ಸಂಸತ್ತಿನಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ನಾಡಿನ ಜನತೆಯ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕೊಪ್ಪಳ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಬುಧವಾರ ಸಂಸತಿನ ಕಲಾಪದಲಿ ಭಾರತದ ಗೃಹ ಸಚಿವರಾದ ಮಾನ್ಯ ಅಮಿತ್ ಶಾ ಅವರು “ಅಂಬೇಡ್ಕರ್ ಹೆಸರು ಹೇಳುವುದು ಒಂದು ವ್ಯಸನವಾಗಿದೆ. ಹೀಗೆಯೇ ದೇವರುಗಳ ಹೆಸರುಗಳನ್ನು ಹೇಳಿದ್ದರೆ ಏಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎಂದು ದೇಶದ ಜವಾಬ್ದಾರಿಯುತ ಸಚಿವರ ಹೇಳಿಕೆಯನ್ನು ಖಂಡಿಸುತ್ತೆವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಮಿತ್ ಶಾ ರಾಜೀನಾಮೆಗೆ ದಲಿತರಪರ ಹೋರಾಟಗಾರರ ಆಗ್ರಹ
ಭಾರತಕ್ಕೆ ಸಂವಿಧಾನ ರಚಿಸಿ ಸಮಾಜದ ಕಟ್ಟಕಡೆ ನಾಗರಿಕರಿಗೂ ಸಂವಿಧಾನ ಮತ್ತು ಕಾನೂನಿನ ಮೂಲಕ ಉತ್ತಮ ಭವಿಷ್ಯ ರೂಪಿಸಿ ಪ್ರತಿಯೊಬ್ಬ ಭಾರತಿಯನಿಗೂ ಸ್ಥಾನಮಾನ ಕೊಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ತುಂಬಾ ಅಸಡ್ಯ ಭಾವನೆಯಿಂದ ನಿಂದಿಸಿರುವ ಇಂತಹ ಹೇಳಿಕೆಯನ್ನು ಸಾಮಾನ್ಯ ಜನರಿಗೆ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಅಭಿಮಾನಿಗಳಿಗೆ ತುಂಬ ನೊವುಂಟು ಮಾಡಿದೆ ಆದ್ಧರಿಂದ ಈ ಹೇಳಿಕೆಯನ್ನು ಪರಿಣಾಮಕಾರಿಯಾಗಿ ಪರಿಗಣಿಸಿ. ಅಮಿತ್ ಶಾ ಅವರು ಸಂಸದನಾಗಿ ದೇಶದ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಲು ಅವರು ಅನರ್ಹರು ಆದ್ದರಿಂದ ಅವರನ್ನು ಸಂಸದೀಯ ಸದಸ್ಯತ್ವದಿಂದ ವಜಾಗೊಳಿಸಬೇಕು ಅಥವಾ ಕೈ ಬಿಡಬೇಕು ಎಂದು ರಾಘು ಆಕ್ರೋಶದಿಂದ ಹೇಳಿದರು.
ರಾಘು ಚಾಕ್ರಿ, ಮಲ್ಲೇಶ ಹೊಸಮನಿ, ಕಿರಣ, ಪ್ರವೀಣ್, ಗವಿ, ಪ್ರದೀಪ್, ಒಜನಳ್ಳಿ ಮುಂತಾದವರು