ಕೇರಳದ ಪಾಲಕ್ಕಾಡ್‌ನಲ್ಲಿ ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಆಚರಣೆಗೆ ಸಂಘಪರಿವಾರ ಅಡ್ಡಿಪಡಿಸಿದೆ. ಗೋದಲಿ ಧ್ವಂಸಗೊಳಿಸಿ ಬೆದರಿಕೆ ಹಾಕಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿದೆ.
ಪಾಲಕ್ಕಾಡ್‌ನ ನಲ್ಲೆಪೆಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಈ ಸಂಬಂಧ ಮೂವರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರನ್ನು ಬಂಧಿಸಲಾಗಿದೆ. ವಿಎಚ್‌ಪಿಯ ಸ್ಥಳೀಯ ಕಾರ್ಯಕರ್ತರಾದ ಕೆ.ಅನಿಲ್ ಕುಮಾರ್, ವಿ. ಸುಸಾಸನನ್ ಮತ್ತು ಕೆ. ವೇಲಾಯುಧನ್ ಎಂಬವರು ಬಂಧಿತರು.
ಇದನ್ನು ಓದಿದ್ದೀರಾ? ಜರ್ಮನಿ| ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಕಾರು ದಾಳಿಗೆ ಇಬ್ಬರು ಸಾವು, 7 ಭಾರತೀಯರಿಗೆ ಗಾಯ
ಇನ್ನು ಇತರೆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧವಾಗಿ ಬ್ಯಾಟ್ ಬೀಸುವ ಬಿಜೆಪಿ ಕೇರಳದಲ್ಲಿ ಅನಿವಾರ್ಯವಾಗಿ ಈ ಕೃತ್ಯವನ್ನು ಖಂಡಿಸಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಕೂಡ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಎಂ ಬಿಜೆಪಿಯ ಕ್ರಿಶ್ಚಿಯನ್ ವಿರೋಧಿ ನಿಲುವು ಇದರಿಂದ ಎದ್ದು ಕಾಣುತ್ತದೆ ಎಂದು ಹೇಳಿದರೆ, ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿ ಪರಿಸ್ಥಿತಿ ನಿಭಾಯಿಸುವ ಪ್ರಯತ್ನ ಮಾಡಿದೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಂದೀಪ್ ವಾರಿಯರ್, “ಬಿಜೆಪಿ ಕ್ರಿಶ್ಚಿಯನ್ ಸಮುದಾಯವನ್ನು ಧಮನಿಸುತ್ತಿದೆ. ಶಾಲೆಯಲ್ಲಿ ಬೆದರಿಕೆಯೊಡ್ಡಿದ ವಿಎಚ್‌ಪಿ ಸ್ಥಳೀಯ ಮುಖಂಡರು ಬಿಜೆಪಿ ಕಾರ್ಯಕರ್ತರು” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕ್ರಿಸ್‌ಮಸ್‌ಗೆ ತೆರೆ ಕಾಣಲಿದೆ ದರ್ಶನ್ ಅಭಿನಯದ ‘ಡೆವಿಲ್’
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯಿಸಿ, “ಇತ್ತೀಚೆಗೆ ಪಕ್ಷ ತೊರೆದಿರುವ ಯಾರೋ ಪಿತೂರಿ ನಡೆಸಿರುವ ಶಂಕೆ ಇದೆ” ಎಂದಿದ್ದು ಘಟನೆಯಲ್ಲಿ ಭಾಗಿಯಾಗಿರುವ ವಿಎಚ್‌ಪಿ ಸ್ಥಳೀಯ ನಾಯಕರು ಸಕ್ರಿಯ ಬಿಜೆಪಿ ಕಾರ್ಯಕರ್ತರು ಎಂಬ ವಾರಿಯರ್ ಆರೋಪವನ್ನು ನಿರಾಕರಿಸಿದ್ದಾರೆ.
ಈ ನಡುವೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಕೂಡ ಈ ಘಟನೆಯನ್ನು ಖಂಡಿಸಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶಾಲೆಯಲ್ಲಿ ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು ಎಂದು ಕೇರಳ ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ.
ಇನ್ನು ವಿಎಚ್‌ಪಿಯ ಬೆದರಿಕೆಯನ್ನು ವಿರೋಧಿಸಿ, ಸಿಪಿಎಂನ ಯುವ ಸಂಘಟನೆ ಭಾರತ ಯುವಜನ ಪ್ರಜಾಸತಾತ್ಮಕ ಫೆಡರೇಷನ್ (ಡಿವೈಎಫ್‌ಐ) ಸೋಮವಾರ ಶಾಲೆಯ ಮುಂದೆ ‘ಸಾಮರಸ್ಯ ಕರೋಲ್’ ಆಯೋಜಿಸಿತ್ತು.
ಈ ನಡುವೆ ಸಮೀಪದ ಮತ್ತೊಂದು ಶಾಲೆಯಲ್ಲಿ ಅಪರಿಚಿತ ಕಿಡಿಗೇಡಿಗಳು ಕ್ರಿಸ್‌ಮಸ್ ಅಲಂಕಾರವನ್ನು ಹಾಳುಗೆಡವಿರುವುದು ಕಂಡುಬಂದಿದೆ. ಇನ್ನೊಂದೆಡೆ ತತ್ತಮಂಗಲದ ಜಿಬಿಯುಪಿ ಶಾಲೆಯಲ್ಲಿ ವಿಎಚ್‌ಪಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
