ಗುಬ್ಬಿ | ಗುಂಡುತೋಪು ಹೆಸರಿನಲ್ಲಿ ಇಡೀ ಅಂಕಳಕೊಪ್ಪ ಗ್ರಾಮವನ್ನೇ ಒಕ್ಕಲೆಬ್ಬಿಸುವ ಹುನ್ನಾರ : ಮಾಜಿ ಶಾಸಕ ಮಸಾಲಾ ಜಯರಾಮ್

Date:

Advertisements

 ನೂರಾರು ವರ್ಷದಿಂದ ಏಳೆಂಟು ತಲೆಮಾರು ಜನರು ಬದುಕು ಕಟ್ಟಿಕೊಂಡ ಅಂಕಳಕೊಪ್ಪ ಗ್ರಾಮಕ್ಕೆ ಏಕಾಏಕಿ ಆಗಮಿಸಿದ ತಾಲ್ಲೂಕು ಆಡಳಿತ ಸರ್ವೇ ನಡೆಸಿ ಸುಮಾರು 70 ಮನೆಗಳು ಗುಂಡುತೋಪು ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿರುವುದು ಖಂಡನೀಯ. ಅವೈಜ್ಞಾನಿಕ ಸರ್ವೇ ಸ್ಕೆಚ್ ಹಿಡಿದು ಮುಗ್ಧ ಜನರನ್ನು ಹೆದರಿಸಿ ಮನೆ ಒಡೆಯಲು ಬಂದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಸಂತ್ರಸ್ತರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನೂರಾರು ವರ್ಷದಿಂದ ಸರ್ಕಾರದ ಎಲ್ಲಾ ಸವಲತ್ತು ಪಡೆದ ಈ ಗ್ರಾಮದಲ್ಲಿ ನೀರು, ರಸ್ತೆ, ದೀಪ, ಕರೆಂಟ್, ಜಲ ಜೀವನ್ ಮಿಷನ್ ನಳ ಸಂಪರ್ಕ ಹೀಗೆ ಅನೇಕ ಸವಲತ್ತು ಒದಗಿಸಿದ ಗ್ರಾಮ ಪಂಚಾಯಿತಿ ಕಂದಾಯ ಕೂಡಾ ವಸೂಲಿ ಮಾಡಿದೆ. ಇಖಾತೆ, ಇಸ್ವತ್ತು ಕೂಡಾ ಮಾಡಿಕೊಟ್ಟು ಬ್ಯಾಂಕ್ ಗಳು ಸಾಲವನ್ನು ಕೂಡಾ ನೀಡಿದೆ. ಇಷ್ಟೆಲ್ಲಾ ಅನುಕೂಲ ಪಡೆದ ಗ್ರಾಮಸ್ಥರನ್ನು ಹೇಗೆ ಒಕ್ಕಳೆಬ್ಬಿಸುತ್ತೀರಿ ಎಂದು ಪ್ರಶ್ನಿಸಿದರು.

ಯಾವುದೇ ಸರ್ಕಾರಿ ಯೋಜನೆ , ಕಟ್ಟಡಗಳು ನಮ್ಮೂರಿಗೆ ಮಂಜೂರಾಗಿಲ್ಲ. ಸರ್ಕಾರದ ಉದ್ದೇಶಕ್ಕೆ ಬಳಕೆ ಆಗಬೇಕಾದ ಜಾಗ ಸರಿಯಾಗಿ ನಿಗದಿ ಮಾಡಿಲ್ಲ. ಇಡೀ ಗ್ರಾಮವನ್ನು ಸ್ಕೆಚ್ ನಲ್ಲಿ ಸೇರಿಸಿದ ಸರ್ವೇ ಅವೈಜ್ಞಾನಿಕ. ಸರ್ವೇ ನಂಬರ್ 168 ರಲ್ಲಿ 6 ಎಕರೆ ಗುಂಡುತೋಪು ಜಾಗ ಈ ಗ್ರಾಮದ ಪಕ್ಕದಲ್ಲಿರುತ್ತದೆ. ಯಾವ ಉದ್ದೇಶಕ್ಕೆ ಇಡೀ ಗ್ರಾಮವನ್ನು ಖಾಲಿ ಮಾಡಿಸಲು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮುಂದಾಗಿದ್ದಾರೆ ತಿಳಿದಿಲ್ಲ. ಏಕಾಏಕಿ ನಾರನಹಳ್ಳಿ ಬಳಿ ನಿಮಗೆ ಜಾಗ ನೀಡುತ್ತೇವೆ ಎನ್ನುತ್ತಿದ್ದಾರೆ. ಲೋಕಾಯುಕ್ತ ಹೆಸರು ಮುಂದೆ ತಂದು ಮುಗ್ಧ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ದುಡ್ಡಿಗಾಗಿ ಇದೆಲ್ಲಾ ಮಾಡುವುದಾದರೆ ಅದನ್ನೂ ಕುಳಿತು ಮಾತನಾಡೋಣ ಎಂದು ಕುಟುಕಿದರು.

Advertisements

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆದ ಇಲ್ಲಿನ ಬಡ ರೈತರು ತಮ್ಮ ಒಡವೆ ಮಾರಿ ಮನೆ ಕಟ್ಟಿಸಿಕೊಂಡಿದ್ದಾರೆ. ನೂರಾರು ವರ್ಷಗಳಿಂದ ಯಾರು ಕೇಳದ ಗುಂಡುತೋಪು ಜಾಗ ಎಂಬ ಮಾತು ಇಲ್ಲಿನ ಜನರಿಗೆ ಆತಂಕ ತಂದಿದೆ. ಜೆಸಿಬಿ ಯಂತ್ರಗಳನ್ನು ತಂದು ಮನೆಗಳನ್ನು ಕೆಡವಲು ತಾಲ್ಲೂಕು ಆಡಳಿತ ಮುಂದಾದರೆ ನಮ್ಮ ಹೆಣಗಳ ಮೇಲೆ ಜೆಸಿಬಿ ಹರಿಸಿ ಮುಂದುಬರೆಯಬೇಕಿದೆ ಎಂದು ಎಚ್ಚರಿಸಿದ ಅವರು ಗುಂಡುತೋಪು ಒತ್ತುವರಿ ಮಾಡಿರುವ ನೂರಾರು ಸ್ಥಳವನ್ನು ಬಿಟ್ಟು ಬಡವರ ವಿರುದ್ಧ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕಾನೂನು ಬೆದರಿಕೆಯೊಡ್ಡಿದ್ದೀರಿ. ತಾಲ್ಲೂಕಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡಗಳು, ಮದುವೆ ಮನೆ ಕಟ್ಟಿರುವ ನಿದರ್ಶನವಿದೆ. ಎಲ್ಲವನ್ನೂ ಖುಲ್ಲಾ ಮಾಡುವಿರಾ ಎಂದು ಪ್ರಶ್ನಿಸಿ, ನೂರಾರು ವರ್ಷದಿಂದ ವಾಸವಿರುವ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಬಿಟ್ಟು ಗ್ರಾಮಕ್ಕೆ ಒಳ್ಳೆಯ ಅನುಕೂಲ ಮಾಡಲು ಪ್ರಯತ್ನ ಮಾಡಿ ಎಂದು ತಿಳಿಸಿದರು.

ವರದಿ- ಎಸ್. ಕೆ. ರಾಘವೇಂದ್ರ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X