ನವ್‌ಐಸಿ ಉಪಗ್ರಹ | ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಪ್ರಬಲಗೊಳಿಸಿದ ಇಸ್ರೋ

Date:

Advertisements
ನವ್ಐಸಿ ಉಪಗ್ರಹ ಸಂಕೇತಗಳು 90 ಡಿಗ್ರಿ ಕೋನದಲ್ಲಿ ಬರುವ ಕಾರಣ ನಿಬಿಡ ಪ್ರದೇಶಗಳು, ಅರಣ್ಯಗಳು ಅಥವಾ ಪರ್ವತಗಳ ಮೇಲೂ ಸಂಕೇತ ಸಾಧನಗಳನ್ನು ಗುರುತಿಸುವುದು ಸರಳವಾಗಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧಪಡಿಸಿದ ನೇವಿಗೇಶನ್ ಸಮೂಹದ ದ್ವಿತೀಯ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾಗಿರುವ ನವ್ಐಸಿ ಉಪಗ್ರಹ ಸೋಮವಾರ ಬೆಳಗ್ಗೆ ಉಡಾವಣೆಯಾಗಿದೆ.

ಸಮೂಹದಲ್ಲೇ ಅತಿ ಭಾರವಾಗಿರುವ 2,234 ಕೇಜಿ ಭಾರತ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ (ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್‌ನಲ್ಲಿ ಬೆಳಗ್ಗೆ 10.42ಕ್ಕೆ ಉಡಾವಣೆ ಮಾಡಲಾಗಿದೆ.

ಹಿಂದೆ ಭಾರತದ ಪ್ರಾದೇಶಿಕ ನೇವಿಗೇಶನ್ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್‌) ಸಮೂಹದಲ್ಲಿರುವ ಏಳು ಉಪಗ್ರಹಗಳು ಸುಮಾರು 1425 ಕೇಜಿಯಷ್ಟೇ ಭಾರ ಹೊಂದಿದ್ದು, ಇಸ್ರೋದ ಕಾರ್ಯಕಾರಿ ಉಡಾವಣಾ ರಾಕೆಟ್ ಆಗಿರುವ ಹಗುರವಾದ ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮೂಲಕ ಅವುಗಳನ್ನು ಉಡಾವಣೆ ಮಾಡಲಾಗಿತ್ತು. ಈಗಿನ ನವ್‌ಐಸಿ ಸರಣಿಯ ಮೊದಲನೆಯದಾಗಿರುವ ಎನ್‌ವಿಎಸ್-01 ಸುಧಾರಿತ ಉಪಗ್ರಹ.

Advertisements

ಕಳೆದ ಐಆರ್‌ಎನ್‌ಎಸ್‌ಎಸ್ ಉಪಗ್ರಹವನ್ನು ಏಪ್ರಿಲ್ 2018ರಂದು ಉಡಾವಣೆ ಮಾಡಲಾಗಿತ್ತು. ಆಗ ಉಡಾವಣೆಗೊಂಡ ಐಆರ್‌ಎನ್‌ಎಸ್‌ಎಸ್-2 ಸಮೂಹದಲ್ಲಿರುವ ಇಸ್ರೋದ ಒಂಭತ್ತನೇ ಉಪಗ್ರಹ. ಆದರೆ ಅದಕ್ಕೆ ಮೊದಲು ಉಡಾವಣೆಗೊಂಡಿದ್ದ ಐಆರ್‌ಎನ್‌ಎಸ್‌ಎಸ್‌-ಐಎಚ್ ಉಡಾವಣೆ ವೈಫಲ್ಯಗೊಂಡ ಕಾರಣ ಐಆರ್‌ಎನ್‌ಎಸ್‌ಎಸ್-2 ಅನ್ನು ಎಂಟನೇ ಉಪಗ್ರಹವೆಂದೇ ಪರಿಗಣಿಸಲಾಗುತ್ತದೆ.

ಎನ್‌ವಿಎಸ್-01 ವಿಶೇಷತೆ ಏನು?

ಹೊಸ ದ್ವಿತೀಯ ತಲೆಮಾರಿನ ಎನ್‌ವಿಎಸ್-01 ಹೆಚ್ಚು ಭಾರವಿರುವ ಉಪಗ್ರಹ. ಎನ್‌ವಿಎಸ್ ಸರಣಿಯ ಪೇಲೋಡ್‌ಗಳಲ್ಲಿ ಮೊದಲನೆಯದು. ಈ ಉಪಗ್ರಹಗಳಲ್ಲಿ ಭಾರತದಲ್ಲಿ ತಯಾರಾದ ರುಬಿಡಿಯಂ ಪರಮಾಣು ಗಡಿಯಾರವಿದೆ. ಇದನ್ನು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದಲ್ಲಿ ತಯಾರಿಸಲಾಗಿತ್ತು. ಈ ಉಪಗ್ರಹವು ಎಲ್‌ 1 ಫ್ರೀಕ್ವೆನ್ಸಿಯಲ್ಲಿ ಸಂಕೇತಗಳನ್ನು ಕಳುಹಿಸಲಿದೆ. ಎಲ್1 ಫ್ರೀಕ್ವೆನ್ಸಿಯನ್ನು ಜಿಪಿಎಸ್‌ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಹೀಗಾಗಿ ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಸುಧಾರಿಸಲು ನೆರವಾಗಲಿದೆ.

