ಜುಬೈರ್‌, ಉಮರ್‌ ಖಲೀದ್‌, ವಕಾಲೀದ್‌ ಸಫಿ ಸೇರಿದಂತೆ ಹಲವರು ವ್ಯವಸ್ಥೆಯ ವಿರುದ್ಧ ಧನಿ ಎತ್ತಿದ್ದಕ್ಕೆ ಜಾಮೀನು ನೀಡಲು ಇನ್ನಿಲ್ಲದ ತೊಂದರೆ ನೀಡಲಾಯಿತು. ಹಿರಿಯ ಪತ್ರಕರ್ತರಾದ ಮೊಹಮ್ಮದ್‌ ಜುಬೈರ್‌ ಅವರಿಗೆ ಕೇವಲ ದ್ವೇಷ ಭಾಷಣ ದಾಖಲಿಸಿರುವುದಕ್ಕೆ ಎಫ್‌ಐಆರ್‌ ದಾಖಲಿಸಲಾಯಿತು. ಸುಪ್ರೀಂ ಕೋರ್ಟ್ ಕೂಡ ಆಪಾದಿತನ ವಿರುದ್ಧ ಗಂಭೀರ ಪ್ರಕರಣ ಹಾಗೂ ಆರೋಪ ದಾಖಲಾಗುವವರೆಗೂ ಕೋರ್ಟ್‌ಗಳು ಎಫ್‌ಐಆರ್‌ ದಾಖಲಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿವೆ. ಆದರೆ ಇದ್ಯಾವುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ನ್ಯಾಯಸ್ಥಾನದಲ್ಲಿರುವ ಕೆಲವರು ಆಡಳಿತ ನಡೆಸುತ್ತಿರುವವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕೆಲ ನ್ಯಾಯಮೂರ್ತಿಗಳಂತೂ ದೇವರೊಂದಿಗೆ ಖಾಸಗಿ ಸಂಭಾಷಣೆ ನಡೆಸಿ ನಂತರ ತೀರ್ಪು ನೀಡಿರುವುದಾಗಿ ಹೇಳುತ್ತಾರೆ. ಕಳೆದ 10 ವರ್ಷಗಳಲ್ಲಿ ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಸೊಹ್ರಾಬುದ್ದೀನ್‌ ಪ್ರಕರಣದ ತನಿಖೆ ನಡೆಸುತ್ತಿದ್ದ ನ್ಯಾಯಾಧೀಶರಾದ ಬ್ರಿಜ್‌ಗೋಪಾಲ್ ಹರ್‌ಕಿಶನ್ 2014ರಲ್ಲಿ ಅಸಹಜವಾಗಿ ಸಾವಿಗೀಡಾಗುತ್ತಾರೆ. ಕೆಲವರ ತೃಪ್ತಿಗಾಗಿ ಕೋಟ್ಯಂತರ ಜನರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ.”

ಭಾಷಣ 2 – ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಸಂಸದೆ: ”ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಭರವಸೆ ಇದೆ. ಈ ಭರವಸೆ ರಕ್ಷಣಾತ್ಮಕ ಕವಚವಾಗಿದೆ. ಆದರೆ ಈಗ ಒಡೆಯುವ ಕೆಲಸ ಆರಂಭವಾಗಿದೆ. ಲ್ಯಾಟರಲ್ ಎಂಟ್ರಿ ಮತ್ತು ಖಾಸಗೀಕರಣದ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸುವ ಕೆಲಸ ಸರ್ಕಾರ ಮಾಡುತ್ತಿದೆ. ದೇಶದ ಜನತೆ ಮಾತ್ರ ಈ ಸಂವಿಧಾನವನ್ನು ಸುರಕ್ಷಿತವಾಗಿ ಇಡುತ್ತಾರೆ ಎಂಬುದು ಈ ಚುನಾವಣೆಯಲ್ಲಿ ಅವರಿಗೆ ತಿಳಿಯಿತು. ಈ ಚುನಾವಣೆಯಲ್ಲಿ ಸೋಲು-ಗೆಲುವು, ಸಂವಿಧಾನ ಬದಲಿಸುವ ಮಾತು ಈ ದೇಶದಲ್ಲಿ ನಡೆಯುವುದಿಲ್ಲ. ಇಂದು ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ಜಾತಿಗಣತಿ ಬಗ್ಗೆ ಚರ್ಚೆ ನಡೆಯಿತು. ಹೀಗಾಗಿ ಯಾರ ಸ್ಥಿತಿಗತಿ ಹೇಗೆ ಇದೆ ಎಂಬುದು ನಮಗೆ ತಿಳಿಯುವುದು ಮುಖ್ಯ. ವಿಪಕ್ಷಗಳು ಇಂತಹ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿದರೆ ಆಡಳಿತ ನಡೆಸುತ್ತಿರುವವರು, ‘ನಾವು ದನಗಳನ್ನು ಕದಿಯುತ್ತೇವೆ, ನಾವು ಮಂಗಳಸೂತ್ರವನ್ನು ಕದಿಯುತ್ತೇವೆ’ ಎನ್ನುತ್ತಾರೆ. ಆದರೆ ಮಣಿಪುರ, ಹಾಥರಸ್‌ ಹಾಗೂ ಸಂಭಲ್‌ನ ಹಿಂಸಾಚಾರದ ಸಂದರ್ಭಗಳಲ್ಲಿ ಮೌನವಾಗಿದ್ದಾರೆ.”

