ಉಡುಪಿ | 22 ವರ್ಷಗಳ ಬಳಿಕ ಮಕ್ಕಳೊಂದಿಗೆ ಸೇರಿಕೊಂಡ ವೃದ್ಧ

Date:

ಇಪ್ಪತ್ತೇರಡು ವರ್ಷಗಳ ಬಳಿಕ ವೃದ್ಧರೊಬ್ಬರು ಮಕ್ಕಳೊಂದಿಗೆ ಸೇರಿಕೊಂಡಿರುವ ಮನ ಮಿಡಿಯುವ ಘಟನೆಯೊಂದು ನಡೆದಿದೆ. 82 ವರ್ಷ ಪ್ರಾಯದ ಅಣ್ಣಯ್ಯ ಬಂಗೇರ ಎನ್ನುವರು ಮನೆ ಮಂದಿಯೊಂದಿಗೆ ಮುನಿಸಿಕೊಂಡು, 22ವರ್ಷಗಳಿಂದ ದೂರ ಉಳಿದುಕೊಂಡಿದ್ದರು.‌ ಕಾಪುವಿನ ಮಜೂರಿನಲ್ಲಿ ನೆಲೆ ಪಡೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದರು.‌ ಹೀಗಿರುವಾಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಂಗೇರರು ಹಾಸಿಗೆ ಹಿಡಿದಿದ್ದರು. ಸ್ಥಳೀಯರ ಅನ್ನ ಆಹಾರ,‌ ಔಷಧೋಪಚಾರದ ನೆರವಿನಿಂದಾಗಿ ಉಸಿರುಳಿಸಿಕೊಂಡಿದ್ದರು.‌ ತಿಂಗಳ ಹಿಂದೆ ವೃದ್ಧರ ಆರೋಗ್ಯ ಸ್ಥಿತಿ ಬಿಗುಡಿಯಾಸಿತ್ತು. ಈ ಸಂದರ್ಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೆರವಿಗೆ ಬಂದಿದ್ದರು.‌ ಪಿ.ಡಿ.ಓ ಅವರ‌ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು.

- Advertisement -

ಹಾಗೆಯೇ ಗುಣಮುಖಗೊಂಡಿರುವ‌ ವೃದ್ಧರನ್ನು ಒಳಕಾಡುವರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಉಡುಪಿಯ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು.‌ ಬಳಿಕ‌ ಅವರು ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದರು.‌ ವೃದ್ಧರು ನೀಡಿದ ಮಾಹಿತಿಯಿಂದ, ಸಂಬಂಧಿಕರ ವಿಳಾಸ‌ ಪತ್ತೆ ಕಾರ್ಯವು ಯಶಸ್ವಿಯಾಯಿತು.‌ ಅದರಂತೆ ಬಂಗೇರರ ಮಗ ಮಗಳು ಹೊಸಬದುಕು ಆಶ್ರಮಕ್ಕೆ ಬಂದು, ತಂದೆಯನ್ನು ಮನೆಗೆ ಸೇರಿಸಿಕೊಂಡರು. ಮಕ್ಕಳು ತಂದೆಯವರ ಗುರುತು ಹಿಡಿದರೂ, ಬಂಗೇರರು, 22 ವರ್ಷ ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದರಿಂದ ಮಕ್ಕಳ ಗುರುತು ಹಿಡಿಯಲು ಬಹಳ‌ ಹೊತ್ತು ತೆಗೆದುಕೊಂಡಿದ್ದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕಾರ್ಯಚರಣೆಯಲ್ಲಿ ಹಿರಿಯ ನಾಗರಿಕ ಸಹಾಯವಾಣಿಯ ಅಶ್ವಿನಿ ಜಿಲ್ಲಾ ಯೋಜನಾ ಸಯೋಜಕಿ ಅಶ್ವಿನಿ, ಆಪ್ತ ಸಮಲೋಚಕ ರೋಷನ್ ಅಮೀನ್, ಭಾಗಿಯಾಗಿದ್ದರು. ಕಾಪು ಪೋಲಿಸ್ ಠಾಣೆಯ ಪೋಲಿಸರು, ಆರೋಗ್ಯ ಇಲಾಖೆಯ‌‌ಸಿಬ್ಬಂದಿಗಳು, ವಿನಾಯಚಂದ್ರ ಸಹಕರಿಸಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...