ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಒತ್ತಾಯಿಸಿ ಜಿಲ್ಲಾ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಅಗತ್ಯ ವಸ್ತುಗಳು, ಡೀಸೆಲ್, ಪೆಟ್ರೋಲ್, ಗ್ಯಾಸ್ ದರಗಳ ಏರಿಕೆಗಳಿಂದಾಗಿ ದಿನದ ದುಡಿಮೆಯಲ್ಲಿ ಬದುಕುತ್ತಿರುವ ಶ್ರಮಿಕ ವರ್ಗ, ಸಣ್ಣ ರೈತರು, ಕೂಲಿಕಾರ್ಮಿಕರು ಮತ್ತು ಕಲಾವಿದರ ಬದುಕು ಅಸಹನೀಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದರು ಜೀವನ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಆನ್‌ಲೈನ್‌ನಲ್ಲಿ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ ಧನಸಹಾಯ ನೀಡುತ್ತಿತ್ತು. ಇದು ಕಲಾವಿದರ ಬದುಕಿಗೆ ಕಾರ್ಯ ಚಟುವಟಿಕೆ ನಿರಂತರವಾಗಿ ಉತ್ತೇಜನ ನೀಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ ನೀಡುವ ಧನಸಹಾಯದ ಪ್ರಮಾಣ ಕಡಿಮೆಯಾಗಿದೆ. ಇದು ಕಲಾವಿದರನ್ನು ಚಿಂತೆಗೀಡು ಮಾಡಿದೆ ಎಂದರು.
ಪ್ರತಿ ವರ್ಷ ಅಕ್ಟೋಬರ್ ನವೆಂಬರ್ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿಲ್ಲ. ಕೂಡಲೇ ಅರ್ಜಿ ಆಹ್ವಾನಿಸಿ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್‌ಗೆ ಅವಮಾನ: ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ಆಕ್ರೋಶ
ಈ ಸಂದರ್ಭದಲ್ಲಿ ಕಲಾವಿದರಾದ ವಿಎನ್ ಅಕ್ಕಿ, ರಂಗಸ್ವಾಮಿ, ಲಕ್ಷ್ಮಣ ಮಂಡಲಗೇರಾ, ಅಣವೀರಯ್ಯ, ಶರಣಪ್ಪ ಗೋನಾಳ, ವೇಣುಗೋಪಾಲ, ನರಸಿಂಹ, ರಾಘವೇಂದ್ರ, ವೆಂಟಕ ನರಸಿಂಹ, ವಿಜಯಲಕ್ಷ್ಮಿ, ದೇವಣ್ಣ, ಜೋಸೆಫ್, ನರೇಂದ್ರ ಕುಮಾರ, ಲಕ್ಷ್ಮಿ ಸೇರಿದಂತೆ ಅನೇಕರು ಇದ್ದರು.
