ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಲು ಕೆಆರ್‌ಪೇಟೆಯಲ್ಲಿ ಶನಿವಾರ ಕೂಡ ಅವ್ಯವಸ್ಥೆ ಉಂಟಾಗಿದೆ. ಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವಂತ ಪರಿಸ್ಥಿತಿ ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಎದುರಾಗಿದೆ. ಬಸ್ ವ್ಯವಸ್ಥೆಗಾಗಿ ಮಕ್ಕಳು ಪ್ರತಿಭಟಿಸಿದ ಘಟನೆ ಜರುಗಿದೆ.

ಕೆಆರ್‌ಪೇಟೆಯ ಮಕ್ಕಳನ್ನು ಕರೆ ತರಲು ಖಾಸಗಿ ಬಸ್‌ಗಳನ್ನು ನಿಗದಿ ಮಾಡಲಾಗಿತ್ತು.ಇವರಿಗೆ ಕನಿಷ್ಠ ಡೀಸೆಲ್ ದುಡ್ಡನ್ನು ಮುಂಗಡವಾಗಿ ನೀಡದ ಕಾರಣ ಬರಲು ನಿರಾಕರಿಸಿದ್ದಾರೆ. ಖಾಸಗಿ ಬಸ್‌ಗಳಿಗೆ ಬರಲು ತಾಕೀತು ಮಾಡಿದ್ದ ಆರ್‌ಟಿಓ ಅಧಿಕಾರಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಸ್ವಿಚ್ಡ್ ಆಪ್ ಬರುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.
ಕೆಆರ್‌ಪೇಟೆಯ ಬಿಇಓರವರಿಗೆ ಕರೆ ಮಾಡಿದಾಗ ಶುಕ್ರವಾರವೇ ಹೊಂದಾಣಿಕೆ ಮಾಡಿದ ಸಾಕಾಗಿದೆ. ಇವತ್ತು ನಾನು ಹೊಣೆ ಹೊರಲು ಸಾಧ್ಯವಿಲ್ಲ ಎಂದು ಬೆಜವಾಬ್ದಾರಿಯಾಗಿ ಉತ್ತರಿಸಿದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ ? ಮಂಡ್ಯ l ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆ; ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಟ
ಡಾ.ಕುಮಾರ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಲಾಗಿ ಅವರು ಬಸ್ ವ್ಯವಸ್ಥೆ ಮಾಡುವ ಇಲ್ಲವೇ ವ್ಯವಸ್ಥೆ ಮಾಡದಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಬದಲಾಗಿ ಸುಮ್ಮನೆ ಕೇಳಿಸಿಕೊಂಡರು ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನು ನೋಡಿದ್ದೀರಾ? ಮಂಡ್ಯ ಸಾಹಿತ್ಯ ಸಮ್ಮೇಳನ: ವಿಶೇಷತೆಗಳೇನು?
ಅಧಿಕಾರಿಗಳ ಹೊಣೆಗೇಡಿತನಕ್ಕೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಪೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.