ಹುಬ್ಬಳ್ಳಿ | ಗಡಿಪಾರು ಗಿರಾಕಿ ಅಮಿತ್ ಶಾ, ಜೈಲಿನಲ್ಲಿ ಇರಬೇಕಿತ್ತು: ಗುರುನಾಥ್ ಉಳ್ಳಿಕಾಶಿ

Date:

Advertisements

ಸಂಸತ್ತಿನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂಬೇಡ್ಕರ್ ವೃತ್ತದ ಬಳಿ ವಿವಿಧ ಸಂಘಟನೆಗಳ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ, ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತ ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.

ಗುರುನಾಥ್ ಉಳ್ಳಿಕಾಶಿ ಅಂಬೇಡ್ಕರ್ ಅವರನ್ನು ಮಹಾ ಮಾನವತಾವಾದಿ ಎಂದು ಕರೆಯುತ್ತೇವೆ. ಹೀಗಾಗಿ ಅವರು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ವಿಶ್ವಕ್ಕೆ ಸೇರಿದವರು. ಅಂತಹ ಮಹಾನ್ ಬಾಬಾಸಾಹೇಬರ ಕುರಿತು ಅಮಿತ್ ಷಾ ಅವರು ತಮ್ಮ ಮನಸ್ಸಿನ ಒಳಗಿನ ಮನುವಾದವನ್ನು ಹೊರಹಾಕಿದ್ದಾರೆ. ಅಂಬೇಡ್ಕರ್ ಹೆಸರು ಹೇಳುವವರು ನರಕದಲ್ಲಿದ್ದಾರೆ ಮತ್ತು ಅಂಬೇಡ್ಕರ್ ಬಿಟ್ಟು ಬಿಜೆಪಿ ಹಿಂದೆ ಬರಲು ಜನರಮ್ನು ಆಹ್ವಾನಿಸುವ ಒಳಮರ್ಮದಿಂದ ಹೇಳಿಕೆ ಕೊಟ್ಟಿದ್ದಾರೆ. ಇವತ್ತಿಗೂ ಸಮಾಜದಲ್ಲಿ ಮನುವಾದ ಆಚರಣೆಯಲ್ಲಿದೆ. ಮೋದಿ ಮತ್ತು ಅಮಿತ್ ಷಾ ಇವತ್ತು ಸಂವಿಧಾನ ಮತ್ತು ಅಂಬೇಡ್ಕರ್ ಇರದೇ ಹೋಗಿದ್ದರೆ; ಗಡಿಪಾರು ಗಿರಾಕಿ ಜೈಲಿನಲ್ಲಿ ಹಾಗೂ ಪ್ರಧಾನಿ ಚಹಾ ಮಾರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಷಾ ದೇಶದ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು

Advertisements

ಅಮಿತ್ ಶಾ ಅವರಿಗೆ ವಾಕ್ ಸ್ವಾತಂತ್ರ್ಯ ಕೊಟ್ಟಿದ್ದೇ ಅಂಬೇಡ್ಕರ್‌ ಮತ್ತು ಅದಕ್ಕೂ ಪೂರ್ವ ನಾವೆಲ್ಲ ನರಕದಲ್ಲಿದ್ದೆವು. ಅಂಬೇಡ್ಕರ್ ಬಂದಮೇಲೆನೇ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆಗೆ ಒಳಗಾಗಿದ್ದ ಶೋಷಿತರು ಸ್ವರ್ಗಕ್ಕೇ ಏರಿದರು. ಬಹುಶಃ ಅಮಿತ್ ಷಾ ಅವರಿಗೆ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಈ ಕೂಡಲೇ ಅವರನ್ನು ಮನೆಗೆ ಕಳುಹಿಸುವ ಕೆಲಸವಾಗಬೇಕು ಎಂದು ಸಮತಾ ಸೈನಿಕ ದಳದ ಶಂಕರ್ ಅಜಮನೆ ಹೇಳಿದರು.

