ಹಾಸನ ಜಿಲ್ಲಾಪಂಚಾಯತ್ ಕಚೇರಿಯ ಬಳಿ ಹಾಕಲಾದ ಶಾಸಕ ಎಚ್ ಡಿ ರೇವಣ್ಣ ಅವರ ಜನ್ಮದಿನಕ್ಕೆ ಶುಭ ಕೋರುವ ಫ್ಲೆಕ್ಸ್‌ನಲ್ಲಿ ಅತ್ಯಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಫೋಟೋ ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡ ಎಚ್ ಆರ್ ನವೀನ್ ಕುಮಾರ್ ಈ ದಿನದ ಜೊತೆಗೆ ಮಾತನಾಡಿ, “ಹಾಸನ ಜಿಲ್ಲೆಯ ಮಹಿಳೆಯರ ಘನತೆಯನ್ನು ಕುಂದು ತರುವಂತೆ, ನೂರಾರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಅದನ್ನೆಲ್ಲಾ ವಿಡಿಯೋ ಮಾಡಿಟ್ಟುಕೊಂಡು ವಿಚಾರಣಾಧೀನ ಕೈದಿಯಾಗಿರುವ ಪ್ರಜ್ವಲ್ ರೇವಣ್ಣನ ಫೋಟೋ ಬಳಸಿ ಫ್ಲೆಕ್ಸ್ ಹಾಕುವ ಮನಸ್ಥಿತಿಗೆ ಧಿಕ್ಕಾರ” ಎಂದು ರೈತ ಮುಖಂಡ ತಿಳಿಸಿದರು.
ಇದನ್ನೂ ಓದಿದ್ದೀರಾ? ಹಾಸನ | ಫೆಬ್ರವರಿಯೊಳಗೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡದಿದ್ದರೆ ಮತ್ತೆ ಹೋರಾಟ; ಜಯಕರ್ನಾಟಕ ಎಚ್ಚರಿಕೆ
ಇಂಥವರಿಂದಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು. ತಪ್ಪು ಮಾಡಿದವರು ಜೈಲಿನಿಂದ ಬೇಲ್ ಮೇಲೆ ಹೊರಬಂದರೆ ಅವರನ್ನು ಮೆರವಣಿಗೆ ಮಾಡಿ, ವಿಜಯೋತ್ಸವ ಆಚರಿಸುತ್ತಾರೆ. ಅವರ ಫೋಟೋಗಳಿಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಇದರ ವಿರುದ್ದ ಪ್ರಜ್ಞಾವಂತ ನಾಗರಿಕರು ದನಿ ಎತ್ತಬೇಕು ಎಂದರು.
