ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂಬಿ) ಪ್ರಾಧ್ಯಾಪಕರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಐಐಎಂಬಿ ನಿರ್ದೇಶಕ ಸೇರಿದಂತೆ 8 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಬಿಳೇಕಹಳ್ಳಿಯಲ್ಲಿರುವ ಐಐಎಂಬಿಯ ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರಿನ ಆಧಾರದ ಮೇಲೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಐಎಂಬಿ ನಿರ್ದೇಶಕ ರಿಶಿಕೇಶ್ ಟಿ. ಕೃಷ್ಣನ್ ಮತ್ತು ಇತರ ಸಿಬ್ಬಂದಿಗಳಾದ ದಿನೇಶ್ ಕುಮಾರ್, ಶೈನೇಶ್, ಶ್ರೀನಿವಾಸ್ ಪ್ರಖ, ಚೇತನ್ ಸುಬ್ರಹ್ಮಣ್ಯ, ಆಶೀಶ್ ಮಿಶ್ರಾ, ಶ್ರೀಲೀಲಾ, ರಾಹುಲ್ ಡೇ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ ತಿಂಗಳು ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರಿನ ಮೇಲೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಎಡಿಜಿಪಿ ಅರುಣ್ ಚಕ್ರವರ್ತಿ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ವೇಳೆ, ಗೋಪಾಲ್ ಅವರಿಗೆ ಐಐಎಂಬಿ ನಿರ್ದೇಶಕ ಮತ್ತು ಇತರರು ಜಾತಿ ನಿಂದನೆ ಮಾಡಿ, ಕಿರುಕುಳ ನೀಡಿರುವುದು ಮತ್ತು ಕೆಲಸದ ಸ್ಥಳದಿಂದ ಹೊರಗಿಟ್ಟಿರುವ ಬಗ್ಗೆ ಸಾಕ್ಷ್ಯಗಳು ದೊರೆತಿದ್ದವು. ಅವುಗಳ ಆಧಾರದ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.