ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಶ್ರೀರಂಗಪಟ್ಟಣದ ಪ್ರಜ್ಞಾವಂತರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ತಹಶಿಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದರು.

ನಾವು ಭಾರತ ಒಕ್ಕೂಟದಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾನತೆಯಿಂದ, ಸ್ವಚ್ಛಂದ ವಾಗಿ, ಸ್ವಾತಂತ್ರ್ಯದಿಂದ ಬದುಕಲಿಕ್ಕೆ ಕಾರಣ ಸಂವಿಧಾನ. ಅದನ್ನು ಕೊಟ್ಟ ಅಂಬೇಡ್ಕರ್ ಕಾರಣ ಎಂದು ಪ್ರಜ್ಞಾವಂತರ ವೇದಿಕೆಯ ವೆಂಕಟೇಶ್ ಹೇಳಿದರು.
ಅವರು ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅಮಿತ್ ಶಾರ ಅವಹೇಳನಕಾರಿ ಮಾತನ್ನು ಖಂಡಿಸಿ, ಒಕ್ಕೂಟ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಶ್ರೀರಂಗಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಪ್ರಜ್ಞಾವಂತರ ವೇದಿಕೆ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಮಾತನಾಡಿದರು.
ಸಂವಿಧಾನದ ಕಾರಣದಿಂದ, ಅಂಬೇಡ್ಕರ್ ಕಾರಣದಿಂದ ಅಮಿತ್ ಶಾಗೆ ರಾಜಕೀಯ ಹುದ್ದೆ ಸಿಕ್ಕಿದೆ. ಇಂತಹ ವ್ಯಕ್ತಿ ಬಾಬಾ ಸಾಹೇಬರನ್ನು ವಿರುದ್ಧ ಮಾತಾಡಿರೋದು ಸಂವಿಧಾನ ಶಿಲ್ಪಿಗೆ ಮಾಡಿರುವ ಅವಮನ. ಈ ಕೂಡಲೇ ಅವರು ವಜಾ ಆಗಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ l ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆ; ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಟ
ಕರ್ನಾಟಕ ರಾಜ್ಯ ರೈತ ಸಂಘದ ಪಾಂಡು ಮಾತನಾಡಿ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಕರೆಯುವುದು ಪ್ಯಾಷನ್ ಆಗಿಬಿಟ್ಟಿದೆ ಅವರ ಬದಲಿಗೆ ದೇವರನ್ನು ಸ್ಮರಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಹೇಳಿಕೆ ನೀಡಿರುವ ಶಾರ ರಾಜೀನಾಮೆಯನ್ನು ಈ ಕೂಡಲೇ ಪಡೆಯಲಿ ಎಂದು ಒತ್ತಾಯಿಸಿದರು.
ಬಿಎಸ್ಪಿಯ ಪಕ್ಷದ ಗೋವಿಂದರಾಜು ಮಾತನಾಡಿ, ಏನು ನಮ್ಮನ್ನು ಗೌರವಿಸದ, ಹೆಚ್ಚಿನ ಸ್ಥಾನಮಾನದಲ್ಲಿ ಕಾಣದಂತ ಇಂತಹ ಸಂವಿಧಾನ ನಮಗೆ ಬೇಡ, ಅದನ್ನು ಒಪ್ಪಿಕ್ಕೆ ನಾವು ತಯಾರಿಲ್ಲ ಅಂತ ಜನ ಸಂಘ ಹೇಳುತಿತ್ತು. ಆ ಮಾತನ್ನು ಶಾನಂತವರು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಶಾನಂತವರೂ ಕೂಡ ನಮಗೆ ಬೇಕಿಲ್ಲ. ಈ ಕೂಡಲೇ ಅವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಇದನ್ನು ನೋಡಿದ್ದೀರಾ? ಮಂಡ್ಯ ಸಾಹಿತ್ಯ ಸಮ್ಮೇಳನ: ವಿಶೇಷತೆಗಳೇನು?
ಮನವಿ ಪತ್ರವನ್ನು ರಾಷ್ಟ್ರಪತಿಯವರಿಗೆ ತಹಶಿಲ್ದಾರರ ಮೂಲಕ ನೀಡಲಾಯಿತು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕತಮ್ಮೇಗೌಡ, ದಸಂಸದ ಗಾಂಜಾಂ ರವಿಚಂದ್ರ, ಚಂದ್ರಣ್ಣ, ಪ್ರಿಯಾ ರಮೇಶ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಬ್ದುಲ್ ಸುಕೂರ್, ಅಯೂಬ್, ಅರಕೆರೆ ಶಿವಯ್ಯ, ಡಿಎಸ್ಎಸ್ ಹಾಗೂ ರೈತ ಸಂಘದ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.