ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರೈತರ ಬಳಕೆಗಾಗಿ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ(ಎನ್‌ಪಿಎಸ್‌ಎಸ್) ಎಂಬ ಹೊಸ ಅಪ್ಲಿಕೇಶನ್ ಅಭಿವೃದ್ಧಿ ಮಾಡಿದ್ದು, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಜನರಿಗೆ ಇದರ ಕುರಿತಾಗಿ ಮಾಹಿತಿ ಒದಗಿಸಲು ರಾಜ್ಯಾದ್ಯಂತ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.
ಬೆಂಗಳೂರು ಭಾರತ ಸರ್ಕಾರದ ಅಂಗಸಂಸ್ಥೆಯಾದ ಪ್ರಾದೇಶಿಕ ಕೇಂದ್ರ ಸಮಗ್ರ ಕೀಟ ನಿರ್ವಹಣಾ ಕೇಂದ್ರ(ಆರ್‌ಸಿಐಪಿಎಂಸಿ) ಮತ್ತು ಸಸ್ಯ ಸಂರಕ್ಷಣಾ, ಸಂಘರೋಧ ಹಾಗೂ ಸಂಗ್ರಹಣೆ ನಿರ್ದೇಶನಾಲಯ ಭಾರತ ಸರ್ಕಾರವು ಭಾರತದಲ್ಲಿ ಕೀಟಗಳ ಕಣ್ಗಾವಲು ಮತ್ತು ಅದರ ನಿರ್ವಹಣೆಯನ್ನು ಕ್ಷಿಪ್ರಗೊಳಿಸುವ ಗುರಿಯನ್ನು ಹೊಂದಿದೆ.
ಇದು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಈ ಎನ್‌ಪಿಎಸ್‌ಎಸ್ ಆ್ಯಪ್ ನಿಜಾವಧಿಯ ಕೀಟ ಮೇಲ್ವಿಚಾರಣೆ ಕುರಿತ ಸಮಯೋಚಿತ ಸಲಹೆಗಳು ಮತ್ತು ಪರಿಣಾಮಕಾರಿ ಕೀಟ ನಿರ್ವಹಣೆ ತಂತ್ರಗಳಿಗೆ ದೃಢವಾದ ವೇದಿಕೆಯನ್ನು ನೀಡುತ್ತದೆ. ಆದ್ದರಿಂದ ಬೆಂಗಳೂರಿನ ಆರ್‌ಸಿಐಪಿಎಂಸಿ ಸಂಸ್ಥೆಯ ಸಿಬ್ಬಂದಿ ವರ್ಗವು ಕಾರ್ಯಾಗಾರವನ್ನು ಡಿಸೆಂಬರ್ 10ರಂದು ಬೆಂಗಳೂರು ಗ್ರಾಮಾಂತರದಲ್ಲಿ, 12ರಂದು ಬೆಳಗಾವಿಯಲ್ಲಿ ಮತ್ತು 13ರಂದು ಧಾರವಾಡದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.
ಕೆಳಗಿನ ಕಾರಣಗಳಿಗಾಗಿ ಈ ಎನ್‌ಪಿಎಸ್‌ಎಸ್ ಅಪ್ಲಿಕೇಶನ್ ಉಪಯುಕ್ತವಾಗಿದೆ.
- ಇದರಲ್ಲಿ ಕೀಟ ಸಂಭವದ ಆರಂಭಿಕ ಪತ್ತೆ ಮತ್ತು ತುರ್ತು ಕ್ರಮದ ಬಗ್ಗೆ ಮಾಹಿತಿ ಒಳಗೊಂಡಿದೆ.
- ಇದರ ಮೂಲಕ ರೈತರಿಗೆ ಕೀಟ ಗುರುತಿಸುವಿಕೆ, ಕೀಟ ಕಣ್ಗಾವಲು ಮತ್ತು ಕೀಟ ನಿರ್ವಹಣೆ ಕುರಿತ ತಜ್ಞರ ಸಲಹೆಯನ್ನು ಸುಲಭ ಹಾಗೂ ಸಕಾಲದಲ್ಲಿ ಪಡೆಯಬಹುದಾಗಿದೆ.
- ಇದರಲ್ಲಿ ನುರಿತ ಕೃಷಿ ನಿರ್ವಾಹಕರು, ತರಬೇತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರಮುಖ ರೈತರು ಸಲ್ಲಿಸಿದ ನಿಜ ಅವಧಿಯ ಡೇಟಾವನ್ನು ಬಳಸಿಕೊಂಡು, ಕೀಟದಿಂದ ಉಂಟಾಗಲಿರುವ ಬೆಳೆ ನಷ್ಟವನ್ನು ಗುರುತಿಸಿ ಕೂಡಲೇ ಕಡಿಮೆ ಮಾಡಬಹುದಾಗಿದೆ.
- ಇದು ಕೀಟಗಳಿಂದಾಗುವ ಸಾಂಕ್ರಾಮಿಕ ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
- ಇದು ವಿವಿಧ ಸಾರ್ವಜನಿಕ ಏಜೆನ್ಸಿಗಳಿಗೆ ರಾಷ್ಟ್ರೀಯ ಕೀಟ ಸನ್ನಿವೇಶದ ಭಂಡಾರವನ್ನೇ ಒದಗಿಸುತ್ತೆ ಮತ್ತು ಕೀಟಗಳ ಹಾಟ್‌ಸ್ಪಾಟ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಆ ಮೂಲಕ ಸಸ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಪರಿಣಾಮಕಾರಿ ಕೆಲಸ ಮಾಡಲು ಸಹಕಾರಿಯಾಗಿದೆ. ಜತೆಗೆ ಸಸ್ಯ ಸಂರಕ್ಷಣಾ ನೀತಿಗಳನ್ನು ರೂಪಿಸಲು ಇದು ಸಹಾಯಕವಾಗಿದೆ.