ರೈತ ಈ ದೇಶದ ಬೆನ್ನೆಲುಬು. ಕೃಷಿ ಪ್ರಧಾನವಾದ ನಮ್ಮ ದೇಶದ ರೈತರ ಮಕ್ಕಳು ನೌಕರಿಗಾಗಿ ಕೃಷಿಯಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಅಂಶವಾಗಿದೆ ಎಂದು ಹೈದರಾಬಾದ ಅಖಿಲ ಭಾರತ ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ. ಮಧುಸೂದನ ಆರ್.ಹೇಳಿದರು.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಉಣ್ಣೆಭಾವಿ ಗ್ರಾಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಜೋಳ ಅಬಿವೃದ್ಧಿಯೋಜನೆ, ನಿಡಗುಂದಿ ಶ್ರೀ ಹಾದಿಬಸವಣ್ಣಪ್ಪ ಆಯಿಲ್ ಸಿಡ್ಸ್ ಹಾಗೂ ಮಿಲೇಟ್ಸ್ ಪ್ರೋಡ್ಯೂಡರ್ ಕಂಪನಿ ವತಿಯಿಂದ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಸಿರಿಧಾನ್ಯ ತಂತ್ರಜ್ಞಾನಗಳ ಪ್ರಚಾರ ಹಾಗೂ ಅಳವಡಿಕೆ ತರಬೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಈ ಭಾಗದ ಪ್ರಮುಖ ಬೆಳೆ ಜೋಳವನ್ನು ನಿರ್ಲಕ್ಷಿಸುತ್ತಿದ್ದು, ಜನರು ಅಪೌಷ್ಠಿಕತೆ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೋಳ ತಿಂದವನು ತೋಳದಂತಾಗುತ್ತಾನೆಂಬ ಗಾದೆಯಿದೆ. ಅದಕ್ಕಾಗಿ ಜೋಳ ಹಾಗೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರಬೆಳ್ಳಿ ಮಾತನಾಡಿ, ಇಂದು ಮಾಜಿ ಪ್ರಧಾನಿ ಚೌಧರಿ ಚರಣಸಿಂಗ ಇವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ಸಲದ ಘೋಷ್ಯವಾಕ್ಯ ಸುಸ್ಥಿರ ಕೃಷಿ ಪುನಶ್ಚತನಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಎಂಬುದಾಗಿದೆ. ಡಾ. ಚೌಧರಿ ಚರಣಸಿಂಗ್ ಅವರು ರೈತರ ಸಮಗ್ರ ಏಳೆಗಾಗಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು, ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ರೈತರು ಸಾವಲಂಬಿ ಬದಕು ಸಾಗಿಸಲು ಅನುಕೂಲವಾಗಬೇಕು ಎಂಬ ಮಹಾದಾಸೆ ಅವರಲ್ಲಿತ್ತು. ದೇಶಕ್ಕೆ ಅನ್ನ ನೀಡುವ ರೈತರನ್ನು ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ನೆನೆಯುವ ಸಲುವಾಗಿ ಈ ದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಅಚರಿಸಲಾಗುತ್ತಿದೆ ಎಂದರು.
ಇದನ್ನು ಓದಿದ್ದೀರಾ? ವಿಜಯಪುರ | ನಿತ್ಯವೂ ಮಾನವೀಯ ಮೌಲ್ಯಗಳನ್ನು ನಾವು ಮೈಗೂಡಿಸಿಕೊಳ್ಳಬೇಕು: ನಾಗರತ್ನ ಮನಗೂಳಿ
ಅತಿಥಿಗಳಾಗಿ ಸಂಗನಗೌಡ ಕೊನರಡ್ಡಿ,ಭೀಮನಗೌಡ ಕೊನರಡ್ಡಿ, ಶೇಖರ ಗೂಗಿಹಾಳ, ವೀರಣ್ಣ ಮನಗೊಂಡ, ಮಲ್ಲನಗೌಡ ನಾಡಗೌಡ, ಸತೀಶ ನರಸರಡ್ಡಿ, ಅಶೋಕ ಕೊನರಡ್ಡಿ, ಚನ್ನಪ್ಪ ಕಂಬಳಿ, ಶಂಕ್ರೆಪ್ಪ ಹೂಗಾರ, ಸಾಹೇಬಗೌಡ ಪಾಟೀಲ, ಮಹಾದೇವಪ್ಪ ಕೊನರಡ್ಡಿ, ತಿಮ್ಮನಗೌಡ ಪಾಟೀಲ,ಮಂಜುನಾಥ ಸವನೂರ, ರಾಧಾ ಚಲವಾದಿ, ಶ್ರೀಶೈಲ ಕೊನರಡ್ಡಿ,ವನಕೇರಪ್ಪಗೌಡ ನರಸರಡ್ಡಿಸೇರಿದಂತೆ ಉಣ್ಣಿಬಾವಿ, ಹಂಗರಗಿ, ವಂದಾಲ, ಹುಣಶ್ಯಾಳ ಪಿ.ಸಿ., ಬೀರಲದಿನ್ನಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.
