ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದರು. ತಮ್ಮ ನಾಲ್ಕನೇ ಟೆಸ್ಟ್ ಪಂದ್ಯವಾಡುತ್ತಿರುವ 21 ವರ್ಷದ ನಿತೀಶ್ ಮತ್ತೊಬ್ಬ ಯುವ ಆಟಗಾರ ವಾಷಿಂಗ್ಟನ್ ಸುಂದರ್ ಜೊತೆಗೂಡಿ ಟೀಂ ಇಂಡಿಯಾವವನ್ನು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸರ್ – ಗವಾಸ್ಕರ್ ಟ್ರೋಫಿಯಲ್ಲಿ 8ನೇ ವಿಕೆಟ್‌ಗೆ 127 ರನ್‌ಗಳ ಜೊತೆಯಾಟದ ಮೂಲಕ ಫಾಲೋ ಆನ್‌ನಿಂದ ಪಾರು ಮಾಡಿದರು.
176 ಚೆಂಡುಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ 10 ಬೌಂಡರಿ ಒಂದು ಸಿಕ್ಸರ್‌ನೊಂದಿಗೆ ಅಜೇಯ 105 ರನ್ ಬಾರಿಸಿದ್ದಾರೆ. 8ನೇ ಕ್ರಮಾಂಕದ ಆಟಗಾರ ಆಸೀಸ್ ಪಿಚ್‌ನಲ್ಲಿ ಶತಕ ಬಾರಿಸಿರುವುದು ಕೂಡ ದಾಖಲೆಯಾಗಿದೆ. ಈ ಮೊದಲು ಅನಿಲ್ ಕುಂಬ್ಳೆ 2008ರಲ್ಲಿ 87 ರನ್ ಪೇರಿಸಿದ್ದು ಇಲ್ಲಿಯವರೆಗಿನ ಅತ್ಯುತ್ತಮ ವೈಯಕ್ತಿಕ ಮೊತ್ತವಾಗಿತ್ತು.
8ನೇ ವಿಕೆಟ್ ಜೊತೆಯಾಟದಲ್ಲೂ 127 ರನ್ ಕಲೆ ಹಾಕಿರುವುದು ಆಸ್ಟ್ರೇಲಿಯಾದಲ್ಲಿನ ಎರಡನೇ ಅತ್ಯುತ್ತಮ ಮೊತ್ತವಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಹರ್‌ಭಜನ್ ಸಿಂಗ್ 2008ರಲ್ಲಿ 129 ರನ್ ದಾಖಲಿಸಿದ್ದರು.
ಹಾಗೆಯೇ ಆಸೀಸ್ ಪಿಚ್‌ನಲ್ಲಿ ಶತಕ ಬಾರಿಸಿದ ಮೂರನೇ ಯುವ ಆಟಗಾರ ಎಂಬ ಹೆಚ್ಚಳಿಗೆ ನಿತೀಶ್ ಕುಮಾರ್ ರೆಡ್ಡಿ ಅವರದಾಗಿದೆ. ಸಚಿನ್ 1992ರಲ್ಲಿ 18ನೇ ವಯಸ್ಸಿಗೆ ಶತಕ ಬಾರಿಸಿದ್ದರೆ, ರಿಷಬ್ ಪಂತ್ 2019ರಲ್ಲಿ 21 ವರ್ಷ 92 ದಿನಗಳಲ್ಲಿ 100 ದಾಖಲಿಸಿದ್ದರು. ನಿತೀಶ್ 21 ವರ್ಷ 216 ದಿನಗಳಲ್ಲಿ ಆಸ್ಟ್ರೇಲಿಯಾ ಪಿಚ್‌ನಲ್ಲಿ ಶತಕ ದಾಖಲಿಸಿದ್ದಾರೆ.
ಮಂದ ಬೆಂಕಿನ ಕಾರಣದಿಂದ ಮೂರನೇ ದಿನದಾಟ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 116 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಕಲೆ ಹಾಗಿದ್ದು. ಆಸೀಸ್ ಮೊದಲ ಇನಿಂಗ್ಸ್‌ನ 474 ರನ್‌ಗಳನ್ನು ಸರಿಗಟ್ಟಲು 116 ರನ್ ಅಗತ್ಯವಿದೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಫೈನಲ್‌ಗೆ ಭಾರತ – ಪಾಕ್ ಜೊತೆಯಾದರೆ ಎರಡು ಸ್ಥಳ ನಿಗದಿ!
ನಿತೀಶ್ ಅವರೊಂದಿಗೆ ರಕ್ಷಣಾತ್ಮಕ ಆಟವಾಡಿದ ವಾಷಿಂಗ್ಟನ್ ಸುಂದರ್, 162 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 50 ರನ್ ಗಳಿಸಿದರು.
ಎರಡನೇ ದಿನ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಫಾಲೋ ಆನ್ ಭೀತಿಗೆ ಒಳಗಾಗಿದ್ದ ಟೀಂ ಇಂಡಿಯಾ ಇಂದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ಬಹುಬೇಗನೆ ಕಳೆದುಕೊಂಡಿತು.
ಆದರೆ ಈ ಸಂದರ್ಭದಲ್ಲಿ ಅಪಾಯದಿಂದ ಪಾರು ಮಾಡಿದವರು ಆಲ್‌ರೌಂಡರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯ ತಂಡದ ಸ್ಕಾಟ್ ಬೋಲಂಡ್, ಪ್ಯಾಟ್ ಕಮಿನ್ಸ್ ತಲಾ 3 ವಿಕೆಟ್ ಕಬಳಿಸಿದರೆ ಹಾಗೂ ನಥಾನ್ ಲಿಯೋನ್ 2 ವಿಕೆಟ್ ಪಡೆದರು.
