ಬ್ರಿಸ್ಬೇನ್ನಲ್ಲಿರುವ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ, ಜಸ್ಪ್ರೀತ್ ಬೂಮ್ರಾ, ಆಕಾಶ್ ದೀಪ್, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಸಹಾಯದಿಂದ ಭಾರತವು ಫಾಲೋ ಆನ್ ಆಗುವುದನ್ನು ತಪ್ಪಿಸಿಕೊಂಡಿದೆ.
ಮಳೆಯ ಅಡೆತಡೆಗಳ ನಡುವೆ ನಡೆದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತವು 74.5 ಓವರ್ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 252 ರನ್ಗಳನ್ನು ಪೇರಿಸಿದೆ.
ಇದನ್ನು ಓದಿದ್ದೀರಾ? IND vs AUS | ಆಸೀಸ್ 445ಕ್ಕೆ ಆಲ್ಔಟ್; ಭಾರತಕ್ಕೆ ಆರಂಭಿಕ ಆಘಾತ, ನಿರಾಶೆ ಮೂಡಿಸಿದ ಕೊಹ್ಲಿ
ಭಾರತಕ್ಕೆ ಫಾಲೋ ಆನ್ ತಪ್ಪಿಸಲು ಒಟ್ಟು 245 ರನ್ಗಳ ಅಗತ್ಯವಿತ್ತು. ಆದರೆ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಜೊತೆಯಾಟವು 39 ರನ್ಗಳನ್ನು ಪಡೆದುಕೊಂಡಿದೆ. ಜೊತೆಗೆ 10ನೇ ವಿಕೆಟ್ ಅನ್ನು ಕೂಡಾ ಉಳಿಸಿಕೊಂಡಿದೆ.
ಕೆ ಎಲ್ ರಾಹುಲ್ 84 ರನ್ ಪಡೆದರೆ, ರವೀಂದ್ರ ಜಡೇಜ 77 ರನ್ ಗಳಿಸಿದರು. ಕೊನೆಯಲ್ಲಿ ಆಕಾಶ್ ದೀಪ್ 27 ರನ್ ಗಳಿಸಿದರು. ಜಸ್ಪ್ರೀತ್ ಬೂಮ್ರಾ 10 ರನ್ ಪಡೆದು ಔಟ್ ಆಗದೆ ಉಳಿದರು.
ಇದನ್ನು ಓದಿದ್ದೀರಾ? ಮೊದಲ ಟೆಸ್ಟ್ ಪಂದ್ಯ | ಅಶ್ವಿನ್ ಬಲದಿಂದ ಬಾಂಗ್ಲಾದೇಶವನ್ನು ಮಣಿಸಿದ ಭಾರತ
ಪಂದ್ಯದಲ್ಲಿ ಇನ್ನು ಒಂದು ದಿನಗಳು ಮಾತ್ರ ಬಾಕಿಯಿದೆ. ಆದರೆ ಭಾರತ ಇನ್ನೂ 193 ರನ್ಗಳ ಹಿನ್ನಡೆ ಹೊಂದಿದೆ.
Jasprit Bumrah just smashes Pat Cummins for six! #AUSvIND pic.twitter.com/vOwqRwBaZD
— cricket.com.au (@cricketcomau) December 17, 2024
ಏನಿದು ಫಾಲೋ ಆನ್?
ಫಾಲೋ ಆನ್ ಎಂಬುದು ಟೆಸ್ಟ್ ಕ್ರಿಕೆಟ್ನಲ್ಲಿನ ಒಂದು ನಿಯಮವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿನ ತಂಡವು ಕನಿಷ್ಠ 200 ರನ್ಗಳ ಮುನ್ನಡೆ ಸಾಧಿಸದಿದ್ದರೆ ಮೊದಲ ಇನ್ನಿಂಗ್ಸ್ ಮುಗಿದ ತಕ್ಷಣ ಮತ್ತೆ ಬ್ಯಾಟಿಂಗ್ ಮಾಡಬೇಕಾಗುತ್ತದೆ.
