ಮೆಕಾಲೆ ಶಿಕ್ಷಣ ಮಕ್ಕಳಲ್ಲಿ ಬದುಕಿನ ಮೌಲ್ಯಗಳು ಕುಸಿಯುತ್ತಿವೆ ಎಂದು ತಡೋಳಾ ರಾಜೇಶ್ವರ ಶಿವಚಾರ್ಯ ಸ್ವಾಮೀಜಿ ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಹಾಗೂ ಸ್ಪರ್ಧಾ ಸಂಕಲ್ಪ ಅಕಾಡೆಮಿ ವತಿಯಿಂದ ನಗರದ ಡಾ.ಚೆನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ಸಹಮಿಲನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದು ದೇಶದಲ್ಲಿ ಅನ್ನ, ವಸ್ತ್ರಕ್ಕೆ ಬರವಿಲ್ಲ. ಜ್ಞಾನ, ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಮೆಕಾಲೆ ಶಿಕ್ಷಣ ನಮ್ಮ ಸಂಸ್ಕೃತಿಗೆ ದಕ್ಕೆ ಬರುತ್ತಿದೆ. ಕುಟುಂಬ ಪ್ರೀತಿ ಮಾಯಾವಾಗುತ್ತಿದೆ. ವಿಲಾಸ ಬದುಕಿಗೆ ದಾರಿ ಮಾಡಿಕೊಡುತ್ತಿದೆ. ಇದರಿಂದ ಆದರ್ಶ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದೇವೆ. ಪಾಲಕರು ನಮ್ಮ ಮಕ್ಕಳಿಗೆ ದುಡಿಮೆಯ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಕಷ್ಟದ ಅರಿವು, ಬದುಕಿನ ಮೌಲ್ಯವನ್ನು ತಿಳಿಸಬೇಕು. ಪೋಷಕರು ಹಣ ಗಳಿಸುತ್ತಿದ್ದಾರೆ. ಆದರೆ ಸಂಸ್ಕೃತಿಯನ್ನು ದೂರುತ್ತಿದ್ದಾರೆ. ನಮ್ಮ ಪರಂಪರೆ, ಜ್ಞಾನ, ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಲು ಮುಂದಾಗಬೇಕು. ಮಕ್ಕಳಲ್ಲಿ ಬುದ್ಧಿ ಕೌಶಲ್ಯಗಳನ್ನು ಹೊರತರುವ ಶಿಕ್ಷಣ ವ್ಯವಸ್ಥೆ ನಾವು ರೂಪಿಸಿಕೊಳ್ಳಬೇಕಾಗಿದೆ. ದೇಶವನ್ನು ನಾವು ಹೇಗೆ ಉಳಿಸಿಕೊಳ್ಳಬೇಕೆಂಬ ಜವಾಬ್ದಾರಿ ನಮ್ಮ ನಮ್ಮೆಲ್ಲರ ಮೇಲಿದೆʼ ಎಂದರು.
ಪ್ರಚಲಿತ ವಿದ್ಯಮಾನದಲ್ಲಿ ಶಿಕ್ಷಣದ ವ್ಯವಸ್ಥೆ ಕುರಿತು ಅಶೋಕ್ ಹಂಚಲಿ ತಾಳಿಕೋಟೆ ಮಾತನಾಡಿ, ʼದೇಶ ಕಟ್ಟುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾಗಿರುವುದು. ಸಮೃದ್ಧ ಭಾರತ ನಿರ್ಮಿಸಲು ಶಿಕ್ಷಕರು ಪ್ರಮಾಣಿಕ ಪ್ರಯತ್ನ ಅತ್ಯಮೂಲ್ಯವಾದದ್ದುʼ ಎಂದರು.
ಪಂಚಮುಖಿ ಶಿಕ್ಷಣ ಕುರಿತು ವಿನಾಯಕ ಭಟ್ ಶೇಡಿಮನೆ ಧಾರವಾಡ ಹಾಗೂ ಆದರ್ಶ ಶಿಕ್ಷಕ ವಿಷಯ ಕುರಿತು ಪ್ರೊ. ಎಂ.ಎನ್. ಹೆಗಡೆ ಹಳವಳ್ಳಿ ವಿಶೇಷ ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ| ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ
ಕಾರ್ಯಕ್ರಮದಲ್ಲಿ ವೀಣಾ ಎಸ್.ಜಲಾದೆ ಅಧ್ಯಕ್ಷತೆ ವಹಿಸಿದ್ದರು. ಬೀದರ್ ವಿಶ್ವವಿದ್ಯಾಲಯ ಕುಲಸಚಿವೆ ಸುರೇಖಾ ಉದ್ಘಾಟಿಸಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಸೇರಿದಂತೆ ರಾಮಕೃಷ್ಣನ್ ಸಾಳೆ, ಓಂಕಾರ ಮಾಶೆಟ್ಟಿ
ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಂಯೋಜಕ ಶಿವಶರಣು ಚಾಂಬೋಳೆ, ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಅಧ್ಯಕ್ಷ ನಾಗೇಶ ಸ್ವಾಮಿ ಉಪಸ್ಥಿತರಿದ್ದರು. ಡಾ. ಪ್ರಿಯಾ ಮಹೇಂದ್ರಕರ್ ನಿರೂಪಿಸಿದರು.