ಹುಬ್ಬಳ್ಳಿಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಛೇರಿಯಲ್ಲಿ ಬಿ ಎ ಪಾಟೀಲರ ಅಧ್ಯಕ್ಷತೆಯಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಶೃದ್ಧಾಂಜಲಿ ಸಭೆ ನಡೆಸಿದರು.
ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತು ಬಿ ಎ ಪಾಟೀಲ ಮಾತನಾಡಿ, ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ನಮ್ಮನ್ನು ಅಗಲಿದ್ದು ನೋವನ್ನುಂಟು ಮಾಡಿದೆ. ಅವರು ವಿಶ್ವ ವಿಖ್ಯಾತ ಆರ್ಥಿಕ ತಜ್ಞರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಹಣಕಾಸಿನ ಸಚಿವರಾಗಿ, ಹಣಕಾಸಿನ ಆಯೋಗದ ಉಪಾಧ್ಯಕ್ಷರಾಗಿ, ಹೊಸ ಆರ್ಥಿಕ ನೀತಿಯ ಹರಿಕಾರರಾಗಿ, ಎರಡು ಅವಧಿಗೆ ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಎಸ್ ಎಮ್ ಕೋಳೂರ, ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ ಎಸ್ ಕೌಜಲಗಿ, ಎಮ್ ಕುಂಬಾರ, ಜಯಲಕ್ಷ್ಮಿ ಉಮಚಗಿ, ಅನುರಾಧ ಕಾಮತ್ , ಶಿವಶಂಕರ್ ಐಹೋಳೆ ನುಡಿ ನಮನ ಸಲ್ಲಿಸಿ ಮಾತನಾಡಿದರು. ಶೇಖರ್ ಗೌಡ ಪಾಟೀಲ್, ಕೆ ಕೆ ಪಾಟೀಲ್, ವಿ ಬಿ ಹಿರೇಮಠ, ಸುಮಿತ್ರಾ ಖೈರೆ, ವಿಠಲರಾವ್ ಖೈರೆ, ಶಕುಂತಲಾ ಮುಗಳಿ, ಈರಣ್ಣ ಕಾಡಪ್ಪನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.