ಸಂಸತ್‌ನಲ್ಲಿ ತಳ್ಳಾಟ: ರಾಹುಲ್ ವಿಡಿಯೋವನ್ನು ಕ್ಷಣಾರ್ಧದಲ್ಲೇ ತಿರುಚಿದ ಬಿಜೆಪಿ!

Date:

Advertisements

ಗುರುವಾರ ಬೆಳಗ್ಗೆ ಸಂಸತ್‌ ಭವನ ಪ್ರವೇಶಿಸುವ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸಂಸದರ ನಡುವೆ ತಳ್ಳಾಟ ನಡೆದಿದೆ. ಸದನದೊಳಗೆ ಹೋಗಲು ಬಿಡದೆ, ತಮ್ಮನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ರಾಹುಲ್‌ ಅವರೇ ಬಿಜೆಪಿ ಸಂಸದರನ್ನು ತಳ್ಳಿದರೆಂದು ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಆರೋಪಿಸಿದ್ದಾರೆ. ಆ ಬಳಿಕ, ರಾಹುಲ್‌ ಅವರನ್ನು ನಮ್ಮ ಮುಂದಿದ್ದರು. ತಳ್ಳಾಟ ನಮ್ಮ ಹಿಂದಿನಿಂದ ಆರಂಭವಾಯಿತು ಎಂದು ಸಾರಂಗಿ ಹೇಳಿಕೊಂಡಿದ್ದಾರೆ.

ಈ ನಡುವೆ, ರಾಹುಲ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ಕೆಲವೇ ನಿಮಿಷಗಳಲ್ಲಿ ತಿರುಚಿದೆ. ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ರಾಹುಲ್ ಗಾಂಧಿ ತಾವೇ ಬಿಜೆಪಿ ಸಂಸದರನ್ನು ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂಬಂತೆ ಎಡಿಟ್ ಮಾಡಿ, ಸುಳ್ಳು ಮಾಹಿತಿ ಹಬ್ಬಿಸುತ್ತಿದೆ.

ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ತಾವೇ ಮ್ಯಾನ್ ಹ್ಯಾಂಡಲಿಂಗ್ ಮಾಡಿದ್ದನ್ನು ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದಾರೆ. ‘ಒಂದು ತಳ್ಳುವಿಕೆಯಿಂದ ಏನೂ ಆಗುವುದಿಲ್ಲ’ವೆಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಆ ಮೂಲಕ ಅವರ ಆಕ್ರಮಣಕಾರಿ ನಡವಳಿಕೆಯನ್ನು ನಾಚಿಕೆಯಿಲ್ಲದೆ ತಳ್ಳಿಹಾಕುತ್ತಾರೆ. ಹಿರಿಯ ಸಂಸದರೊಬ್ಬರ ತಲೆಗೆ ಪೆಟ್ಟು ಬಿದ್ದು ಇಬ್ಬರು ಸಂಸದರು ಆಸ್ಪತ್ರೆಗೆ ದಾಖಲಾಗಿರುವ ಘಟನೆಯನ್ನು ಅವರು ಕೀಳಾಗಿ ಕಾಣುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಟ್ವೀಟ್ ಮಾಡಿದ್ದಾರೆ.

Advertisements

ಆದರೆ, ರಾಹುಲ್‌ ಗಾಂಧಿ ಮಾತನಾಡಿರುವ ಪರಿಪೂರ್ಣ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆ ವಿಡಿಯೋದಲ್ಲಿ ವರದಿಗಾರರು ಕೇಳುವ ‘ಖರ್ಗೆ ಅವರನ್ನೂ ತಳ್ಳಲಾಗಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್‌ ಗಾಂಧಿ, “ಹೌದು, ಖರ್ಗೆ ಅವರನ್ನೂ ತಳ್ಳಲಾಗಿದೆ. ಆದರೆ, ಅಂತಹ ತಳ್ಳಾಟದಿಂದ ನಮಗೇನು ಆಗದು. ಆದರೆ ಇದು ಸಂಸತ್ತಿನ ಪ್ರವೇಶ ದ್ವಾರ. ಇಲ್ಲಿಂದ ಒಳಗೆ ಹೋಗುವುದು ನಮ್ಮ ಹಕ್ಕು. ಆದರೆ ಬಿಜೆಪಿ ಸದಸ್ಯರು ನಮ್ಮನ್ನು ಒಳಗೆ ಹೋಗದಂತೆ ತಡೆಯುತ್ತಿದ್ದರು” ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ಸ್ಪಷ್ಟ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ. ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ, ಬಿಜೆಪಿಯ ಐಟಿ ಸೆಲ್ ಹೆಡ್ ಅಮಿತ್ ಮಾಳವೀಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡು ತಮ್ಮ ದ್ವೇಷ ರಾಜಕಾರಣ ಮತ್ತು ವಾಚಾಳಿತನವನ್ನು ಪ್ರದರ್ಶಿಸಿದ್ದಾರೆ.

ಎಡಿಟೆಡ್ ವಿಡಿಯೋವನ್ನು ಹಂಚಿಕೊಂಡ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಫ್ಯಾಕ್ಟ್‌ಚೆಕರ್ ಮೊಹಮದ್ ಝುಬೇರ್, “ತೇಜಸ್ವಿ ಸೂರ್ಯ, ನಿಮಗೆ ಹಿಂದಿ ಅರ್ಥವಾಗುತ್ತದೆ ಎಂಬಂತೆ ಕಾಣುತ್ತಿದೆ. ಆದರೆ, ರಾಹುಲ್‌ ಹೇಳಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನೂ ತಳ್ಳಲಾಗಿದೆ. ಆದರೆ, ಇಂತಹ ತಳ್ಳಾಟದಿಂದ ನಮಗೇನು ಆಗದು ಎಂದಿದ್ದಾರೆ. ಅವರ ಪೂರ್ಣ ಹೇಳಿಕೆಯನ್ನು ನೀವು ಪರಿಶೀಲಿಸಬಹುದು” ಎಂದು ಛೇಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X