ಮೇಲಿನ ಇಬ್ಬರು ಮಹಿಳಾ ಸಂಸದರು ಡಿಸೆಂಬರ್‌ 13ರಂದು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಕೇಂದ್ರವು ಹೇಗೆ ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವದ ಪರವಾಗಿ ಮಾತನಾಡುವವರನ್ನು ಯಾವ ರೀತಿ ಹತ್ತಿಕ್ಕುತ್ತಿದೆ. ಆಡಳಿತ ನಡೆಸುತ್ತಿರುವವರು ಮಾತ್ರವಲ್ಲದೆ ನ್ಯಾಯಾಂಗದ ಕೆಲವರು ಕೂಡ ಸರ್ಕಾರದ ಜೊತೆ ಸೇರಿಕೊಂಡು ವ್ಯವಸ್ಥೆಯ ವಿರುದ್ಧ ಮಾತನಾಡುವವರನ್ನು ಸದೆಬಡಿಯುತ್ತಿದ್ದಾರೆ ಎಂಬ ತಮ್ಮ ಆಕ್ರೋಶದ ಕಿಚ್ಚನ್ನು ಹೊರಹಾಕಿದರು. ಪ್ರಿಯಾಂಕಾ ಗಾಂಧಿ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದರೆ, ಮಹುವಾ ಮೊಯಿತ್ರಾ ಅವರು ಎರಡನೇ ಬಾರಿ ಸಂಸದೆಯಾಗಿದ್ದಾರೆ.

Advertisements

ಸಂಸತ್ತಿನ ಉಭಯ ಸದನಗಳಲ್ಲಿ ಇರುವ 113 (ಲೋಕಸಭೆ 74, ರಾಜ್ಯಸಭೆ 39) ಮಹಿಳಾ ಸದಸ್ಯರಲ್ಲಿ ಒಂದಿಷ್ಟು ಮಂದಿ ಆಡಳಿತದ ತಪ್ಪುಗಳನ್ನು ಬೆರಳು ಮಾಡಿ ತೋರಿಸುವುದರಲ್ಲಿ ಯಾವುದೇ ಹಿಂಜರಿಕೆ ಪಡುವುದಿಲ್ಲ. ತಮಗೆ ಸಿಕ್ಕ ಒಂಚೂರು ಕಾಲಾವಕಾಶದಲ್ಲಿಯೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಾವೆ ಮೇಲು ಎಂದು ಹೇಳಿಕೊಳ್ಳುವ ಪುರುಷ ಸಮಾಜ ಸಂಸತ್ತಿನಲ್ಲಿ ಹೆಚ್ಚು ಬಾಯಿಬಿಡುವುದಿಲ್ಲ ಇಲ್ಲವೆ ತಮಗ್ಯಾಕೆ ಇಲ್ಲಸಲ್ಲದ ಉಸಾಬರಿ ತಮ್ಮ ಅನುಕೂಲ ನೋಡಿಕೊಂಡು ಸುಮ್ಮನಿದ್ದುಬಿಡುತ್ತದೆ. ಲೋಕಸಭೆಯಲ್ಲಿ 469 ಹಾಗೂ ರಾಜ್ಯಸಭೆಯಲ್ಲಿ 206 ಪುರುಷರು ಪ್ರತಿನಿಧಿಸಿದರೂ ಸರ್ಕಾರದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಬಗ್ಗೆ ಯಾರೊಬ್ಬರು ದಿಟ್ಟವಾಗಿ ಮಾತನಾಡಿದ್ದು ಕಡಿಮೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗೆ ಆಗಬೇಕಾದ್ದು ಬಹಳಷ್ಟಿದೆ

ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂತಹ ಕೆಲವು ನಾಯಕರು ಮಾತ್ರ ಕೇಂದ್ರದ ವಿರುದ್ಧ ಆಗಾಗ ಚಾಟಿ ಬೀಸುತ್ತಾರೆ. ಆಡಳಿತ ಪಕ್ಷದ ಸದಸ್ಯರಂತೂ ತಮ್ಮ ಕ್ಷೇತ್ರ, ವ್ಯವಸ್ಥೆಯ ಲೋಪಗಳ ಬಗ್ಗೆ ಮಾತನಾಡುವುದಿರಲಿ ಪ್ರಧಾನಿ, ಗೃಹ ಸಚಿವರ ಎದುರು ನಿಲ್ಲಲು ನಡುಗುತ್ತಾರೆ. ಆಡಳಿತ ಪಕ್ಷವನ್ನು ಪ್ರತಿನಿಧಿಸುವ ಮಹಿಳಾ ಸದಸ್ಯರನ್ನು ಹೊಗಳುಭಟ್ಟರನ್ನಾಗಿ ಮಾಡಲಾಗುತ್ತದೆ ಅಥವಾ ಧನಿ ಅಡಗಿಸಲಾಗಿದೆ. ಯಾರೊಬ್ಬರಿಗೂ ಸರ್ಕಾರದ ವಿರುದ್ಧ ಮಾತನಾಡಲು ಅವಕಾಶವೆ ನೀಡುವುದಿಲ್ಲ. ನಿನ್ನೆಯ ಭಾಷಣದಲ್ಲಿ ಸರ್ಕಾರದ 10 ವರ್ಷಗಳ ದುರಾಡಳಿತದ ಬಗ್ಗೆ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿದ್ದಕ್ಕೆ ಲೋಕಸಭೆಯಲ್ಲಿಯೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಬಹಿರಂಗವಾಗಿ ಮಹುವಾಗೆ ಬೆದರಿಕೆ ಹಾಕಿದ್ದಾರೆ. ಈ ರೀತಿಯಲ್ಲಿ ಬೆದರಿಕೆಯೊಡ್ಡುವುದು ಮಹಿಳಾ ಸದಸ್ಯರ ದನಿಯನ್ನು ದಮನಿಸುವುದಲ್ಲದೆ ಮತ್ತೇನು ಅಲ್ಲ. ಮಹಿಳೆಯರ ಪ್ರಾತಿನಿಧ್ಯ ಅಥವಾ ಅವಕಾಶ ನೀಡುವುದು ಯಾರಿಗೂ ಇಷ್ಟವಿಲ್ಲ.

ಕೇಂದ್ರ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 18ನೇ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಶೇ.13.6 ರಷ್ಟಿದೆ. 2019ರ 17ನೇ ಲೋಕಸಭೆಯಲ್ಲಿ ಶೇ.14.3 ಮಂದಿ ಸದಸ್ಯರಿದ್ದರು. ಅಂದರೆ 77 ಸ್ತ್ರೀ ಪ್ರತಿನಿಧಿಗಳು ಸಂಸದರಾಗಿದ್ದರು. 1991ರ ಚುನಾವಣೆಯಿಂದಲೂ ಕೆಳಮನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಕನಿಷ್ಠವಾಗಿದೆ. 2014ರ 16ನೇ ಲೋಕಸಭೆಯಲ್ಲಿ ಶೇಕಡಾವಾರು 10.7ರೊಂದಿಗೆ 58 ಮಹಿಳಾ ಸದಸ್ಯರಿದ್ದರು.

