ಬ್ರಿಸ್ಬೇನ್‌ನಲ್ಲಿರುವ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ 5ನೇ ದಿನದಂದು ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅಲ್ಲಿ 89/7 ಕ್ಕೆ ಡಿಕ್ಲೇರ್ ಘೋಷಿಸಿದ ಬಳಿಕ 275 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತಕ್ಕೆ ಮಳೆ ಅಡ್ಡಿಯಾಗಿದೆ. ಕೊನೆಗೆ ಪಂದ್ಯ ಡ್ರಾ ಘೋಷಿಸಲಾಗಿದ್ದು, ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಈ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಈಗ 275 ರನ್‌ಗಳ ಅಗತ್ಯವಿತ್ತು. ಆಸ್ಟ್ರೇಲಿಯಾ ಪರ ಆಡಿದ ಪ್ಯಾಟ್ ಕಮ್ಮಿನ್ಸ್ 22 ರನ್ ಗಳಿಸಿದರೆ ಅಲೆಕ್ಸ್ ಕ್ಯಾರಿ 20 ರನ್ ಗಳಿಸಿದರು. ಇವರಲ್ಲದೆ ಟ್ರಾವಿಸ್ ಹೆಡ್ ಕೂಡ 17 ರನ್ ಗಳಿಸಿದರು.
ಇದನ್ನು ಓದಿದ್ದೀರಾ? IND vs AUS ಟೆಸ್ಟ್ | ಭಾರತವನ್ನು ಫಾಲೋ ಆನ್‌ನಿಂದ ತಪ್ಪಿಸಿದ ಜಡೇಜ, ಬೂಮ್ರಾ, ಆಕಾಶ್
ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಮೂರು ವಿಕೆಟ್ ಪಡೆದರೆ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
ಆದರೆ ಈ ಗುರಿಯನ್ನು ಭಾರತ ಬೆನ್ನಟ್ಟುತ್ತಿದ್ದಂತೆ ಮಳೆ ಅಡ್ಡಿಯಾಗಿದೆ. ಈ ಪಂದ್ಯದ ಆರಂಭದಿಂದಲೇ ಮಳೆ ಅಡ್ಡಿಯಾಗುತ್ತಿದೆ. ಕೊನೆಗೆ ಪಂದ್ಯ ಡ್ರಾ ಘೋಷಿಸಲಾಗಿದೆ.
There is simply no stopping Jasprit Bumrah!#AUSvIND pic.twitter.com/rQ5Btkk4Cq
— cricket.com.au (@cricketcomau) December 18, 2024