ದ್ವಿತೀಯ ತಲೆಮಾರಿನ ಉಪಗ್ರಹಗಳ ಬಾಳಿಕೆಯೂ ಹೆಚ್ಚಿರುತ್ತದೆ. ಈಗಿನ ಉಪಗ್ರಹಗಳ ಕಾರ್ಯಾವಧಿ 10 ವರ್ಷಗಳಾದರೆ ನೂತನ ಉಪಗ್ರಹ 12 ವರ್ಷಗಳಿಗೂ ಮೀರಿ ಕೆಲಸ ಮಾಡಲಿದೆ.

ಜಾಗತಿಕವಾಗಿ ನಾಲ್ಕು ದೇಶಗಳಷ್ಟೇ ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಹೊಂದಿದೆ. ಅಮೆರಿಕನ್ ಜಿಪಿಎಸ್, ರಷ್ಯನ್ ಗ್ಲೋನಸ್, ಯುರೋಪಿಯನ್ ಗೆಲಿಲಿಯೊ ಹಾಗೂ ಚೀನೀ ಬೈಡೌ. ಜಪಾನ್ ನಾಲ್ಕು ಉಪಗ್ರಹ ವ್ಯವಸ್ಥೆ ಹೊಂದಿದ್ದು, ಅದು ಜಿಪಿಎಸ್ ಸಿಗ್ನಲ್ ಅನ್ನು ದೇಶದಲ್ಲಿ ಕೇಂದ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಗಗನ್ (ಜಿಪಿಎಸ್ ನೆರವಿನ ಜಿಯೋ ಆಗ್ಯುಮೆಂಟೆಡ್ ನೇವಿಗೇಶನ್) ಇದೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ಸುಧಾರಿತ ಸಂಕೇತಗಳನ್ನು ನೀಡಲಿರುವ ನವ್‌ಐಸಿ

ನೆಲಮಟ್ಟದಲ್ಲೂ ನಿಲ್ದಾಣಗಳು ಸಿದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಾರಂಭಿಸಿದ ನಂತರ ನವ್ಐಸಿ ಮುಕ್ತ ಸಂಕೇತಗಳು 5 ಮೀಟರ್‌ಗಳಷ್ಟು ನಿಖರವಾಗಲಿವೆ. ಜಿಪಿಎಸ್‌ ಸಿಗ್ನಲ್‌ಗಳು ಸಾಮಾನ್ಯವಾಗಿ 20 ಮೀಟರ್‌ಗಳಷ್ಟು ನಿಖರವಾಗಿರುತ್ತವೆ. ಜಪಾನ್, ಫ್ರಾನ್ಸ್‌ ಹಾಗೂ ರಷ್ಯಾಗಳಲ್ಲಿ ಭೂನಿಲ್ದಾಣಗಳನ್ನು ನಿರ್ಮಿಸುವ ಸಿದ್ಧತೆ ಮಾಡುತ್ತಿದ್ದೇವೆ ಎಂದು ಇಸ್ರೋ ಹೇಳಿದೆ.

ಭಾರತದಲ್ಲಿ 1500 ಕಿಮೀ ತ್ರಿಜ್ಯದ ಭೂಭಾಗದಲ್ಲಿ ನವ್ ಸಿಗ್ನಲ್ ಮಾನವ ತಲುಪಲು ಸಾಧ್ಯವಾಗದ ಪ್ರದೇಶದಲ್ಲೂ ಲಭ್ಯವಿರುತ್ತದೆ. ಜಿಪಿಎಸ್‌ನಂತಲ್ಲದೆ ನವ್‌ಐಸಿ ನಿಬಿಡ ಭೂ ನಿಲ್ದಾಣ ಕಕ್ಷೆಯಲ್ಲೂ ಉಪಗ್ರಹವನ್ನು ಬಳಸಿಕೊಳ್ಳುತ್ತದೆ. ಭೂಮಿಯ ಸುತ್ತ ಸ್ಥಿರ ವೇಗದಲ್ಲಿ ಸುತ್ತುವ ಕಾರಣ ಸದಾ ಭೂಮಿಯ ಒಂದೇ ಭಾಗದ ಕಡೆಗೆ ಮುಖ ಮಾಡಿರುತ್ತದೆ.

ನವ್‌ಐಸಿ ಸಂಕೇತಗಳು 90 ಡಿಗ್ರಿ ಕೋನದಲ್ಲಿ ಬರುವ ಕಾರಣ ನಿಬಿಡ ಪ್ರದೇಶಗಳು, ಅರಣ್ಯಗಳು ಅಥವಾ ಪರ್ವತಗಳ ಮೇಲೂ ಸಾಧನಗಳನ್ನು ಗುರುತಿಸುವುದು ಸರಳವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X