ಮಂಡ್ಯಕ್ಕೆ ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಎಂಬ ಹೆಗ್ಗಳಿಕೆ ಇದೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಇನ್ನಿತರೆ ವಿಶ್ವವಿದ್ಯಾಲಯಕ್ಕಿಂತ ಹೆಚ್ಚು ಸಮಯ ಕನ್ನಡ ವಿಷಯವನ್ನ ಬೋಧಿಸುವ ಬೋಧಿಸಬೇಕು. ಈ ಮೂಲಕ ಮಂಡ್ಯದ ಕನ್ನಡತನವನ್ನ ಮತ್ತಷ್ಟು ಗಟ್ಟಿಗೊಳಿಸಬೇಕು ಮತ್ತು ಕನ್ನಡತನದ ಹಿರಿಮೆಯನ್ನು ಎತ್ತಿ ಹಿಡಿಯಬೇಕು ಎಂದು ಮಂಡ್ಯದ ವಿಶ್ವ ವಿದ್ಯಾಲಯದ ಕುಲಪತಿಗಳನ್ನು ನಾವು ದ್ರಾವಿಡ ಕನ್ನಡಿಗರು ಸಂಚಾಲರಾದ ಅಭಿಗೌಡ ಒತ್ತಾಯಿಸದ್ದರು.
ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಒತ್ತಾಯಕ್ಕೆ ಮಣಿದ ಮಂಡ್ಯ ವಿಶ್ವ ವಿಶ್ವವಿದ್ಯಾಲಯದ ಕುಲಪತಿಗಳು ಬೋಧನಾ ಅವಧಿಯನ್ನು ಹೆಚ್ಚಿಸಿದ್ದಾರೆ. ಬೇರೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಬೋಧನಾ ಅವಧಿ ವಾರಕ್ಕೆ 6 ಗಂಟೆ ಇತ್ತು. ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ಕಡಿಮೆ ಅವಧಿಯ ಬೋಧನಾ ಅವಧಿ ಇತ್ತು.
ತುಮಕೂರು, ಬೆಂಗಳೂರು, ಮಂಗಳೂರು, ರಾಣಿ ಚೆನ್ನಮ್ಮ ಮತ್ತಿತರ ವಿಶ್ವ ವಿದ್ಯಾಲಯಗಳಲ್ಲಿ 6 ಗಂಟೆಗಳ ಕಾಲ ಬೋಧಿನಾ ಅವಧಿ ಇದೆ. ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಎಂಬ ಹಿರಿಮೆಯನ್ನು ಎತ್ತಿ ಹಿಡಿಯಲು ಪದವಿ ತರಗತಿಗಳಲ್ಲಿ ಕನ್ನಡ ವಿಷಯ ಬೋಧನಾ ಸಮಯವನ್ನು 5 ಗಂಟೆಗಳಿಂದ 7ಗಂಟೆಗೆ ಏರಿಸಬೇಕೆಂದು ಒತ್ತಾಯಿದ್ದರು.
ಇದನ್ನು ಓದಿದ್ದೀರಾ? ಮಂಡ್ಯ | ಏಕೀಕರಣಗೊಂಡ ರೈತಸಂಘದ ಅಡಿಯಲ್ಲಿ ರೈತ ದಿನಾಚರಣೆ
ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ತಿಳಿಯಪಡಿಸುವುದೇನೆಂದರೆ, 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯ ಶಿಕ್ಷಣ ನೀತಿ ಅನ್ವಯದಂತೆ ಕಲಾ ನಿಕಾಯದ ಪ್ರಮುಖ ವಿಷಯಗಳಿಗೆ ಬೋಧನಾವಧಿಯನ್ನು 05 ಗಂಟೆಗೆ ನಿಗಧಿಪಡಿಸಲಾಗಿರುತ್ತದೆ. ಆದರೆ ಉಲ್ಲೇಖ 01ರ ಸಿಂಡಿಕೇಟ್ ಸಭೆಯ ತೀರ್ಮಾನದಂತೆ ಹಾಗೂ ಕನ್ನಡ ಅಧ್ಯಯನ ಮಂಡಳಿ ಶಿಫಾರಸ್ಸು ಹಾಗೂ ಇತರ ವಿಶ್ವವಿದ್ಯಾಲಯಗಳ ತೀರ್ಮಾನದಂತೆ ಸದರಿ ವಿಷಯದ ಬಗ್ಗೆ 2024- 25ನೇ ಶೈಕ್ಷಣಿಕ ಸಾಲಿನ ಮೊದಲನೇ ಮತ್ತು ಎರಡನೇ ಸೆಮಿಸ್ಟರ್ಗೆ ಐಚ್ಚಿಕ ಕನ್ನಡ, ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನಗಳ ವಿಷಯದ ಬೋಧನಾವಧಿಯನ್ನು 05 ಗಂಟೆಯಿಂದ 06 ಗಂಟೆಯವರೆಗೆ ಹೆಚ್ಚಿಸಲಾಗಿದೆ ಎಂದು ಕುಲಪತಿಗಳು ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.