ಟೆಸ್ಟ್ ಕ್ರಿಕೆಟ್‌ನಲ್ಲಿ 13ನೇ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆಯುವ ಮೂಲಕ ಭಾರತ ಕ್ರಿಕೆಟ್ ತಂಡದ ವೇಗಿ ಸ್ಟಾರ್ ಬೌಲರ್ ಜಸ್‌ಪ್ರೀತ್ ಬೂಮ್ರಾ ಹೊಸ ಇತಿಹಾಸವನ್ನು ಬರೆದಿದ್ದಾರೆ. ಈ ಹಿಂದೆ 12 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದ ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 13ನೇ ಬಾರಿಗೆ ಐದು ವಿಕೆಟ್ ಗಳಿಸಿ ಹೊಸ ಇತಿಹಾಸ ಬರೆದ ಗೌರವಕ್ಕೆ ಬೂಮ್ರಾ ಪಾತ್ರರಾಗಿದ್ದಾರೆ. ಬೂಮ್ರಾ ಈವರೆಗೆ 44 ಟೆಸ್ಟ್‌ಗಳಲ್ಲಿ ಒಟ್ಟು 203 ವಿಕೆಟ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ ಅಖ್ತರ್ ತಮ್ಮ ವೃತ್ತಿಜೀವನದಲ್ಲಿ 46 ಪಂದ್ಯಗಳಲ್ಲಿ 178 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಟೆಸ್ಟ್ ಕ್ರಿಕೆಟ್ | ವಿಶ್ವ ದಾಖಲೆ ಬರೆದ ಜಸ್‌ಪ್ರೀತ್ ಬೂಮ್ರಾ, 200 ವಿಕೆಟ್ ಸಾಧನೆ
ಈ ಮೂಲಕ ವಿಶ್ವದ ಕೆಲವು ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂಬ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಚಮಿಂದಾ ವಾಸ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಎಂಬ ಪ್ರಬಲ ಕ್ರಿಕೆಟಿಗರ ದಾಖಲೆಯನ್ನು ಬೂಮ್ರಾ ಹಿಂದೆ ಸರಿಸಿದ್ದಾರೆ. ಅವರಿಬ್ಬರೂ ತಮ್ಮ ವೃತ್ತಿಜೀವನದಲ್ಲಿ 12 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನು ಬೂಮ್ರಾ 13ನೇ ಬಾರಿ ಐದು ವಿಕೆಟ್‌ಗಳನ್ನು ಗೊಂಚಲು ಪಡೆದ ವೆಸ್ಟ್ ಇಂಡೀಸ್‌ನ ಮೈಕೆಲ್ ಹೋಲ್ಡಿಂಗ್ ಮತ್ತು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಜೊತೆ ತನ್ನ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ವೇಗಿ ಬೌಲರ್ ಆದ ಬೂಮ್ರಾ ಎಂಸಿಜಿ ಟೆಸ್ಟ್‌ನಲ್ಲಿ ಅಸಾಧಾರಣ ಬೌಲರ್ ಆಗಿದ್ದು 5-57 ಗಳಿಸಿದರು. ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ 30 ವಿಕೆಟ್‌ಗಳನ್ನು ಪಡೆದರು.
That's the final wicket and another five-wicket haul for the champion bowler 🔥🔥
— BCCI (@BCCI) December 29, 2024
Jasprit Bumrah now has 30 wickets in this series so far!#AUSvIND pic.twitter.com/Rs4QlYcT6U
ಇದನ್ನು ಓದಿದ್ದೀರಾ? IND vs AUS ಟೆಸ್ಟ್ | ಭಾರತವನ್ನು ಫಾಲೋ ಆನ್‌ನಿಂದ ತಪ್ಪಿಸಿದ ಜಡೇಜ, ಬೂಮ್ರಾ, ಆಕಾಶ್
ಸೀರಿಸ್ ಪ್ರಸ್ತುತ 1-1 ಸಮಬಲದಲ್ಲಿದೆ, ಐದನೇ ಮತ್ತು ಅಂತಿಮ ಪಂದ್ಯವು ಜನವರಿ 3ರಿಂದ ಸಿಡ್ನಿಯಲ್ಲಿ ನಡೆಯಲಿದೆ.
ಬೂಮ್ರಾ ಟೆಸ್ಟ್ ಕ್ರಿಕೆಟ್
ಟೆಸ್ಟ್: 44
ವಿಕೆಟ್‌ಗಳು: 203
ಅತ್ಯುತ್ತಮ (ಇನಿಂಗ್ಸ್): 6/27
ಅತ್ಯುತ್ತಮ (ಪಂದ್ಯ): 9/86 5
ವಿಕೆಟ್‌ಗಳು: 13
