ಜಾಕ್ವೆಲಿನ್‌ಗೆ ಜೈಲಿನಿಂದ ಪ್ರೇಮಪತ್ರ ಬರೆದ ಸುಕೇಶ್‌

Date:

Advertisements

200 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌

ಹೋಳಿ ಹಬ್ಬದ ಸಂದರ್ಭದಲ್ಲೂ ನಟಿಗೆ ಪತ್ರ ಬರೆದಿದ್ದ ಆರೋಪಿ

ಬಹುಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಎನ್ನಿಸಿಕೊಂಡು ಜೈಲು ಸೇರಿರುವ ಸುಕೇಶ್‌ ಚಂದ್ರಶೇಖರ್‌ ತನ್ನ ಹುಟ್ಟು ಹಬ್ಬದ ದಿನವಾದ (ಮಾರ್ಚ್‌ 25) ಇಂದು ತನ್ನ ಮಾಜಿ ಪ್ರೇಯಸಿ, ಬಾಲಿವುಡ್‌ನ ಖ್ಯಾತ ನಟಿ ಜಾಕ್ವೇಲಿನ್‌ ಫರ್ನಾಂಡಿಸ್‌ಗೆ ಪ್ರೇಮ ಪತ್ರ ಬರೆದಿದ್ದಾನೆ.

Advertisements

ಹುಟ್ಟು ಹಬ್ಬದ ಹಿನ್ನೆಲೆ ಜಾಕ್ವೆಲಿನ್‌ಗೆ ಪತ್ರ ಬರೆದಿರುವ ಸುಕೇಶ್‌, “ನನ್ನ ಹುಟ್ಟುಹಬ್ಬದ ಈ ದಿನದಂದು ನೀನು ನನ್ನ ಜೊತೆಗಿಲ್ಲ ಎಂಬುದಕ್ಕೆ ಬೇಸರವಾಗುತ್ತಿದೆ. ಏನು ಹೇಳಬೇಕೆಂದು ತೋಚುತ್ತಿಲ್ಲ. ನನ್ನ ಮೇಲೆ ನಿನಗಿರುವ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ಬಗ್ಗೆ ನಿನ್ನ ಮನಸ್ಸಿನಲ್ಲಿ ಯಾವ ಅಭಿಪ್ರಾಯವಿದೆ ಎಂಬುದನ್ನೂ ಬಲ್ಲೆ. ನನಗೆ ನನ್ನ ಪ್ರೀತಿಯಷ್ಟೇ ಬೇಕು. ಎಲ್ಲರೆದರು ನಮ್ಮ ಪ್ರೀತಿಯನ್ನು ನೀನು ಸಾಬೀತುಪಡಿಸುವ ಅಗತ್ಯವಿಲ್ಲ. ನಿನ್ನ ಪ್ರೀತಿ ನನಗೆ ಸಿಕ್ಕ ಅತ್ಯುತ್ತಮ ಕೊಡುಗೆ. ಏನೇ ಬಂದರೂ ನಾನು ನಿನ್ನ ಜೊತೆಗಿರುತ್ತೇನೆ. ನಿನ್ನ ಹೃದಯವನ್ನು ನನಗೆ ನೀಡಿದ್ದಕ್ಕಾಗಿ ಧನ್ಯವಾದ. ಹಾಗೆಯೇ ನನ್ನ ಹುಟ್ಟು ಹಬ್ಬಕ್ಕೆ ಶುಭಕೋರಿ ಪತ್ರ ಬರೆದ ಎಲ್ಲ ಸ್ನೇಹಿತರು ಮತ್ತು ಕುಟುಂಬದವರಿಗೆ ಧನ್ಯವಾದ” ಎಂದಿದ್ದಾನೆ.

ಈ ಹಿಂದೆ ಹೋಳಿ ಹಬ್ಬದ ಸಂದರ್ಭದಲ್ಲೂ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪತ್ರ ಬರೆದಿದ್ದ ಸುಕೇಶ್‌, “ನಿನ್ನ ಬದುಕಿನಲ್ಲಿ ಮರೆಯಾದ ರಂಗನ್ನು ನಾನು ಮರಳಿ ತರುತ್ತೇನೆ. ನಿನಗಾಗಿ ಯಾವ ಹಂತಕ್ಕೆ ಬೇಕಿದ್ದರೂ ಹೋಗಲು ತಯಾರಿದ್ದೇನೆ” ಎಂದು ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದ.

ಈ ಸುದ್ದಿ ಓದಿದ್ದೀರಾ? ರಾಹುಲ್‌ ಗಾಂಧಿ ಅನರ್ಹ | ವಿನಾಶಕಾಲೇ ವಿಪರೀತ ಬುದ್ಧಿ ಎಂದ ಕವಿರಾಜ್‌

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಉದ್ಯಮಿಯೊಬ್ಬರ ಪತ್ನಿಗೆ ತಾನು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಸುಕೇಶ್‌, ಉದ್ಯಮಿಯನ್ನು ಜೈಲಿನಿಂದ ಖುಲಾಸೆಗೊಳಿಸುವುದಾಗಿ ನಂಬಿಸಿ, ಆತನ ಪತ್ನಿಯಿಂದ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಪಡೆದು ವಂಚಿಸಿದ್ದ ಎನ್ನಲಾಗಿದೆ. ಜೊತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪವೂ ಈತನ ಮೇಲಿದೆ.

ಸುಕೇಶ್‌ ಜೊತೆಗೆ ನಂಟು ಹೊಂದಿದ್ದ ಜಾಕ್ವೆಲಿನ್‌, ಅಕ್ರಮದ ಹಣ ಎಂದು ತಿಳಿದ ಮೇಲೂ ಆತನಿಂದ ದುಬಾರಿ ಉಡಗೊರೆಗಳನ್ನು ಪಡೆದುಕೊಂಡಿದ್ದರು ಎಂದು ತನಿಖಾಧಿಕಾರಿಗಳು ತಮ್ಮ ವರದಿಯಲ್ಲಿ ಬಹಿರಂಗ ಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ದೆಹಲಿ ಪೊಲೀಸರು ಹಲವು ಬಾರಿ ನಟಿಯ ವಿಚಾರಣೆ ನಡೆಸಿದ್ದಾರೆ. ಇತ್ತೀಚೆಗೆ ಪಟಿಯಾಲಾ ಹೌಸ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಜಾಕ್ವೆಲಿನ್‌, “ಸುಕೇಶ್‌ನನ್ನು ನಂಬಿ ನಾನು ಹಾಳಾದೆ. ಆತ ನನ್ನ ವೃತ್ತಿ ಬದುಕನ್ನೇ ನಾಶ ಮಾಡಿದ” ಎಂದು ಅಳಲು ತೋಡಿಕೊಂಡಿದ್ದರು.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X