ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಜನಾಂಗ ಮತ್ತು ಧರ್ಮಕ್ಕೆ ಸೀಮಿತವಾದವರಲ್ಲ. ಅವರು ಈ ದೇಶದ ಪ್ರತಿಯೊಬ್ಬರ ಪಾಲಿಗೆ ದೇವರ ಸಮಾನರಾಗಿದ್ದಾರೆ. ಅಂತಹ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನಾವು ಪ್ರತಿನಿತ್ಯ ಎಷ್ಟೇ ಜಪ ಮಾಡಿದರು ಸಾಲದು ಎಂದು ಕಾಂಗ್ರೆಸ್ ವಿಜಯಪುರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ ಹೇಳಿದರು.
ವಿಜಯಪುರದ ಅಂಬೇಡ್ಕರ್ ವೃತ್ತದಿಂದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಅಪಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಜಗತ್ತಿನ ಮಹಾನ್ ಮಾನವತವಾದಿ ಸಂವಿಧಾನ ಶಿಲ್ಪಿಡಾ. ಬಿ. ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಮುಖಂಡ ಅಬ್ದುಲ್ ಹಮೀದ್ ಮುಶ್ರಫ್ ಮಾತನಾಡಿ, ಅಂಬೇಡ್ಕರ್ ಈ ದೇಶದ ಸಂವಿಧಾನ ಬರೆದವರು. ನಮ್ಮೆಲ್ಲರಿಗೂ ಸಮಾನ ಹಕ್ಕು ನೀಡಿದ ಮಹಾನ್ ನಾಯಕ. ಅಂಬೇಡ್ಕರ್ ಬಗ್ಗೆ ನಗುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೆ ಸಂಪುಟದಿಂದ ವಜಾ ಮಾಡಬೇಕು. ಅಂಬೇಡ್ಕರ್ ಬಗ್ಗೆ ಕೇವಲವಾಗಿ ಮಾತನಾಡುವ ಬಿಜೆಪಿ ನಾಯಕರನ್ನು ಜನತೆ ತಿರಸ್ಕರಿಸಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಅಧ್ಯಕ್ಷ ರಮೇಶ್ ಗುಬ್ಬೇವಾಡ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಚಿಸಿ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಮಾನಕಗಳನ್ನು ಕಲ್ಪಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಜೀವಿಸುತ್ತಿದ್ದ ಮಹಿಳೆಯರಿಗೆ ಪುರುಷ ಸಮಾನ ಅಧಿಕಾರ ಮತ್ತು ಹಕ್ಕುಗಳನ್ನು ನೀಡಿದ್ದಾರೆ. ಇದರಿಂದ ಮಹಿಳೆಯರನ್ನು ಮುಖ್ಯವಾಗಿ ತಂದು ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಮಾಡಲು ಸಾಧ್ಯವಾಗಿದೆ. ಇಂತಹ ಮಹಾನ್ ಚೇತನರ ಬಗ್ಗೆ ಮಾತನಾಡಿದ್ದು ಅತ್ಯಂತ ಖಂಡನೆವಾಗಿದೆ. ಅಮಿತ್ ಶಾ ಹೇಳಿಕೆಯಿಂದ ಕೇವಲ ಅಂಬೇಡ್ಕರ್ ಅವರಿಗೆ ಅಷ್ಟೇ ಅಲ್ಲ ಇಡೀ ದೇಶದ ನಾಗರಿಕರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಅಮಿತ್ ಸರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಶರಣರ ಎಲ್ಲ ಕುರುಹುಗಳನ್ನು ಉಳಿಸಿ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಆರತಿ ಷಹಪೂರ, ಮುಖಂಡರಾದ ಡಾ.ಬಾಬುರಾಜೇಂದ್ರ ನಾಯಕ, ಬಿಎಸ್ ಗಸ್ತಿ, ಸುಭಾಶ ಕಾಲೇಭಾಗ, ವೈದ್ಯನಾಥ್ ಕರ್ಪೂರ ಮಠ, ಚಾಂದಸಾಬ್ ಗಡಗಲಾವ, ಗಂಗಾಧರ ಸಂಬಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ, ಪ್ರಧಾನ ಕಾರ್ಯದರ್ಶಿಗಳಾದ ಜಾಕೀರ್ ಹುಸೇನ್ ಮುಲ್ಲಾ, ಎಂ ಎಂ ಮುಲ್ಲಾ, ದೇಶೂ ಚೌಹಾಣ್, ವಸಂತ ವನಮೋಡೆ, ಹಾಜಿಲಾಲ್ ದಳವಾಯಿ, ರಾಘವೇಂದ್ರ ಒಡವಡಗಿ, ಅಜಯ್ ರೋಜೆವಾಲೆ, ಇಲಿಯಾಸ್ ಸಿದ್ದಕಿ, ಜಬ್ಬರ್ ಮುಲ್ಲಾ, ಆನಂದ್ ಜಾದವ, ಅಮಿತ್ ಚೌಹಾನ್, ರಾಜೇಶ್ವರಿ ಚೊಳಕೆ, ಪ್ರಿಯಾಂಕಾ ತೊರವಿ, ಲಲಿತ ದೊಡ್ಡಮನಿ, ಜಯಶ್ರೀ ಹದನೂರ, ದಿಲೀಪ್ ಪ್ರಭಾಕರ್ ಪಾಲ್ಗೊಂಡಿದ್ದರು.
