ವಿಜಯನಗರ | ಮನಸ್ಮೃತಿ ದಹಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ

Date:

Advertisements

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮನಸ್ಮೃತಿ ಸುಡುವ ಮೂಲಕ ಮನುಸ್ಮೃತಿ ದಹನ ದಿನವನ್ನು ಆಚರಿಸಿದರು.

ಸಂವಿಧಾನ ರಚಿಸುವ ಮೊದಲು ದಲಿತರ ಶೋಷಣೆ, ಮಹಿಳೆಯರ ಶೋಷಣೆ, ಜಾತಿವಾದ ಹಾಗೂ ಅಸಮಾನತೆಗೆ ಮನುವಾದಿಗಳ ಮನುಸ್ಮೃತಿ ಗ್ರಂಥ ಕಾರಣವಾಗಿತ್ತು. ಅದರಿಂದ ಕೆರಳಿದ ಶೋಷಿತ ವರ್ಗದವರು ಅಂಬೇಡ್ಕರ್‌ ನೇತೃತ್ವದಲ್ಲಿ ಮನುಸ್ಮೃತಿಯನ್ನು ದಹಿಸಿದ್ದರು. ಆ ದಿನದ ನೆನಪಗಾಗಿ ಡಿಸೆಂಬರ್‌ 25ರಂದು ಮನುಸ್ಮೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಹೋರಾಟಗಾರ ಸೋಮಶೇಖರ್ ಬಣ್ಣದ ಮನೆ ಮಾತನಾಡಿ, “1927 ಡಿಸೆಂಬರ್‌ 25ರಂದು ಮಹಾರಾಷ್ಟ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡುವ ಮೂಲಕ ಸಮಾನತೆಗೆ ನಾಂದಿ ಹಾಡಿದ್ದರು. ಬಾಬಾ ಸಾಹೇಬರು ಮನುಸ್ಮೃತಿ ದಹನ ಮಾಡುವ ಮೂಲಕ ಅದರಲ್ಲಿದ್ದ ಅಸಮಾನತೆ, ಭೇದಭಾವ, ದಲಿತ, ದಮನಿತ ಹಾಗೂ ಕೆಳವರ್ಗದವರು ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರನ್ನು ಹತ್ತಿಕ್ಕುವ, ಅವರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಅನೇಕ ತಾರತಮ್ಯಗಳನ್ನು ಹೋಗಲಾಡಿಸಿದ್ದಾರೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ರಾಯಚೂರು | ಮನುವಾದ, ಫ್ಯಾಸಿಸ್ಟ್ ವಿರುದ್ಧ ಜ.1ರಂದು ಪ್ರತಿಭಟನೆ

“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವುದರ ಮೂಲಕ ಎಲ್ಲ ವರ್ಗದ ಜನರಿಗೆ ಎಲ್ಲ ರಂಗಗಳಲ್ಲೂ ಅವಕಾಶ ಕಲ್ಪಿಸಿಕೊಟ್ಟು ಅನೇಕ ಹಕ್ಕುಗಳನ್ನು ನೀಡಿದ್ದಾರೆ” ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮರಡಿ ಜಂಬಯ್ಯ ನಾಯಕ, ಅಲೆಮಾರಿ ಸಮುದಾಯದ ರಾಜ್ಯ ಅಧ್ಯಕ್ಷ ಸಣ್ಣ ಮಾರೆಪ್ಪ, ಎನ್ ವೆಂಕಟೇಶ್(ಸ್ಲಂ ವೆಂಕಿ) ಸಣ್ಣ ಮಾರೆಪ್ಪ ರಾಮಚಂದ್ರ ಬಿಸಾಟಿ ಮಹೇಶ್, ಸೂರ್ಯನಾರಾಯಣ, ಮುದುಕಪ್ಪ ಚಲವಾದಿ, ಇಂತಿಯಾಜ್, ಚಲವಾದಿ ಮಹಾಸಭಾದ ರಾಜ್ಯ ಮಹಿಳಾ ಅದ್ಯಕ್ಷೆ ಈರಮ್ಮ , ಡಿಎಸ್‌ಎಸ್ ರಾಮಚಂದ್ರಬಾಬು, ಜೆ ಸಿ ಈರಣ್ಣ, ರಮೇಶ್ ಚಲವಾದಿ, ಈಡಿಗರ ಮಂಜುನಾಥ್, ನಿಂಬಗಲ್ ರಾಮಕೃಷ್ಣ, ಮರಿಸ್ವಾಮಿ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

Download Eedina App Android / iOS

X