ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಈ ಚರಿತ್ರೆ. ನಮ್ಮ ಚರಿತ್ರೆಯನ್ನ ನಾವು ನೆನಪಿಟ್ಟುಕೊಳ್ಳಬೇಕು ಎಂದು ಸಾಹಿತಿ ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.
ಕಾವ್ಯಮನೆ ಪ್ರಕಾಶನದಿಂದ ಪ್ರಕಟಗೊಂಡ ಅಬ್ದುಲ್ ಹೈ ಅವರ ತೋರಣಗಲ್ಲು ಚಾರಿತ್ರಿಕ ಅಧ್ಯಯನ ಕೃತಿಯನ್ನು ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತೋರಣಗಲ್ಲಿನ ಸಾಂಸ್ಕೃತಿಕ, ಬೌಗೊಳಿಕ, ಚಾರಿತ್ರಿಕ ಇತಿಹಾಸವನ್ನು, ಐತಿಹಾಸಿಕ ಘಟಕಗಳು, ಸಂಗತಿಗಳು ಸಮಗ್ರ ಚಿತ್ರಣಗಳೊಂದಿಗೆ ಓದುಗರ ಎದೆಯನ್ನು ತಟ್ಟುವಲ್ಲಿ ಅಧ್ಯಯನ ಕೃತಿಯು ಸೃಜನಶೀಲವಾಗಿದೆ. ನಮ್ಮನ್ನು ಮುಂದೆ ನಡೆಸಿಕೊಂಡು ಹೋಗುವುದೇ ಚರಿತ್ರೆ. ನಮ್ಮ ಈ ನಾಡಿನ ಚರಿತ್ರೆಯನ್ನು ನೆನಪಿಸಿಕೊಳ್ಳಬೇಕು ಅಂತ ತೋರಣಗಲ್ಲಿನ ಚರಿತ್ರೆಯನ್ನು ಅಬ್ದುಲ್ ಹೈ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ತೋರಣಗಲ್ಲ ಅಂದರೆ ಒಂದು ಕಾಲದಲ್ಲಿ ಒಂದು ಕಾಲದಲ್ಲಿ ‘ವಿಜಯನಗರ’ ಎಂದು ಬೆಂಗಳೂರಿನಂತ ದೂರದ ಊರಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ತೋರಣಗಲ್ಲ ಎಂದರೆ, ‘ಜಿಂದಾಲ್’ ಎಂದು ಗುರುತಿಸುವ ಮಟ್ಟಿಗೆ ಬಂದಿದೆ ವಿಜಯನಗರ ಇತಿಹಾಸ ಮರೆತು ಹೋಗುವಂತ ಸಂದರ್ಭ ಬಂದಿದೆ. ಇದು ಬೇಸರ ಸಂಗತಿ ಎಂದು ಸಾಹಿತಿ ವಸುಂಧರಾ ಭೂಪತಿ ಕಳವಳ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಎನ್.ಶಂಕರಪ್ಪ ತೋರಣಗಲ್, ನಮ್ಮ ಸಾಂಸ್ಕೃತಿಕ ನೆಲ, ಮಣ್ಣನ್ನು ನಾವು ಮರೆಯಬಾರದು. ತೋರಣಗಲ್ಲಿನ ಚಾರಿತ್ರಿಕ ಇತಿಹಾಸವನ್ನು ಶೇಖರಿಸಿ ಬರೆದಂತೆ ಈ ಪುಸ್ತಕವಿದೆ. ಬರಹಗಾರರು ಕೃತಿಕಾರರಿಗೆ ಇಲ್ಲಿ ಇನ್ನಷ್ಟೂ ಮಾಹಿತಿ ಸಂಗ್ರಹಿಸಿ ಬರೆದಿದ್ದರೆ ಒಳ್ಳೆಯದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತೋರಣಗಲ್ಲಿನ ಪರಂಪರೆ, ಇತಿಹಾಸ, ಸಾಧಕರು, ಕಾರ್ಖಾನೆಗಳಿಂದ ಆಗುವಂತಹ ಪರಿಸರ ದುರ್ವಸ್ಥೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನಷ್ಟು ಸಾಧಕರ ಮತ್ತು ಕುರಿತು ತೋರಣಗಲ್ಲಿನ ಪರಂಪರೆಗಾಗಿ ಜೀವ ಸವೆಸಿದವರ ಕುರಿತು ಬರೆಯಬೇಕಿತ್ತು ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಅಬ್ದುಲ್ ಹೈ ತೋರಣಗಲ್ಲ ನೂರ್ ಜಹಾನ್, ಸಿಕಂದರ್ ಅಲಿ, ಸ್ನೇಹಲತಾ, ರಮ್ಜಾನ್ ಕಿಲ್ಲೆ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
