ಟಿಕೆಟ್ ಸಿಗಲಿಲ್ಲವೆಮದು ಬೋಗಿಯ ಕೆಳಗೆ ಅವಿತುಕೊಂಡು ಕುಳಿತು ಯುವಕನೊಬ್ಬ 250 ಕಿ.ಮೀ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಟಾರ್ಸಿಯಿಂದ ಪ್ರಯಾಣಿಸಲು ಟಿಕೆಟ್ ಸಿಗದಿರುವ ಕಾರಣ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 250 ಕಿ.ಮೀ ಪ್ರಯಾಣಿಸಿದ್ದಾನೆ. ದಾನಪುರ್ ಎಕ್ಸಪ್ರೆಸ್ ರೈಲಿನಲ್ಲಿ ಇಟಾರ್ಸಿಯಿಂದ ಪ್ರಯಾಣಿಸಲು ಟಿಕೆಟ್ ಸಿಗದ ಕಾರಣ ಬೋಗಿಯ ಕೆಳಗೆ ಅವಿತುಕೊಂಡು ಕುಳಿತಿದ್ದಾನೆ.
ಜಬಲ್‌ಪುರ ರೈಲು ನಿಲ್ದಾಣದ ಬಳಿ ಕ್ಯಾರೇಜ್ ಮತ್ತು ವ್ಯಾಗನ್ ಇಲಾಖೆ ಸಿಬ್ಬಂದಿ ನಡೆಸಿದ ರೋಲಿಂಗ್ ಪರೀಕ್ಷೆ ವೇಳೆ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದು ಪತ್ತೆಯಾಗಿತ್ತು. ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಇಟಾರ್ಸಿಯಲ್ಲಿ ತಾನು ರೈಲು ಹತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿಸಿಟಿವಿ ಅಳವಡಿಸಿ, ಸೆಕ್ಯುರಿಟಿ ನೇಮಿಸಿದರಷ್ಟೇ ಮಹಿಳಾ ಸುರಕ್ಷತೆ ಸಾಧ್ಯವೇ?
ಟಿಕೆಟ್ ಖರೀದಿಸಲು ಹಣವಿಲ್ಲದ ಕಾರಣ, ರೈಲಿನ ಚಕ್ರಗಳ ನಡುವೆ ಪ್ರಯಾಣಿಸುವುದು ಸೂಕ್ತವೆನಿಸಿತು ಎಂದು ತಿಳಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ಕರೆಸಲಾಯಿತು. ಆದರೆ ಆ ವ್ಯಕ್ತಿ ರೈಲಿನ ಕೆಳಗೆ ಹೇಗೆ ಅಡಗಿ ಕುಳಿತನು ಎನ್ನುವ ಕುರಿತು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ಬೋಗಿಯಿಂದ ಕೆಳಗಿನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
