ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ (ಡಿಸೆಂಬರ್ 15) 38 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತೊಮ್ಮೆ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್‌ನಲ್ಲಿ ಎಎಪಿ ಟಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿದ್ದೀರಾ? ಆರೋಪ-ಜೈಲು-ಜಾಮೀನು; ದೆಹಲಿಯನ್ನು ಮತ್ತೆ ಗೆಲ್ಲುವರೇ ಕೇಜ್ರಿವಾಲ್?
ಕಸ್ತೂರ್ಬಾ ನಗರದಲ್ಲಿ ಹಾಲಿ ಶಾಸಕ ಮದನ್ ಲಾಲ್ ಬದಲಿಗೆ ರಮೇಶ್ ಪೆಹಲ್ವಾನ್‌ಗೆ ಎಎಪಿ ಟಿಕೆಟ್ ನೀಡಿದೆ. ರಮೇಶ್ ಪೆಹಲ್ವಾನ್ ಮತ್ತು ಕೌನ್ಸಿಲರ್ ಕುಸುಮ್ ಲತಾ ಇಂದೇ ಬಿಜೆಪಿಯಿಂದ ಎಎಪಿಗೆ ಸೇರ್ಪಡೆಯಾಗಿದ್ದಾರೆ.
SHARE MAX
— AAP Ka Mehta 🇮🇳 (@DaaruBaazMehta) December 15, 2024
Full List of 70 candidates for Delhi Elections by Aam Aadmi Party announced.
AAP Full List of 70 candidates below.
Phir Se Laayenge Kejriwal.@ArvindKejriwal to contest from New Delhi. pic.twitter.com/RJ2l4XDZD9
ಇನ್ನು ಎಎಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೋಪಾಲ್ ರೈ (ಬಾಬರ್‌ಪುರ), ಅಮಾನತುಲ್ಲಾ ಖಾನ್ (ಓಖ್ಲಾ) ಮತ್ತು ಸತ್ಯೇಂದ್ರ ಕುಮಾರ್ ಜೈನ್ (ಶಕುರ್ ಬಸ್ತಿ) ಹೆಸರುಗಳಿವೆ. ಮುಂಬರುವ ದೆಹಲಿ ಚುನಾವಣೆಗೆ ಎಎಪಿ ತನ್ನ 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.
ಎಎಪಿಯ ಮೊದಲ ಅಭ್ಯರ್ಥಿ ಪಟ್ಟಿಯಲ್ಲಿ, 11 ಹೆಸರುಗಳನ್ನು ಪ್ರಕಟಿಸಲಾಗಿತ್ತು. ಆ ಪೈಕಿ ಆರು ಮಂದಿ ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಎಎಪಿಗೆ ಸೇರ್ಪಡೆಗೊಂಡ ನಾಯಕರಾಗಿದ್ದು ಮೂವರು ಎಎಪಿ ನಾಯಕರಾಗಿದ್ದಾರೆ.
ಇದನ್ನು ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಕೈಲಾಶ್ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಅನಿಲ್ ಝಾ ಎಎಪಿ ಸೇರ್ಪಡೆ
ಎರಡನೇ ಪಟ್ಟಿಯಲ್ಲಿ ಎಎಪಿ 15 ಹಾಲಿ ಶಾಸಕರ ಹೆಸರನ್ನು ಬದಲಿಸಿದೆ. ಬದಲಿಗೆ ಎಎಪಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕರನ್ನು ಆಯ್ಕೆ ಮಾಡಿದೆ.
ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಶೀಘ್ರದಲ್ಲೇ ಚುನಾವಣೆಯ ಘೋಷಣೆಯನ್ನು ಮಾಡಲಿದೆ.