ನಟ ದರ್ಶನ್ ಅಭಿನಯದ, ಪ್ರಕಾಶ್ ವೀರ್ ನಿರ್ದೇಶನದ ನಿರೀಕ್ಷಿತ ಸಿನಿಮಾ ‘ಡೆವಿಲ್ – ದಿ ಹೀರೋ’ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದರ್ಶನ್ ಗಾಯಗೊಂಡಿದ್ದ ಪರಿಣಾಮ, ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ, ಮತ್ತೆ ಜೂನ್ 1ರಿಂದ ಚಿತ್ರೀಕರಣ ಪುನರಾರಂಭವಾಗಲಿದ್ದು, ನಿರ್ಮಾಪಕರು ಸಿನಿಮಾದ ಬಿಡುಗಡೆ ಕ್ರಿಸ್‌ಮಸ್‌ಗೆ ಮುಂದೂಡಿದ್ದಾರೆ.
ಚಿತ್ರೀಕರಣವು ಮತ್ತೆ ಆರಂಭವಾಗಿದೆ. ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಸ್ವತಃ ದರ್ಶನ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
‘ಡೆವಿಲ್ – ದಿ ಹೀರೋ’ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. 2024ರ ಕ್ರಿಸ್‌ಮಸ್‌ಅನ್ನು (ಡಿಸೆಂಬರ್ 25) ಬಿಡುಗಡೆಯ ಹೊಸ ದಿನಾಂಕವಾಗಿದೆ ಎಂದು ಅವರು ಹೇಳಿದ್ದಾರೆ.
ಕುತೂಹಲಕಾರಿಯಾಗಿ, ದರ್ಶನ್ ಅವರ ಹಿಂದಿನ ಚಿತ್ರ ಕಾಟೇರಾ ಕೂಡ 2023ರ ಕ್ರಿಸ್‌ಮಸ್ ಸಮಯದಲ್ಲೇ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿ ಕಾಣುವ ಜೊತೆಗೆ, ಪ್ರೇಕ್ಷಕರ ಮನ ಗೆದ್ದಿತ್ತು.

‘ಡೆವಿಲ್’ ಸಿನಿಮಾ ಘೋಷಣೆ ನಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಈಗಾಗಲೇ ‘ಸರೆಗಮ ಸೌತ್’ ಭಾರಿ ಬೆಲೆಗೆ ಪಡೆದುಕೊಂಡಿದೆ. ಡೆವಿಲ್ ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕರಾಗಿ ಅಜನೀಶ್ ಲೋಕನಾಥ್ ಮತ್ತು ಸುಧಾಕರ್ ಎಸ್ ರಾಜ್ ಇದ್ದಾರೆ. ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ರಚನಾ ರೈ ನಾಯಕಿ ನಟಿಸಿದ್ದಾರೆ.