ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಿ 50 ವರ್ಷ ತುಂಬಿದ ನೆನಪಿನಲ್ಲಿ ಈದಿನ.ಕಾಮ್ ‘ನಮ್ಮ ಕರ್ನಾಟಕ ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ಎಂಬ ಶೀರ್ಷಿಕೆಯ ವಿಶೇಷ ಸಂಚಿಕೆಯನ್ನು ಡಿಸೆಂಬರ್ 29ರಂದು ಬಿಡುಗಡೆಗೊಳಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಈದಿನ ತಂಡದ ವತಿಯಿಂದ ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಲೇಖಕರು, ಸಾಹಿತಿಗಳು, ಸಾಮಾಜಿಕ, ರಾಜಕೀಯ ವಿಶ್ಲೇಶಕರನ್ನು ಒಳಗೊಂಡು ಸುಮಾರು 60 ಬರಹಗಾರರ ವಿವಿಧ ಲೇಖನಗಳನ್ನು ವಿಶೇಷ ಸಂಚಿಕೆ ಒಳಗೊಂಡಿದೆ. ಒಟ್ಟಾರೆಯಾಗಿ 50 ವರ್ಷಗಳಲ್ಲಿ ನಡೆದ ಏರು ಪೇರು, ಬೆಳವಣಿಗೆ, ದಲಿತರು, ಮಹಿಳೆಯರು, ಹೋರಾಟ ಇತ್ಯಾದಿ ಬರಹಗಳನ್ನು ಈ ವಿಶೇಷ ಸಂಚಿಕೆಯಲ್ಲಿ ಓದಬಹುದು.
ವಿಶೇಷ ಸಂಚಿಕೆಯನ್ನು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಚಂದ್ರ ಪೂಜಾರಿ ಬಿಡುಗಡೆ ಮಾಡಲಿದ್ದು, ಈದಿನ ನ್ಯೂಸ್ ಆ್ಯಪ್ ಅನ್ನು ಕಳಸಾ ಬಂಡೂರಿ ರೈತ ಹೊರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಬಿಡುಗಡೆಗೊಳಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಬಸವಥ್ವ ಪ್ರಚಾರಕ ಮಲ್ಲೇಸ್ ಹಳಕಟ್ಟಿ ಮಾತಾನಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ವಹಿಸಲಿದ್ದಾರೆ.
ಈ ವರದಿ ಓದಿದ್ದೀರಾ? ಡಿ. 29: ರಾಜ್ಯದ ಹಲವೆಡೆ ಈ ದಿನ.ಕಾಮ್‌ನಿಂದ ‘ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಬಿಡುಗಡೆ
ಇನ್ನು ಮುಖ್ಯ ಅತಿಥಿಗಳಾಗಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ್ ಮತ್ತು ಕವಿವಿ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಗೊರವರ ಇರುವರು. ಮತ್ತು ವಿವಿಧ ಸಮಘಟನೆಗಳಿಂದ ಮುಸ್ತಾಕ್ ಹಾವೇರಿಪೇಟ್, ನಿಂಗಮ್ಮ ಸವಣೂರ, ರವಿ ಬಾಗೋಡಿ, ಎಮ್ ಕೆ ನದಾಫ್ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.