2009ರ 15ನೇ ಲೋಕಸಭೆಯಲ್ಲಿ ಕೇವಲ 45(ಶೆ.8.3) ಮಂದಿ ಸದಸ್ಯರಿದ್ದರು. 2004ರಲ್ಲಿ 49 ಮಂದಿ ಮಹಿಳೆಯರು(ಶೇ.9) ಪ್ರತಿನಿಧಿಸಿದ್ದರು. ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ 1971-77ರ 5ನೇ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ 28(ಶೇ.5.4) ಮಾತ್ರ ಇದ್ದರೆ, 7ನೇ ಲೋಕಸಭೆಯಲ್ಲಿ 32(5.9) ಮಂದಿ ಮಾತ್ರ ಸದಸ್ಯರಿದ್ದರು. ಆಗಲೂ ಪುರುಷ ಸದಸ್ಯರು ಬಹುಪಾಲು ಸಂಸತ್ತನ್ನು ಆವರಿಸಿದ್ದರು.

ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿಯಿಂದ 30, ಕಾಂಗ್ರೆಸ್‌ನಿಂದ 13 ಮಂದಿ ಮಹಿಳೆಯರು ಸದಸ್ಯರಾಗಿ ಚುನಾಯಿತರಾಗಿದ್ದಾರೆ. 18ನೇ ಲೋಕಸಭೆಯ ಮುಖ್ಯವಾದ ಸಂಗತಿಯಂದರೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಿಂದ 11 ಮಂದಿ ಸದಸ್ಯರಾಗಿರುವುದು. ಉಳಿದ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳಲ್ಲಿ ಮಹಿಳೆಯ ಪ್ರಾತಿನಿಧ್ಯ ಮೂರನ್ನು ದಾಟುವುದಿಲ್ಲ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಹೇಳುವುದಾದರೆ ಚರ್ಚೆಗಳು ಮಾತ್ರ ಜೋರಾಗಿ ನಡೆಯುತ್ತದೆ. ಹೊರಗೂ ಕೂಡ ಚುನಾವಣಾ ವಿಷಯವಾಗಿ ಏರುಧ್ವನಿಯಲ್ಲಿ ಭಾಷಣಗಳನ್ನು ಮಾಡಲಾಗುತ್ತದೆ. ಆದರೆ ಜಾರಿಗೊಳಿಸಬೇಕಾದ ಸಂದರ್ಭದಲ್ಲಿ ಪುರುಷ ಸಮಾಜ ಮಾತನಾಡುವುದಿಲ್ಲ. ಇದಕ್ಕೆ ಆಡಳಿತ, ಪ್ರತಿಪಕ್ಷ ಎಂಬ ಪಕ್ಷಭೇದವಿಲ್ಲ. ಕಡೆಗಣಿಸುವುದರಲ್ಲಿ ಎಲ್ಲರದು ಸಮಪಾಲು. ಬಹುತೇಕ ಎಲ್ಲರಲ್ಲೂ ತಮ್ಮನ್ನು ಮೀರಿ ಬೆಳೆಯಬಾರದು ಎಂಬ ಭಾವನೆ ಇದೆ.

ಮಹುವಾ ಮೊಯಿತ್ರಾ ಹಾಗೂ ಪ್ರಿಯಾಂಕಾ ಗಾಂಧಿ ಅವರ ನಿನ್ನೆಯ ಭಾಷಣ ನಿಜವಾಗಿಯೂ ಅದ್ಭುತವಾಗಿತ್ತು. ಪುರುಷರು ತಾವು ಮಾತನಾಡದಿದ್ದ ಸಂದರ್ಭದಲ್ಲಿ ಈ ಇಬ್ಬರು ಸಂಸದೆಯರು ವ್ಯವಸ್ಥೆಯ ವಿರುದ್ಧ ಧನಿಯೆತ್ತಿರುವುದು ಮಹಿಳಾ ಸದಸ್ಯರಿಗೆ ಮಾತ್ರವಲ್ಲದೆ, ಮಹಿಳಾ ಪೀಳಿಗೆಗೂ ಹೊಸ ಉತ್ಸಾಹವಾಗಿದೆ. ಇನ್ನು ಮುಂದಾದರೂ ಎಲ್ಲ ಮಹಿಳಾ ಸದಸ್ಯೆಯರು ಸಂಸತ್ತಿನಲ್ಲಿ ದೇಶದ ಹಿತಾಸಕ್ತಿ ಜೊತೆ ಸ್ತ್ರೀಯರ ಸಮಸ್ಯೆಗಳ ಬಗ್ಗೆಯೂ ಜನತೆಗ ಕಣ್ಣು ತೆರಸಬೇಕಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X