ರಾಯಚೂರು: ಜಿಲ್ಲೆಯಲ್ಲಿ ಮೈಸೂರು ಸೇಲ್ಸ್ ಇಂಟರನ್ಯಾಶನಲ್ ಲಿಮಿಟೆಡ್(ಎಂಎಸ್ಐಎಲ್) ಮದ್ಯ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದು ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಿಗದಿಪಡಿಸಿದ ದರಪಟ್ಟಿಯಂತೆ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಾಬುರಾವ್ ಒತ್ತಾಯಿಸಿದರು.
ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮದ್ಯದ ಮಳಿಗೆ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ದರ ನಿಗದಿಪಡಿಸುವ ಕಾರಣ ಕೂಲಿ ಕಾರ್ಮಿಕರು, ಸಾಮಾನ್ಯರು ಕಳ್ಳಬಟ್ಟಿ, ಸಿಎಚ್ ಮಿಶ್ರಿತ ಸೇಂದಿ ಸೇವನೆ ಮಾಡಿ ಆರೋಗ್ಯ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ ಕಾನೂನು ರೀತಿಯಲ್ಲಿ ಮದ್ಯ ಮಾರಾಟಕ್ಕೆ ಅನುಕೂಲ ಮಾಡಿಕೊಡಲು ಅಬಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಮುಖಂಡ ತಮೇಶ, ನರಸಿಂಹಲು ಉಪಸ್ಥಿತರಿದ್ದರು.
