ಇಪ್ಪತ್ತೇರಡು ವರ್ಷಗಳ ಬಳಿಕ ವೃದ್ಧರೊಬ್ಬರು ಮಕ್ಕಳೊಂದಿಗೆ ಸೇರಿಕೊಂಡಿರುವ ಮನ ಮಿಡಿಯುವ ಘಟನೆಯೊಂದು ನಡೆದಿದೆ. 82 ವರ್ಷ ಪ್ರಾಯದ ಅಣ್ಣಯ್ಯ ಬಂಗೇರ ಎನ್ನುವರು ಮನೆ ಮಂದಿಯೊಂದಿಗೆ ಮುನಿಸಿಕೊಂಡು, 22ವರ್ಷಗಳಿಂದ ದೂರ ಉಳಿದುಕೊಂಡಿದ್ದರು. ಕಾಪುವಿನ ಮಜೂರಿನಲ್ಲಿ ನೆಲೆ ಪಡೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದರು. ಹೀಗಿರುವಾಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಂಗೇರರು ಹಾಸಿಗೆ ಹಿಡಿದಿದ್ದರು. ಸ್ಥಳೀಯರ ಅನ್ನ ಆಹಾರ, ಔಷಧೋಪಚಾರದ ನೆರವಿನಿಂದಾಗಿ ಉಸಿರುಳಿಸಿಕೊಂಡಿದ್ದರು. ತಿಂಗಳ ಹಿಂದೆ ವೃದ್ಧರ ಆರೋಗ್ಯ ಸ್ಥಿತಿ ಬಿಗುಡಿಯಾಸಿತ್ತು. ಈ ಸಂದರ್ಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೆರವಿಗೆ ಬಂದಿದ್ದರು. ಪಿ.ಡಿ.ಓ ಅವರ ಸಮಾಜಸೇವಕ ನಿತ್ಯಾನಂದ ಒಳಕಾಡುವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು.
ಹಾಗೆಯೇ ಗುಣಮುಖಗೊಂಡಿರುವ ವೃದ್ಧರನ್ನು ಒಳಕಾಡುವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಉಡುಪಿಯ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಬಳಿಕ ಅವರು ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ವೃದ್ಧರು ನೀಡಿದ ಮಾಹಿತಿಯಿಂದ, ಸಂಬಂಧಿಕರ ವಿಳಾಸ ಪತ್ತೆ ಕಾರ್ಯವು ಯಶಸ್ವಿಯಾಯಿತು. ಅದರಂತೆ ಬಂಗೇರರ ಮಗ ಮಗಳು ಹೊಸಬದುಕು ಆಶ್ರಮಕ್ಕೆ ಬಂದು, ತಂದೆಯನ್ನು ಮನೆಗೆ ಸೇರಿಸಿಕೊಂಡರು. ಮಕ್ಕಳು ತಂದೆಯವರ ಗುರುತು ಹಿಡಿದರೂ, ಬಂಗೇರರು, 22 ವರ್ಷ ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದರಿಂದ ಮಕ್ಕಳ ಗುರುತು ಹಿಡಿಯಲು ಬಹಳ ಹೊತ್ತು ತೆಗೆದುಕೊಂಡಿದ್ದರು.
ಕಾರ್ಯಚರಣೆಯಲ್ಲಿ ಹಿರಿಯ ನಾಗರಿಕ ಸಹಾಯವಾಣಿಯ ಅಶ್ವಿನಿ ಜಿಲ್ಲಾ ಯೋಜನಾ ಸಯೋಜಕಿ ಅಶ್ವಿನಿ, ಆಪ್ತ ಸಮಲೋಚಕ ರೋಷನ್ ಅಮೀನ್, ಭಾಗಿಯಾಗಿದ್ದರು. ಕಾಪು ಪೋಲಿಸ್ ಠಾಣೆಯ ಪೋಲಿಸರು, ಆರೋಗ್ಯ ಇಲಾಖೆಯಸಿಬ್ಬಂದಿಗಳು, ವಿನಾಯಚಂದ್ರ ಸಹಕರಿಸಿದ್ದರು.