IMG 20241219 222224

ಮಹಿಳಾ ಸಂಘಟನೆಯ ಇಂಧುಮತಿ ಶೇರಗಾವಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯಗಳು ಇಂದಿಗೂ ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುತ್ತಿವೆ. ನಾವೆಂದೂ ಹಿಂದೂವಲ್ಲ ಮತ್ತು ಅಂಬೇಡ್ಕರ್ ಅವರು ವೈದಿಕರಿಂದ ತುಳಿತಕ್ಕೊಳಗಾದ ದಲಿತರನ್ನು ಸ್ವರ್ಗಕ್ಕೇರಿಸಿದರು.‌ ಅಂಬೇಡ್ಕರ್ ಅವರೇ ನಮಗೆ ನಿಜವಾದ ದೇವರಾಗಿದ್ದಾರೆ ಎಂದರು.

ದಸಂಸ ರಾಷ್ಟ್ರೀಯ ಅಧ್ಯಕ್ಷ ಸದಾನಂದ ತೇರದಾಳ ಮಾತ‌ನಾಡಿ, ಅಮಿತ್ ಶಾ ಪಾರ್ಲಿಮೆಂಟ್ ನಲ್ಲಿ ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ ಅನ್ನುವ ಫ್ಯಾಶನ್ ಆಗಿದೆ. ಇಷ್ಟು ಸಾರಿ ದೇವರನ್ನು ನೆನಪಿಸಿದ್ದರೆ 7 ಸಾರಿ ಸ್ವರ್ಗ ಸಿಗುತ್ತಿತ್ತು ಸಾರ್ವಜನಿಕವಾಗಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಭೂಮಿಯ ಮೇಲೆ ಬದುಕಿರುವ ಯಾವ ಒಬ್ಬ ವ್ಯಕ್ತಿಯಾದರೂ ಸ್ವರ್ಗವನ್ನು ನೋಡಿದ್ದಾನೆಯೇ? ಮನುವಾದಿ ಬ್ರಾಹ್ಮಣರು ಮತ್ತು ಅಂಧ ಭಕ್ತರು ಬಳಸುವ ಪದಗಳು ಭಾರತ ದೇಶದ ಮುಗ್ಧ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಈ ಕೂಡಲೇ ಅಮಿತ್ ಶಾ ಅವರನ್ನು ಗೃಹ ಸಚಿವ ಸ್ಥಾನದಿಂದ ಹಾಗೂ ಸಂಸದ ಸದಸ್ಯತ್ವದಿಂದ ವಜಾ ಮಾಡಬೇಕು ಎಂದು ಸನ್ಮಾನ್ಯ ರಾಷ್ಟ್ರಪತಿಗಳಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.

ಈ ವರದಿ ಓದಿದ್ದೀರಾ? ಬೀದರ್‌ | ₹75 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂ ಮಾಪಕ

ಪ್ರತಿಭಟನೆಯಲ್ಲಿ ಸುದೀರ ಕ್ಷತ್ರಿಯ, ಪ್ರಕಾಶ ಉಂಜಾಳ, ರಾಜು ನಾಯ್ಕರ, ಮಾರುತಿ ಹುಟಗಿ, ಉಮೇಶ ಚಲವಾದಿ, ಸಮಿದ ಅಹ್ಮದ ಮುಲ್ಲಾ, ಅಬ್ದುಲ ಹಮೀದ ಬೆಂಗಾಲಿ, ದ್ರಾಕ್ಷಾಯಣಿ ಬಿದರಗಡ್ಡಿ, ಜ್ಯೋತಿ ದೊಡ್ಡಮನಿ, ಮೀನಾಕ್ಷಿ ಬನ್ನಿಗಿಡದ, ಈರಮ್ಮ, ಸತ್ಯವೇಣಿ, ಪ್ರಕಾಶ ಕಂಜರಬಾಟ, ಮಂಜುನಾಥ ಕಲಾಲ, ಚಿದಾನಂದ ಮುಂಡಗೋಡ, ಗೀತಾ ಜೋಡಂಗಿ, ರೋಜಿ ನವಲಗುಂದ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X